ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಮಹೀಂದ್ರಾ ಟೂ ವ್ಹೀಲರ್ಸ್ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ಮೊಜೊ ಬೈಕ್ ಅನ್ನು ಮತ್ತೆ ಬಿಡುಗಡೆ ಮಾದುವ ಯೋಜನೆಯೈಲಿದ್ದು, ಈ ಬಾರಿ ಬಿಡುಗಡೆಯಾಗಲಿರುವ ಮಹೀಂದ್ರಾ ಮೊಜೊ ಬೈಕ್ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಹೊತ್ತು ಬರಲಿದೆ. ಈ ಡ್ಯುಯಲ್ ಚಾನಲ್ ಎಬಿಎಸ್ ಹೊಂದಿರುವ ಮಹೀಂದ್ರಾ ಮೊಜೊ ಬೈಕ್ ಈಗಾಗಲೇ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸುತ್ತಿದ್ದು, ಮೊದಲನೆಯ ಬಾರಿ ಈ ಬೈಕಿನ ಚಿತ್ರಗಳು ಬಹಿರಂಗಗೊಂಡಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಮಹೀಂದ್ರಾ ಟೂ ವ್ಹೀಲರ್ಸ್ ದೇಶಿಯ ಮಾರುಕಟ್ಟೆಯಲ್ಲಿ 300ಸಿಸಿ ಸಾಮರ್ಥ್ಯದ ವಾಹನಗಳನ್ನು ಪ್ರಾರಂಭಿಸುವ ಮುನ್ನವೇ ಮೊಜೊ ಬೈಕ್ ಅನ್ನು ಅನಾವರಣಗೊಳಿಸಿತ್ತು. ಅದಾಗ್ಯೂ ಮಹೀಂದ್ರಾ ಇಂದಿಗೂ ಸಹ ತಮ್ಮ ಮೊಜೊ ಬೈಕ್ ಅನ್ನು ಪರೀಕ್ಷಿಸುವಾಗ, ಈ ಸಮಯದಲ್ಲಿ ಬೇರೆ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು 300 ಸಾಮರ್ಥ್ಯದ ವಾಹನಗಳನ್ನು ಬಿಡುಗಡೆ ಮಾಡಿ ಮುನ್ನುಗ್ಗುತ್ತಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಮಹೀಂದ್ರಾ ಮೊಜೊ ಬೈಕಿನ ಪ್ರೊಡಕ್ಷನ್-ಸ್ಪೆಕ್ ಮಾದರಿಯನ್ನು 2014 ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಪಡಿಸಲಾಯಿತು ಮತ್ತು ಅಂತಿಮವಾಗಿ ಇದನ್ನು 2015 ರಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಗೊಂಡಾಗಿನಿಂಡಲೂ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾದ ಕಾರಣ ಕೆಲ ದಿನಗಳ ಕಾಲ ಈ ಬೈಕಿನ ಮಾರಾಟವನ್ನು ನಿಲ್ಲಿಸಬೇಕಾಯಿತು.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಅದಾಗ್ಯೂ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ಮೋಜೊ ಬೈಕಿಗೆ ಕೇಂದ್ರ ಸರ್ಕಾರದ ಆದೇಶದ ಅನುಸಾರ 125ಸಿಸಿ ಮೇಲ್ಪಟ್ಟ ವಾಹನಗಳು ಕಡ್ಡಾಯವಾಗಿ ಎಬಿಎಸ್ ಅನ್ನು ಹೊಂದಿರಲೇಬೇಕಾಗಿದ್ದು, ಮಹೀಂದ್ರಾ ಸಂಸ್ಥೆಯು ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೊಜೊ ಬೈಕ್‍ಗೆ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಸ್ಪೈ ಚಿತ್ರಗಳಲ್ಲಿ ಕಾಣಿಸಿಕೊಂಡ ಮಹೀಂದ್ರಾ ಮೊಜೊ ಬೈಕ್ ತನ್ನ ಹಳೆಯ ಯುಟಿ ವೇರಿಯೆಂಟ್ ಅನ್ನು ಆಧರಿಸಲಿದ್ದು, ಈ ಬೈಕ್ ಈ ಬಾರಿ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಸಿಂಗಲ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಈ ಬಾರಿ ಕಾರ್ಬುರೆಟರ್‍‍ನ ಬದಲಾಗಿ ಫ್ಯುಯೆಲ್ ಇಂಜೆಕ್ಷನ್ ಅನ್ನು ನೀಡಲಾಗುತ್ತದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಮಹೀಂದ್ರಾ ಟೂ ವ್ಹೀಲರ್ ಲಿಮಿಟೆಡ್‍ನ ಆರ್ & ಡಿ ವಿಭಾಗವು, ಈ ಮೋಟಾರ್‍‍‍‍ಸೈಕಲ್ ಯೋಜನೆಯನ್ನು ಕೈಬಿಟ್ಟು ತನ್ನ ಗಮನವನ್ನು ಕ್ಲಾಸಿಕ್ ಲೆಜೆಂಡ್ ಬೈಕುಗಳನ್ನು ಅಭಿವೃದ್ಧಿಪಡಿಸುವತ್ತಾ ಹರಿಸಿದೆ. ಜಾವಾದ ಹೊಸ ಮೋಟಾರ್‍‍‍‍ಸೈಕಲ್‍ಗಳು ಬೇಸಿಕ್ ಎಂಜಿನ್ ಆರ್ಕಿಟೆಕ್ಚರ್ ಸೇರಿ ಬಹುತೇಕ ಭಾಗಗಳನ್ನು ಮೊಜೊ ಮೋಟಾರ್‍‍‍‍ಸೈಕಲ್‍ನಿಂದ ಪಡೆದಿವೆ. ಈ ಚಿತ್ರದಲ್ಲಿ ತೋರಿಸಿರುವಂತೆ ಮುಂಭಾಗದಲ್ಲಿ ಎಬಿಎಸ್ ರಿಂಗ್ ಇದ್ದು ಇದರ ಜೊತೆಗೆ ಎಬಿಎಸ್ ವಾರ್ನಿಂಗ್ ಲೈಟ್‍ಗಳನ್ನು ಅಳವಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಮೊಜೊ ಬೈಕಿನಲ್ಲಿ ಎಬಿಎಸ್ ಅಭಿವೃದ್ದಿ ಪಡಿಸುತ್ತಿರುವ ಕಾರ್ಯವು ಹಲವಾರು ದಿನಗಳಿಂದ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಸೆಗ್ಮೆಂಟಿನ ಬೈಕುಗಳಲ್ಲಿ ಕಡ್ಡಾಯಗೊಳಿಸಲಾಗಿರುವ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಮಹೀಂದ್ರಾದ ಈ ಬೈಕಿನಲ್ಲೂ ಅಳವಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಹೊಸ 2019 ಮಹೀಂದ್ರಾ ಮೊಜೊ ನಂತರ ಎಬಿಎಸ್ ಸೇರ್ಪಡೆಯೊಂದಿಗೆ ಎರಡು ಹಳೆಯ ರೂಪಾಂತರಗಳ ನಡುವೆ ಪರಿಪೂರ್ಣವಾದ ಮಿಶ್ರಣದಂತೆ ತೋರುತ್ತದೆ. ಈ ರೀತಿಯಾಗಿ, ಸಲಕರಣೆಗಳ ವಿಷಯದಲ್ಲಿ ಅತ್ಯುತ್ತಮವಾದವುಗಳನ್ನು ಒದಗಿಸುವಾಗ ಮಹೀಂದ್ರಾ ಇನ್ನೂ ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿನ್ಯಾಸದ ವಿಷಯದಲ್ಲಿ, ಹೊಸ ಮಹೀಂದ್ರಾ ಮೊಜೊ ಹಳೆಯ ಮಾದರಿಯಂತೆಯೇ ಉಳಿದಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಎಂಜಿನ್ ಸಾಮರ್ಥ್ಯ

ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಮೊಜೊ ಬೈಕ್ 295ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 26.8 ಬಿಹೆಚ್‍ಪಿ ಮತು 30ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಸುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿಎಸ್ ಹೊತ್ತು ಬರಲಿದೆ ಮಹೀಂದ್ರಾ ಮೊಜೊ ಬೈಕ್

ಕನ್ನಡ ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಮೋಜೊ ಯುಟಿ ಬೈಕ್ ರೂ. 1.49 ಲಕ್ಷ ಮತ್ತು ಎಕ್ಸ್ಟಿ ಬೈಕ್ ರೂ. 1.70 ಲಕ್ಷಕ್ಕೆ ಮಾರಟವಾಗುತ್ತಿತ್ತು. ಇದೀಗ ಸಂಸ್ಥೆಯು ಎಕ್ಸ್ಟಿ ಮಾಡಲ್‍ಗೆ ಎಬಿಎಸ್ ಅನ್ನು ಅಳವಡಿಸಬೇಕಾಗಿದ್ದು, ಎಬಿಎಸ್ ಅನ್ನು ಅಳವಡಿಸಿದ್ದೇ ಆದಲ್ಲಿ ಮಾರುಕಟ್ಟೆಯಲ್ಲಿರುವ 2019 ಬಜಾಜ್ ಡಾಮಿನಾರ್ ಬೈಕ್‍ಗಿಂತಲೂ ಬೆಲೆಯಲ್ಲಿ ಅಧಿಕವಾಗಿರಲಿದೆ. ಅಂದರೆ ಸಧ್ಯಕ್ಕೆ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಹೊತ್ತು ಬರಲಿರುವ ಬೈಕ್ ಸುಮಾರು 1.70 ಲಕ್ಷದ ಬೆಲೆಯನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.

Image Courtesy: Instagram

Most Read Articles

Kannada
English summary
2019 Mahindra Mojo ABS Images & Details Leaked Ahead Of Its Launch. Read In Kannada
Story first published: Thursday, June 20, 2019, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X