ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಮಾರ್ಡನ್ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಬಿಎಸ್-6 ಎಂಜಿನ್‌ಗೆ ಉನ್ನತಿಕರಣಗೊಳಿಸುತ್ತಿದ್ದು, ಮೊದಲ ಬಾರಿಗೆ ಹೊಸ ಎಂಜಿನ್ ಹೊಂದಿರುವ ಕ್ಲಾಸಿಕ್ 350 ಮಾದರಿಯು ರೋಡ್ ಟೆಸ್ಟ್ ನಡೆಸುತ್ತಿರುವುದು ಕಂಡುಬಂದಿದೆ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

2020ರ ಏಪ್ರಿಲ್ 1ರಿಂದ ಬಿಎಸ್-4 ನಿಯಮವನ್ನು ಕೊನೆಗೊಳ್ಳಲಿದ್ದು, ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ದೊರೆಯಲಿದೆ. ಹೀಗಾಗಿ ಹೊಸ ನಿಯಮಕ್ಕೆ ಅನುಸಾರವಾಗಿ ಹೊಸ ಎಂಜಿನ್ ಅನ್ನು ಟೆಸ್ಟಿಂಗ್ ನಡೆಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್‌ಗಳನ್ನು ಬಿಎಸ್-6 ಜಾರಿಗೆ ಮುನ್ನವೇ ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಹಾಗಾದ್ರೆ ಹೊಸ ನಿಯಮದಿಂದ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್‌ಗಳಿಂತ ಬಿಎಸ್-6 ಬೈಕ್‌ಗಳು ಹೇಗೆಲ್ಲಾ ಬದಲಾವಣೆ ಪಡೆದುಕೊಳ್ಳಲಿವೆ ಎನ್ನುವುದು ಇಲ್ಲಿ ತಿಳಿಯಿರಿ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಭಾರೀ ಪ್ರಮಾಣದ ಮಾಲಿನ್ಯ ಉತ್ಪತ್ತಿಯಾಗಿದ್ದು, ಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಬಿಎಸ್-6 ನಿಯಮವು ಕೂಡಾ ಒಂದಾಗಿದ್ದು, ವಾಹನಗಳಿಂದ ಉತ್ಪತ್ತಿಯಾಗುವ ಮಾಲಿನ್ಯ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದೆ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಹೌದು, ಬಿಎಸ್-6 ನಿಯಮದಿಂದಾಗಿ ಹೊಸ ವಾಹನಗಳ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರಲಿದೆ. ಹಾಗೆಯೇ ಮಾಲಿನ್ಯ ಪ್ರಮಾಣವು ತಗ್ಗುವುದಲ್ಲದೇ ಎಂಜಿನ್ ಕಾರ್ಯಕ್ಷಮತೆ ಪ್ರಮಾಣವು ಕೂಡಾ ಹೆಚ್ಚುವ ಮೂಲಕ ಮೈಲೇಜ್ ಕೂಡಾ ಹೆಚ್ಚಳವಾಗದಲ್ಲಿ, ಶೇ.25ರಷ್ಟು ಹೊಗೆ ಪ್ರಮಾಣವನ್ನು ತಗ್ಗಿಸುವ ಮೂಲಕ ಶೇ.10ರಿಂದ ಶೇ.15ರಷ್ಟು ಮೈಲೇಜ್ ಹೆಚ್ಚಳ ಮಾಡಬಲ್ಲವು.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇದೀಗ ಬಿಡುಗಡೆಗೆ ಸಿದ್ದವಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಯಲ್ಲೂ ಕೂಡಾ ಹೊಸ ಎಂಜಿನ್ ಜೊತೆಗೆ ಬೈಕಿನ ವಿನ್ಯಾಸದಲ್ಲೂ ಕೆಲವು ಗುರುತರ ಬದಲಾವಣೆಗಳನ್ನು ತರಲಾಗುತ್ತಿದ್ದು, ಹಿಮಾಲಯದ ರಸ್ತೆಗಳಲ್ಲಿ ರೋಡ್ ಟೆಸ್ಟಿಂಗ್‌ನಲ್ಲಿರುವ ಹೊಸ ಬೈಕ್ ನೋಡಿದಾಗ ಯಾವೆಲ್ಲಾ ಬದಲಾವಣೆಗಳನ್ನು ತರಲಾಗಿದೆ ಎನ್ನುವುದನ್ನು ಮೊದಲ ನೋಟದಲ್ಲೇ ಗುರುತಿಸಬಹುದಾಗಿದೆ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಬಿಎಸ್-6 ಎಂಜಿನ್ ಜೊತೆಗೆ ಮರುವಿನ್ಯಾಸಗೊಳಿಸಲಾದ ಆಸನ ಸೌಲಭ್ಯ, ಫ್ಯೂಲ್ ಟ್ಯಾಂಕ್, ಸರಳಗೊಂಡ ಹೊಸ ಬೈಕ್ ಹ್ಯಾಂಡಲ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ಡದಾದ ಎಂಜಿನ್ ವಿನ್ಯಾಸ, ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋಕ್ ವೀಲ್ಹ್ ಜೊತೆ ಟ್ಯೂಬ್ ಹೊಂದಿರುವ ಟೈರ್, ಹೊಸ ಮಾದರಿಯ ಫುಟ್‌ಪೆಗ್ಸ್, ರಿಯರ್ ಬ್ರೇಕ್ ಪೆಡಲ್ಸ್ ಮತ್ತು 650 ಟ್ವಿನ್ ಬೈಕ್‌ಗಳ ಮಾದರಿಯಲ್ಲಿ ಹಲವು ಹೊಸ ಫೀಚರ್ಸ್‌ಗಳು ಇದರಲ್ಲಿವೆ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇದರ ಜೊತೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಹೊಸ ಎಂಜಿನ್ ಉನ್ನತಿಕರಣದ ಜೊತೆಯಲ್ಲಿ ಎಲ್ಲಾ ಬೈಕ್ ಮಾದರಿಗಳನ್ನು ಫ್ಯೂಲ್ ಇಂಜೆಕ್ಷನ್ ಆಯ್ಕೆಯನ್ನು ಹೊಂದಿರಲಿದ್ದು, ಇದು ಏರ್ ಕೂಲ್ಡ್ ಎಂಜಿನ್ ಆಯ್ಕೆಗಿಂತಲೂ ಹೆಚ್ಚಿನ ಮಟ್ಟದ ಕಾರ್ಯಕ್ಷಮತೆಯೊಂದಿಗೆ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಕ್ಲಾಸಿಕ್ 350, ಬುಲೆಟ್, ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್, ಹಿಮಾಲಯನ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರತಿಯೊಂದು ಬೈಕ್ ಮಾದರಿಯು ಸಹ ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬಿಡುಗಡೆಗೆ ಸಜ್ಜಾದ ಬಿಎಸ್-6 ಎಂಜಿನ್ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇದಲ್ಲದೇ ಜಾರಿಯಾಗಲಿರುವ ಹೊಸ ನಿಯಮದಿಂದಾಗಿ ಬೈಕ್‌ಗಳ ಬೆಲೆಗಳು ಸಹ ಪ್ರಸ್ತುತ ಮಾರುಕಟ್ಟೆಯ ಬೆಲೆಗಳಿಂತ ರೂ. 8 ಸಾವಿರದಿಂದ ರೂ.15 ಸಾವಿರ ತನಕ ಏರಿಕೆಯಾಗಲಿವೆ ಎನ್ನಲಾಗಿದ್ದು, ಹೊಸ ನಿಯಮಕ್ಕೆ ಅನುಸಾರವಾಗಿ ಎಂಜಿನ್ ಅಪ್‌ಡೆಟ್ ಮಾಡುತ್ತಿರುವ ಬಹುತೇಕ ವಾಹನ ಸಂಸ್ಥೆಗಳು ಇದೇ ವರ್ಷದ ಕೊನೆಯಲ್ಲಿ ಮತ್ತು 2020ರ ಆರಂಭದಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿವೆ.

Source: Rushlane

Most Read Articles

Kannada
English summary
2020 Royal Enfield Classic 350 Spotted Testing With Several Improvements & New Engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X