ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಚೆನ್ನೈ ಮೂಲದ ನಾಗರಾಜನ್ ಆದಿತ್ಯರವರು ತಮ್ಮ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‍‍ನಲ್ಲಿ ತಮ್ಮ ಮೊದಲ ರಸ್ತೆ ಪ್ರಯಾಣವನ್ನು ಕೈಗೊಂಡಿದ್ದರು. 40 ದಿನಗಳಲ್ಲಿ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸುಮಾರು 10,000 ಕಿ.ಮೀಗಳಷ್ಟು ದೂರ ಪ್ರಯಾಣಿಸಿದ್ದಾರೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಜೂನ್ 4ರಂದು ತಮ್ಮ ಊರಾದ ಚೆನ್ನೈನಲ್ಲಿರುವ ಅಡ್ಯಾರ್‍‍ನಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿದ ಆದಿತ್ಯರವರು 15 ರಾಜ್ಯಗಳ ಮೂಲಕ (ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಚಂಡೀಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣ) ಕಾಶ್ಮೀರದಲ್ಲಿರುವ ಲಡಾಖ್ ತಲುಪಿ, ಜುಲೈ 13ರಂದು ವಾಪಸ್ ಆದರು.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಒಂದು ತಿಂಗಳಿಗೂ ಹೆಚ್ಚು ಅವಧಿಯ ಈ ಪ್ರಯಾಣದಲ್ಲಿ ಆದಿತ್ಯ ಹಾಗೂ ಅವರ ಸ್ಕೂಟರ್ ಹಲವಾರು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದೆ. ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್‍‍ನ ತಾಪಮಾನ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಧೂಳಿನ ಚಂಡಮಾರುತವನ್ನು ಎದುರಿಸಿದ್ದಾರೆ. ಇದರ ಜೊತೆಗೆ ಅತಿಯಾದ ಚಳಿಯನ್ನು ಸಹ ಎದುರಿಸಿದ್ದಾರೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಲಡಾಖ್‌ನ ಲೇಹ್‌ನ ಸುತ್ತಲೂ ಹಿಮದಿಂದ ಆವೃತವಾಗಿರುವ ರಸ್ತೆಗಳ ಮೂಲಕ ಪ್ರಯಾಣಿಸಿದ್ದಾರೆ. ಲೇಹ್‍‍ನಲ್ಲಿನ ತಾಪಮಾನವು -10 ಡಿಗ್ರಿಗಳಾಗಿತ್ತು. ತನ್ನ ಪ್ರಯಾಣದುದ್ದಕ್ಕೂ ಆದಿತ್ಯರವರು ಹೆದ್ದಾರಿಯಲ್ಲಿ 80-90 ಕಿ.ಮೀ ವೇಗದಲ್ಲಿ ಚಲಿಸಿದರೆ, ಗುಡ್ಡಗಾಡು ಪ್ರದೇಶಗಳಲ್ಲಿ 50 ಕಿ.ಮೀ ವೇಗದಲ್ಲಿ ಚಲಿಸಿದ್ದಾರೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ನಾಗರಾಜನ್ ಆದಿತ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಐಐಟಿ ಮದ್ರಾಸ್‌ನಲ್ಲಿ ಸಂಶೋಧನಾ ಸಹಾಯಕರಾಗಿದ್ದಾರೆ. ಅವರು 2018ರ ಫೆಬ್ರವರಿಯಲ್ಲಿ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಅನ್ನು ಖರೀದಿಸಿದ್ದರು. ಈ ಸ್ಕೂಟರ್‍‍ನಲ್ಲಿ ಈ ವರ್ಷದ ಜೂನ್ 3ರವರೆಗೂ ಸುಮಾರು 8000 ಕಿ.