ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಟಿವಿ‍ಎಸ್ ಕಂಪನಿಯು ಇತ್ತೀಚಿಗಷ್ಟೆ ತನ್ನ ಹೊಸ ಆವೃತ್ತಿಯ ಅಪಾಚೆ ಆರ್‍ಆರ್ 310 ರ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈಗಿರುವ ಬೈಕ್ ಅನ್ನು ಡಿಸೆಂಬರ್ 2017ರಲ್ಲಿ ಬಿಡುಗಡೆಗೊಳಿಸಲಾಗಿತ್ತು, ಇದೇ ಮೊದಲ ಬಾರಿಗೆ ಅಪ್ ಡೇಟ್ ಮಾಡಲಾಗಿದೆ.

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಈಗ ಹೊಸ ಬೈಕಿನಲ್ಲಿ ಕೆಲವು ವಿನ್ಯಾಸಗಳನ್ನು ಹಾಗೂ ಕೆಲವು ಪರ್ಫಾಮೆನ್ಸ್ ಗಳನ್ನು ಹೆಚ್ಚುವರಿಯಾಗಿ ಕಾಣಬಹುದು. ಈ ಮೋಟಾರ್‍‍ಸೈಕಲ್ ಅನ್ನು 2019ರ ಮೇ 28 ರಂದು ಅನಾವರಣಗೊಳಿಸಲಾಗುತ್ತಿದೆ. ಕಂಪನಿಯು ಟೀಸರ್ ವೀಡಿಯೊವನ್ನು ಬಿಡುಗಡೆಗೊಳಿಸಿದ್ದರೂ ಸಹ ಅದರಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ಆದರೆ ಅದರಲ್ಲಿರುವ ಟ್ಯಾಗ್ ಲೈನ್‍‍ಗಳು ಕ್ರಾಫ್ಟೆಡ್ ಟು ಬಿ ಇನ್‍‍ವಿಸಿಬಲ್ ಮತ್ತು ಕಮಿಂಗ್ ಸೂನ್ ಎಂಬುದಾಗಿ ತೋರಿಸುತ್ತಿವೆ.

ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ. ಹೊಸ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ಅನ್ನು, ಅನೇಕ ಬದಲಾವಣೆಗಳನ್ನು ಮಾಡಿದ ನಂತರ ಬಿಡುಗಡೆಗೊಳಿಸಲಾಗುತ್ತಿದೆ. ಆ ಬದಲಾವಣೆಗಳೆಂದರೆ ಚೈನ್ ನಲ್ಲಿನ ತೊಂದರೆಗಳನ್ನು, ವೈಬ್ರೇಷನ್‍‍‍ಗಳನ್ನು ಕಡಿಮೆ ಮಾಡುವುದು ಮತ್ತು ಈಗಿರುವ ಮಾದರಿಯ ಬೈಕುಗಳಲ್ಲಿ ಟಾಪ್ ಸ್ಪೀಡನ್ನು ಹೆಚ್ಚಿಸುವುದು.

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಇತ್ತೀಚಿಗೆ ಕೊಲಂಬಿಯಾದ ಆಟೋ ಶೋದಲ್ಲಿ ಅನಾವರಣಗೊಳಿಸಲಾದ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕಿನಿಂದ ಕೆಲವು ಅಂಶಗಳನ್ನು ಪಡೆಯಲಾಗಿದೆ. ಆಟೋ ಶೋದಲ್ಲಿ ಅನಾವರಣಗೊಳಿಸಲಾದ ಬೈಕ್ ಅನೇಕ ಬ್ರಾಂಡ್ ಸ್ಟಿಕ್ಕರ್‍‍ಗಳನ್ನು ಹೊಂದಿತ್ತು, ನೋಡಿದ ತಕ್ಷಣ ಸ್ಪೋರ್ಟ್ಸ್ ಬೈಕಿನಂತೆ ಭಾಸವಾಗುತ್ತಿತ್ತು.

