ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಹೊಸ ತಲೆಮಾರಿನ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ ಬೈಕ್ ಅನ್ನು ಮತ್ತೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಬಾರಿಯ ಸ್ಪಾಟ್ ಟೆಸ್ಟ್ ಅನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಅನೇಕ ಮಾಹಿತಿಗಳನ್ನು ಹೊರಹಾಕಿದೆ. ಹೊಸ ತಲೆಮಾರಿನ ಥಂಡರ್‍‍ಬರ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದ್ದು, ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಳ್ಳಲಿದೆ. ರಾಯಲ್ ಎನ್‍‍ಫೀಲ್ಡ್ ಬಹಳ ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ಕ್ರೂಸರ್ ಬೈಕ್ ಆಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಹಳೆಯ ತಲೆಮಾರಿನ 350 ಸಿಸಿ ಎಂಜಿನ್‍ ಹೊಂದಿದ್ದ ಈ ಬೈಕ್ ಅನ್ನು ಮೊದಲ ಬಾರಿಗೆ 2002ರಲ್ಲಿ ಬಿಡುಗಡೆಗೊಳಿಸಲಾಗಿತ್ತು. 2012ರಲ್ಲಿ ಮತ್ತೊಮ್ಮೆ 350ಸಿಸಿ ಹಾಗೂ 500 ಸಿಸಿ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಯಿತು. ಹಲವಾರು ವರ್ಷಗಳಿಂದ ಈ ಬೈಕ್ ಒಂದು ಪದ್ಧತಿಯನ್ನು ಬೆಳೆಸಿದ್ದು, ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್‌ನಲ್ಲಿ ಲಾಂಗ್ ರೈಡ್ ಮಾಡುವ ಹಲವಾರು ಬೈಕಿಂಗ್ ಗುಂಪುಗಳಿವೆ.