ಮೀ ಮಾತ್ರ ಪ್ರಯಾಣಿಸಿದ್ದರು.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಅವರ ರಸ್ತೆ ಪ್ರಯಾಣದ ನಂತರ ಅವರ ಸ್ಕೂಟರಿನ ಸ್ಪೀಡೊಮೀಟರ್ ಹಾಗೂ ಅವರು ವಿಭಿನ್ನ ಅನುಭವವನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಆದಿತ್ಯರವರು, ನಾನು ನನ್ನ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಭಾರತದ ರಸ್ತೆ ಪ್ರವಾಸದ ಮೂಲಕ ನೋಡಲು ಬಯಸಿದ್ದೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ನನ್ನ ಹಿತೈಷಿಗಳು ನನ್ನ ಪ್ರವಾಸದ ಬಗ್ಗೆ ಕಾಳಜಿ ವಹಿಸಿದ್ದರು. ಆದರೆ ಈ ಪ್ರವಾಸವನ್ನು ಮಾಡಲೇ ಬೇಕೆಂದು ತೀರ್ಮಾನಿಸಿದ್ದೆ. ಈ ಪ್ರವಾಸದ ನಂತರ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಬಲವಾದ ಹಾಗೂ ವಿಶ್ವಾಸಾರ್ಹವಾದ ಜೊತೆಗಾರ ಎಂದು ಸಾಬೀತಾಯಿತು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಈ 40 ದಿನಗಳ ಅವಧಿಯಲ್ಲಿ, ನನ್ನ ಸ್ಕೂಟರ್ ಅನ್ನು ಎರಡು ಬಾರಿ ಮಾತ್ರ ಸರ್ವಿಸ್ ಮಾಡಿಸಲಾಯಿತು. ಯಾವುದೇ ಪಂಕ್ಚರ್ ಅಥವಾ ಯಾವುದೇ ಅಹಿತಕರ ಘಟನೆಯು ನಡೆಯಲಿಲ್ಲ. ಎಪ್ರಿಲಿಯಾ ಎಸ್ಆರ್ 150 ಬಲಶಾಲಿಯಾದ ಸ್ಕೂಟರ್ ಮಾತ್ರವಲ್ಲದೇ ತನ್ನ ಲುಕ್‍‍ನಿಂದ ಜನರ ಗಮನವನ್ನು ಸೆಳೆಯುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಕಾರ್ಗಿಲ್‍‍ನಲ್ಲಿರುವ ಜಾಂಗ್ಲಾ ಎಂಬ ಸಣ್ಣ ಊರಿನಲ್ಲಿ ಸ್ಥಳೀಯರು 150 ಸಿಸಿಯ ಸ್ಕೂಟರ್ ಕಠಿಣವಾದ ರಸ್ತೆಗಳ ಮೂಲಕ ಸಂಚರಿಸಿರುವುದನ್ನು ನೋಡಿ ಪ್ರಭಾವಿತರಾದರು. ಅಲ್ಲಿನ ಜನರು ಈ ಮೊದಲು ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್ ಅನ್ನು ನೋಡಿರಲಿಲ್ಲ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಇದು ನಾನು ಕೈಗೊಂಡ ಮೊದಲ ಹಾಗೂ ಸುದೀರ್ಘವಾದ ಪ್ರವಾಸವಾಗಿದೆ. ಇದೊಂದು ಅದ್ಭುತ ಅನುಭವವಾಗಿದೆ. ಬೆಳಿಗ್ಗೆ ಪ್ರಾರಂಭಿಸುತ್ತಿದ್ದ ಪ್ರಯಾಣದಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡಿ, ಹಲವು ಹೊಸ ಸಂಸ್ಕೃತಿಗಳನ್ನು ನೋಡಿದ್ದೇನೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಈ ಪ್ರವಾಸದ ಉದ್ದಕ್ಕೂ ಒಳ್ಳೆಯ ಆತಿಥ್ಯವನ್ನು ಪಡೆದಿದ್ದೇನೆ. ಈ ಪ್ರವಾಸವು ಹೆಚ್ಚಿನ ರಸ್ತೆ ಪ್ರವಾಸಗಳನ್ನು ಕೈಗೊಳ್ಳಲು ನನಗೆ ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ಭೂತಾನ್ ದೇಶಕ್ಕೆ ಪ್ರವಾಸವನ್ನು ಕೈಗೊಳ್ಳಬೇಕೆಂದಿದ್ದೇನೆ ಎಂದು ಹೇಳಿದರು.