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಈ ರೀತಿಯ ಸ್ಟಿಕ್ಕರ್‍‍ಗಳನ್ನು ಹೊಸ ಅಪಾಚೆ ಆರ್‍ಆರ್ 310 ಬೈಕಿನಲ್ಲೂ ಕಾಣಲಾಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಈಗಿರುವ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿ 312.2 ಸಿಸಿಯ ಸಿಂಗಲ್ ಸಿಲಿಂಡರ್‍‍ನ ಡಿ‍ಒ‍‍ಹೆಚ್‍‍ಸಿ ಎಂಜಿನ್ ಇದ್ದು, ಅದು 34 ಹೆಚ್‍‍ಪಿಯನ್ನು 9,700 ಆರ್‍‍ಪಿ‍ಎಂನಲ್ಲಿ ಮತ್ತು 27.3 ಎನ್‍ಎಂ ಟಾರ್ಕ್‍ಅನ್ನು 7,700 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಈಗಿರುವ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಶಾರ್ಪ್ ಆದ, ಎಡ್ಜ್ ಡಿಸೈನ್, ಎತ್ತರದ ವಿಂಡ್‍‍ಸ್ಕ್ರೀನ್ ಮತ್ತು ಡ್ಯುಯಲ್ ಎಲ್‍ಇ‍‍ಡಿ ಪ್ರಾಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಶಾರ್ಕ್ ಫಿನ್ ಸ್ಟೈಲ್‍‍ನ ಟೇಲ್ ಲ್ಯಾಂಪ್‍‍ಗಳಿವೆ. ಈ ಮೋಟಾರ್‍‍ಬೈಕಿನಲ್ಲಿ ಸ್ಪ್ಲಿಟ್ ರೇರ್ ಸೀಟುಗಳು ಮತ್ತು ಹ್ಯಾಂಡಲ್‍‍ಬಾರ್‍‍ಗಳ ಮೇಲೆ ಕ್ಲಿಪ್‍‍ಗಳನ್ನು ಅಳವಡಿಸಲಾಗಿದೆ. ಈ ಬೈಕ್ ರೇಸಿಂಗ್ ರೆಡ್ ಮತ್ತು ರೇಸಿಂಗ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.

MOST READ: ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಅಪ್‍‍ಗ್ರೇಡ್ ಆಗಿರುವ 2019ರ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ಅತಿ ಶೀಘ್ರದಲ್ಲಿಯೆ ಮಾರುಕಟ್ಟೆಗೆ ಬರಲಿದ್ದು, ಈಗಿರುವ ಬೈಕಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಈಗಿರುವ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.13 ಲಕ್ಷಗಳಾಗಿದೆ.

ಮೇ 28ರಂದು ಅನಾವರಣಗೊಳ್ಳಲಿದೆ 2019ರ ಟಿವಿ‍ಎಸ್ ಅಪಾಚೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೊಲಂಬಿಯಾದ ಆಟೋ ಶೋದಲ್ಲಿ ಅನಾವರಣಗೊಳಿಸಲಾದ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕ್ ಬೇರೆಲ್ಲಾ ಬೈಕುಗಳಿಗಿಂತ ಆಕರ್ಷಕವಾಗಿ ಹಾಗೂ ಉತ್ತಮವಾಗಿ ಕಾಣುತ್ತಿತ್ತು. ಟಿವಿ‍ಎಸ್ ಕಂಪನಿಯು ಈ ಆವೃತ್ತಿಯನ್ನೇ, ಎಲ್ಲಾ ಬ್ರಾಂಡ್ ಸ್ಟಿಕ್ಕರ್‍‍ಗಳೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಪರ್ಫಾರ್ಮೆನ್ಸ್ ನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

Kannada
English summary
2019 TVS Apache RR 310 Unveiling On 28 May — May Feature Performance Upgrades - Read in kannada
Story first published: Friday, May 17, 2019, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X