ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಸ್ಕೂಟರ್ ಮಾರಾಟದಲ್ಲಿ ಹೋಂಡಾ ನಂತರ ಎರಡನೇ ಸ್ಥಾನದಲ್ಲಿರುವ ಟಿವಿಎಸ್ ಸಂಸ್ಥೆಯು ತನ್ನ ಜನಪ್ರಿಯ ಜೂಪಿಟರ್ ಜೆಡ್ಎಕ್ಸ್ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸುರಕ್ಷಾ ನಿಯಮಗಳಿಗಳಿಗೆ ಅನುಗುಣವಾಗಿ ಜೂಪಿಟರ್ ಜೆಡ್ಎಕ್ಸ್ ಮಾರುಕಟ್ಟೆ ಪ್ರವೇಶಿಸಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ದೇಶಾದ್ಯಂತ ಹೊಸ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಳೆದ ಏಪ್ರಿಲ್ 1ರಿಂದಲೇ ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳಲ್ಲಿ ಕೆಲವು ಕಡ್ಡಾಯ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಇದರಲ್ಲಿ 150ಸಿಸಿ ಮೇಲ್ಪಟ್ಟ ವಾಹನಗಳಲ್ಲಿ ಎಬಿಎಸ್ ಮತ್ತು 125ಸಿಸಿ ಮೇಲ್ಪಟ್ಟ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಕಡ್ಡಾಯಗೊಳಿಸಲಾಗಿದ್ದು, ಇದೀಗ ಜೂಪಿಟರ್ ಜೆಡ್ಎಕ್ಸ್ ಕೂಡಾ ಹೊಸ ನಿಯಮಗಳಿಗೆ ಅನುಸಾರವಾಗಿಯೇ ಬಿಡುಗಡೆಗೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯೆಂತೆ ಜೂಪಿಟರ್ ಜೆಡ್ಎಕ್ಸ್ ಮಾದರಿಯನ್ನು ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡ್ರಮ್ ಬ್ರೇಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 56,093 ಬೆಲೆ ಹೊಂದಿದ್ದರೆ ಡಿಸ್ಕ್ ಬ್ರೇಕ್ ಮಾದರಿಯು ರೂ.58,645 ಬೆಲೆ ಪಡೆದುಕೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಹೊಸ ಸ್ಕೂಟರ್ ಆವೃತ್ತಿಯಲ್ಲಿ ಟಿವಿಎಸ್ ಸಂಸ್ಥೆಯು ತನ್ನದೇ ವಿಶೇಷ ತಂತ್ರಜ್ಞಾನ ಹೊಂದಿರುವ ಕಂಬೈನ್ಡ್ ಬ್ರೇಕಿಂಗ್ ತಂತ್ರಜ್ಞಾನವನ್ನು ಎರಡು ಮಾದರಿಯಲ್ಲೂ ಅಳವಡಿಸಲಾಗಿದ್ದು, ಇದು ಟಿವಿಎಸ್ ನಿರ್ಮಾಣದ ಎಲ್ಲ ಸ್ಕೂಟರ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಇನ್ನು 2019 ಜೂಪಿಟರ್ ಜೆಡ್ಎಕ್ಸ್ ಮಾದರಿಯಲ್ಲಿ ಹೊಸದಾಗಿ ಎಲ್ಇಡಿ ಹೆಡ್‌ಲೈಟ್, ಡಿಜಿಟಲ್ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಹೊಸದಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾಕ್ ಸಸ್ಷೆಷನ್ ನೀಡಲಾಗಿದೆ. ಈ ಹೊಸ ಸೌಲಭ್ಯಗಳನ್ನು ಈ ಹಿಂದೆಯೇ ಜೂಪಿಟರ್ ಗ್ರ್ಯಾಂಡೆ ಆವೃತ್ತಿಯಲ್ಲಿ ಮಾತ್ರವೇ ನೀಡುತ್ತಿದ್ದ ಟಿವಿಎಸ್ ಸಂಸ್ಥೆಯು ಇದೀಗ ಗ್ರ್ಯಾಂಡೆ ಆವೃತ್ತಿಯನ್ನು ಸ್ಥಗಿತಗೊಳಿಸಿ ಜೂಪಿಟರ್ ಜೆಡ್ಎಕ್ಸ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಆದ್ರೆ ಜೂಪಿಟರ್ ಗ್ರ್ಯಾಂಡೆ ಆವೃತ್ತಿಯಲ್ಲಿ ನೀಡಲಾಗುತ್ತಿದ್ದ ಅಲಾಯ್ ಚಕ್ರಗಳ ಸೌಲಭ್ಯವನ್ನು ಹೊಸ ಜೂಪಿಟರ್ ಜೆಡ್ಎಕ್ಸ್‌ನಲ್ಲಿ ಕೈಬಿಟ್ಟಿರುವ ಟಿವಿಎಸ್ ಸಂಸ್ಥೆಯು ಪ್ರೀಮಿಯಂ ಫೀಚರ್ಸ್‌ಗಳಿಂತ ಸುರಕ್ಷತೆ ಹೆಚ್ಚಿನ ಗಮನಹರಿಸಿದೆ

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಜೂಪಿಟರ್ ಜೆಡ್ಎಕ್ಸ್ ಮಾದರಿಯು 109.7 ಸಿಸಿ ಸಾಮಾರ್ಥ್ಯದ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 8-ಬಿಎಚ್‌ಪಿ ಮತ್ತು 8.4-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಟಿವಿಎಸ್ ಸಂಸ್ಥೆಯು ಜೂಪಿಟರ್ ಜೆಡ್ಎಕ್ಸ್ ಮಾದರಿಯನ್ನು ಸ್ಟಾರ್‌ಲೈಟ್ ಬ್ಲೂ ಮತ್ತು ರಾಯಲ್ ವೈನ್ ಬಣ್ಣಗಳಲ್ಲಿ ಬಿಡುಗಡೆ ಮಾಡಿದ್ದು, ಈ ಹಿಂದಿನಂತೆಯೇ ಕೆಲವು ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ವಿನೂತನ ಫೀಚರ್ಸ್‌ಗಳೊಂದಿಗೆ 2019ರ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಬಿಡುಗಡೆ

ಈ ಮೂಲಕ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಆಕ್ಟಿವಾ 5ಜಿ ಮಾದರಿಗೆ ಪೈಪೋಟಿ ನೀಡುವ ಗುರಿಹೊಂದಿರುವ ಟಿವಿಎಸ್ ಜೂಪಿಟರ್ ಜೆಡ್ಎಕ್ಸ್ ಮಾದರಿಯು ಗ್ರಾಹಕರ ಆಕರ್ಷಣೆಗಾಗಿ ಎಲ್ಇಡಿ ಹೆಡ್‌ಲೈಟ್ ಮತ್ತು ಡಿಜಿ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ನೀಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

Most Read Articles

Kannada
English summary
2019 tvs jupiter zx launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X