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಎಪ್ರಿಲಿಯಾ ಸರಣಿಯ ಸ್ಕೂಟರ್‍‍ಗಳು ದೇಶಾದ್ಯಂತವಿರುವ ಎಲ್ಲಾ ಪಿಯಾಜಿಯೊ ಡೀಲರ್‌ ಹಾಗೂ ಮೊಟೊಪ್ಲೆಕ್ಸ್‌ಗಳಲ್ಲಿ ಮಾರಾಟಕ್ಕಿವೆ. ಪಿಯಾಜಿಯೊ ತನ್ನ ಪ್ರೀಮಿಯಂ ಡೀಲರ್‍‍ಶಿಪ್ ನೆಟ್‍‍ವರ್ಕ್ ಅನ್ನು ವಿಸ್ತರಿಸುತ್ತಿದ್ದು, ಪ್ರೀಮಿಯಂ ಇಟಾಲಿಯನ್ ಅನುಭವವನ್ನು ತಮ್ಮ ಸಂಭಾವ್ಯ ಗ್ರಾಹಕರ ಮನೆ ಬಾಗಿಲಿಗೆ ತರಲು 2019ರ ವೇಳೆಗೆ ಸುಮಾರು 300 ಔ‍‍ಟ್‍‍‍ಲೆಟ್‍‍‍ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಇನ್ನು ಎಪ್ರಿಲಿಯಾ ಸ್ಕೂಟರ್ ಬಗ್ಗೆ ಹೇಳುವುದಾದರೆ, ಎಪ್ರಿಲಿಯಾ ಸ್ಕೂಟರ್ ಅನ್ನು ರೇಸಿಂಗ್‌‍‍ಗಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಈ ಸ್ಕೂಟರ್ ಪಿಯಾಜಿಯೊ ಗ್ರೂಪ್‌ನ ಪ್ರಮುಖ ಸ್ಪೋರ್ಟಿ ವಾಹನವಾಗಿದೆ. ಎಪ್ರಿಲಿಯಾ ವಾಹನಗಳು ರೋಡ್ ರೇಸಿಂಗ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 294 ಗ್ರ್ಯಾಂಡ್ ಪ್ರಿಕ್ಸ್ ರೇಸ್‌ಗಳನ್ನು ಗೆದ್ದಿವೆ.

ಸ್ಕೂಟರ್‍‍ನಲ್ಲೇ 40 ದಿನಗಳ ಕಾಲ 15 ರಾಜ್ಯಗಳನ್ನ ಸುತ್ತಿದ ಎಂಜಿನಿಯರ್..!

ಎಪ್ರಿಲಿಯಾ ಬೈಕ್, ಮೋಟಾರ್‌ಸೈಕಲ್ ಸ್ಪರ್ಧೆಗಳ ಇತಿಹಾಸದಲ್ಲಿ ಯಾವುದೇ ಯುರೋಪಿಯನ್ ಕಂಪನಿಗಳಿಗಿಂತ ಹೆಚ್ಚಿನ ಗೆಲುವುಗಳ ದಾಖಲೆಯನ್ನು ಹೊಂದಿದೆ. ರೋಡ್ ರೇಸಿಂಗ್‍‍ನಲ್ಲಿ 54 ವಿಶ್ವ ಪ್ರಶಸ್ತಿ, ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 38, ಸೂಪರ್‌ಬೈಕ್‌ನಲ್ಲಿ 7 ಹಾಗೂ ಆಫ್ ರೋಡ್ ವಿಭಾಗಗಳಲ್ಲಿ 9 ಪ್ರಶಸ್ತಿಗಳನ್ನು ಗೆದ್ದಿದೆ.

Most Read Articles

Kannada
English summary
24-year-old engineer completes his first road trip on Aprilia SR 150, covering 10,000 km in 40 days - Read in Kannada
Story first published: Thursday, October 24, 2019, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X