ಬೈಕ್ ಸ್ವಲ್ಪ ಹಳೆಯದಾದ ಕಾರಣ ರಾಯಲ್ ಎನ್‍‍ಫೀಲ್ಡ್ ಕಂಪನಿಯು, ಯುವ ಜನತೆಯನ್ನು ಆಕರ್ಷಿಸಲು ಹೊಸ ವಿನ್ಯಾಸದ ಥಂಡರ್‍‍ಬರ್ಡ್ ಎಕ್ಸ್ ಬೈಕ್ ಅನ್ನು 2018ರಲ್ಲಿ ಬಿಡುಗಡೆಗೊಳಿಸಿತು. ಥಂಡರ್‍‍ಬರ್ಡ್ ಎಕ್ಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು. ಆದರೂ, ಥಂಡರ್‍‍ಬರ್ಡ್ ಸರಣಿಯಲ್ಲಿ ಹಳೆಯ ಹಾರ್ಡ್‍‍ವೇರ್ ಹಾಗೂ ಸೈಕಲ್ ಬಿಡಿಭಾಗಗಳನ್ನು ಅಳವಡಿಸಿರುವ ಕಾರಣ, ರಾಯಲ್ ಎನ್‌ಫೀಲ್ಡ್ ಹೊಸ ತಲೆಮಾರಿನ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಇದು ಹೊಸ ತಲೆಮಾರಿನ ಬೈಕ್ ಆಗಿದ್ದು, ಈ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಬೈಕಿನಲ್ಲಿ ಕೇವಲ ವಿನ್ಯಾಸವನ್ನು ಅಥವಾ ಮೆಕಾನಿಕಲ್ ಅಂಶಗಳನ್ನು ಮಾತ್ರ ಬದಲಾವಣೆ ಮಾಡಿಲ್ಲ. ಸಂತೋಷ್ ಕುಮಾರ್ ಎಂಬುವವರು ಬಿಡುಗಡೆಗೊಳಿಸಿರುವ ಸ್ಪೈ ವೀಡಿಯೊದಲ್ಲಿ, ಈ ಬೈಕ್ ಹೊಸ ಮಾದರಿ ಎಂಬುದನ್ನು ನೋಡುವುದರ ಜೊತೆಗೆ ಚಾಸೀಸ್ ಹಾಗೂ ಎಂಜಿನ್‌ನಲ್ಲಿ ಹಲವಾರು ಬದಲಾವಣೆಗಳಾಗಿರುವುದನ್ನು ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಈಗಿರುವ ಮಾದರಿಯ ಬೈಕಿನಲ್ಲಿರುವ ಸಿಂಗಲ್ ಡೌನ್‌ಟ್ಯೂಬ್ ವಿನ್ಯಾಸದ ಬದಲು, ಫ್ರೇಮ್‍‍ನಲ್ಲಿ ಈಗ ಡ್ಯುಯಲ್ ಕ್ರೇಡಲ್ ವಿನ್ಯಾಸ ನೀಡಲಾಗಿದೆ. ಇದು ಬೈಕಿನ ವೈಬ್ರೇಷನ್‍‍ಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸುತ್ತದೆ. ಹೊಸ ಚಾಸೀಸ್‍‍ಗೆ ಹೊಂದಿಕೊಳ್ಳವಂತಹ ಹೊಸ ಮೌಂಟ್‍‍ಗಳು ಬೇಕಾಗುವುದರಿಂದ ಎಂಜಿನ್ ಕೇಸ್‍‍ಗಳನ್ನು ಸಹ ಮರುವಿನ್ಯಾಸಗೊಳಿಸಬೇಕಾಗಿದೆ. ವೈಬ್ರೇಷನ್ ಕಡಿಮೆಗೊಳಿಸಲು ರಾಯಲ್ ಎನ್‌ಫೀಲ್ಡ್ ಹೊಸ ಎಂಜಿನ್ ಮೌಂಟೆಡ್ ರಬ್ಬರ್ ಡ್ಯಾಂಪಿಂಗ್ ಅನ್ನು ಬಳಸಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವೈಬ್ರೇಷನ್ ಪ್ರಸ್ತುತ ಮಾದರಿಯ ಬೈಕಿನಲ್ಲಿರುವ ದೊಡ್ಡ ಸಮಸ್ಯೆಯಾಗಿದೆ. ಹೆಡ್‌ಲ್ಯಾಂಪ್ ಹಾಗೂ ಹ್ಯಾಂಡಲ್‌ಬಾರ್‍‍ಗಳನ್ನು ಕೆಳಭಾಗದಲ್ಲಿ ಇರಿಸಲಾಗಿದೆ. ಫ್ಯೂಯಲ್ ಟ್ಯಾಂಕ್ ಈಗಿರುವ ಬೈಕಿನಲ್ಲಿರುವಂತೆ ಕಾಣುತ್ತದೆ. ಫ್ಯೂಯಲ್ ಫಿಲ್ಲರ್ ಕ್ಯಾಪ್ ಅನ್ನು ಬಲಕ್ಕೆ ಜೋಡಿಸುವ ಬದಲು ಮಧ್ಯಕ್ಕೆ ಜೋಡಿಸಲಾಗಿದೆ. ಈ ಬೈಕ್ ಹೊಸ ಸ್ಪ್ಲಿಟ್ ಸೀಟ್‍‍ಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿರುವ ಬೈಕ್‍‍ಗಿಂತ ಚಪ್ಪಟೆಯಾಗಿ ಹಾಗೂ ಅಗಲವಾಗಿ ಕಾಣುತ್ತದೆ. ಬೈಕಿನ ಸಂಪೂರ್ಣ ಹಿಂಭಾಗದ ತುದಿಯನ್ನು ಮರುವಿನ್ಯಾಸಗೊಳಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಹೊಸ ಬೈಕ್ ಕರ್ವಿಯರ್ ಫೆಂಡರ್ ವಿನ್ಯಾಸ, ಹೊಸ ಟೇಲ್ ಲ್ಯಾಂಪ್ ಹಾಗೂ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿರುವ ಸಸ್ಪೆಂಷನ್ ಆಂಗುಲರ್ ಆಗಿದ್ದು, ಹೊಸ ಸ್ವಿಂಗ್ ಆರ್ಮ್ ಹಾಗೂ ಹೊಸ ಕಡಿಮೆ ಎಕ್ಸಾಸ್ಟ್ ಡಿಸೈನ್ ಹೊಂದಿದೆ. ಥಂಡರ್ ಬರ್ಡ್ ಎಕ್ಸ್ ಬೈಕನ್ನು ಸಹ ಇದೇ ರೀತಿಯ ವಿನ್ಯಾಸದೊಂದಿಗೆ ಅಪ್‍‍ಡೇಟ್ ಮಾಡಲಾಗಿದೆ. ಈಗಿರುವ ಥಂಡರ್‌ಬರ್ಡ್ ನೇರವಾದ ಸವಾರಿ ಭಂಗಿಯನ್ನು ಹೊಂದಿದ್ದು, ಕೆಲವು ಗಂಟೆಗಳ ಸವಾರಿಯ ನಂತರ ಆಯಾಸವಾಗಿ, ಕೆಳ ಬೆನ್ನುನೋವಿಗೆ ಕಾರಣವಾಗುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

2020ರ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್‌ನಲ್ಲಿ ಈ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಫುಟ್‌ಪೆಗ್‌ಗಳನ್ನು ಕೆಲವು ಇಂಚುಗಳಷ್ಟು ಮುಂದಕ್ಕೆ ಇಡಲಾಗಿದ್ದು, ಹ್ಯಾಂಡಲ್‌ಬಾರ್‍‍ಗಳನ್ನು ಕೆಳಗಿಳಿಸಲಾಗಿದೆ. ವೀಡಿಯೊದಲ್ಲಿರುವ ರೈಡರ್ ರಿಲ್ಯಾಕ್ಸ್ ರೈಡಿಂಗ್ ಭಂಗಿಯನ್ನು ಹೊಂದಿದ್ದಾನೆ. 2020ರ ಥಂಡರ್ ಬರ್ಡ್ ಬೈಕ್ ಅನ್ನು ಸಹ 350 ಸಿಸಿ ಹಾಗೂ 500 ಸಿಸಿ ಮಾದರಿಗಳಲ್ಲಿ ನೀಡಲಾಗುವುದು. ಎರಡೂ ಮಾದರಿಗಳು ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಪವರ್ ಉತ್ಪಾದನೆಯಲ್ಲಿ ಕೆಲವು ಮಟ್ಟದ ಏರಿಕೆ ಕಾಣಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‌ಫೀಲ್ಡ್ ಕೇವಲ ಥಂಡರ್‌ಬರ್ಡ್ ಬೈಕನ್ನು ಮಾತ್ರ ನವೀಕರಿಸುತ್ತಿಲ್ಲ. 350 ಸಿಸಿ ಹಾಗೂ 500 ಸಿಸಿಯಲ್ಲಿರುವ ಎಲ್ಲಾ ಸರಣಿಯ ಬೈಕುಗಳನ್ನು ನವೀಕರಿಸಲಿದೆ. ಇದರಲ್ಲಿ ಕ್ಲಾಸಿಕ್ ಹಾಗೂ ಬುಲೆಟ್ ಮಾದರಿಯ ಬೈಕುಗಳೂ ಸಹ ಸೇರಿವೆ. 2020ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಸಿಸಿ ಹಾಗೂ 500ಸಿಸಿ ಬೈಕುಗಳನ್ನು ಇತ್ತೀಚೆಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಅಪ್‍‍ಡೇಟೆಡ್ ಬೈಕುಗಳನ್ನು ಬಿಡುಗಡೆಗೊಳಿಸಿದ ನಂತರ ರಾಯಲ್ ಎನ್‌ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

Source: Santosh Kumar/YouTube

Most Read Articles

Kannada
English summary
2020 BS-VI Royal Enfield Thunderbird Spotted Testing — Features Relaxed Riding Position - Read in kannada
Story first published: Wednesday, July 17, 2019, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X