ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ನಮ್ಮ ಭಾರತದಲ್ಲಿ ಪೊಲೀಸರು ಓಡಾಡಲು ಪಲ್ಸರ್ ಇಲ್ಲವೇ ಇತರ ಕಂಪನಿಗಳ ಸಾಧಾರಣ ಬೈಕುಗಳನ್ನು ಬಳಸುವುದು ರೂಢಿಯಲ್ಲಿದೆ. ನಮ್ಮ ಬೆಂಗಳೂರಿನ ಪೊಲೀಸರು ಗಸ್ತು ತಿರುಗಲು ಬಜಾಜ್ ಕಂಪನಿಯ ಪಲ್ಸರ್ ಬೈಕುಗಳನ್ನು ಚೀತಾ ಹೆಸರಿನಲ್ಲಿ ಬಳಸುತ್ತಾರೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಆದರೆ ಶ್ರೀಮಂತ ದೇಶವಾದ ಅಬುಧಾಬಿಯ ಪೊಲೀಸರು ಗಸ್ತು ನಿರ್ವಹಣೆಗಾಗಿ ಹೈಟೆಕ್ ವಾಹನಗಳನ್ನು ಖರೀದಿಸುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಅಬುಧಾಬಿ ಪೊಲೀಸರು ಟೆಸ್ಲಾ ಸೈಬರ್‍‍ಟ್ರಕ್ ವಾಹನವನ್ನು ಖರೀದಿಸುವ ಬಗ್ಗೆ ವರದಿಯಾಗಿತ್ತು.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಇದರ ಜೊತೆಗೆ ಅಬುಧಾಬಿ ಪೊಲೀಸರು ಗಸ್ತು ನಿರ್ವಹಣೆಗಾಗಿ ಫೆರಾರಿ ಎಫ್‌ಎಫ್, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ, ಮೆಕ‌್‌ಲ್ಯಾರೆನ್ 12ಸಿ, ಬಿಎಂಡಬ್ಲ್ಯು 6 ಸಿರೀಸ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಬ್ರಾಬಸ್ ಜಿ63, ಬುಗಾಟಿ ವೆರೋನ್‍‍ಗಳನ್ನು ಹೊಂದಿದ್ದಾರೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಇವಲ್ಲದೇ ಆಸ್ಟನ್ ಮಾರ್ಟಿನ್ ಒನ್ 77, ಬಿಎಂಡಬ್ಲ್ಯು 5 ಸಿರೀಸ್, ಮರ್ಸಿಡಿಸ್ ಇ ಕ್ಲಾಸ್, ಷೆವರ್ಲೆ ಕ್ಯಾಮರೊ, ಟೊಯೊಟೊ ಪ್ರಾಡೊ, ಟೊಯೊಟಾ ಫಾರ್ಚೂನರ್, ಹಮ್ಮರ್ ಎಚ್1 ಮತ್ತು ಲಂಬೊರ್ಗಿನಿ ಅವೆಂಟಡೊರ್ ಸೇರಿದಂತೆ ಹಲವಾರು ಸೂಪರ್ ಕಾರುಗಳನ್ನು ಗಸ್ತು ನಿರ್ವಹಣೆಗೆ ಬಳಸುತ್ತಿದ್ದಾರೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಈಗ ದುಬೈ ಪೊಲೀಸರು ಡುಕಾಟಿ ಪ್ಯಾನಿಗಲ್ ವಿ4 ಎಸ್ ಬೈಕುಗಳನ್ನು ತಮ್ಮ ಗಸ್ತು ನಿರ್ವಹಣೆಗಾಗಿ ಸೇರ್ಪಡೆಗೊಳಿಸಿ ಕೊಂಡಿದ್ದಾರೆ. ಬಿಳಿ ಹಾಗೂ ನೀಲಿ ಬಣ್ಣವನ್ನು ಹೊಂದಿರುವ 12 ಡುಕಾಟಿ ಪ್ಯಾನಿಗಲ್ ವಿ4 ಎಸ್ ಬೈಕುಗಳನ್ನು ಅಬುಧಾಬಿ ಪೊಲೀಸ್ ಇಲಾಖೆಯು ಹೊಸದಾಗಿ ಸೇರ್ಪಡೆಗೊಳಿಸಿಕೊಂಡಿದೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಅಬುಧಾಬಿ ಪೊಲೀಸರು ವಿ 4 ಆರ್ ಬೈಕ್ ಅನ್ನು ಹೊಂದಿರುವುದಾಗಿ ಕೆಲವು ವರದಿಗಳಾಗಿವೆ. ಆದರೆ ಈ ಬೈಕಿನ ಸಸ್ಪೆಂಷನ್ ಅನ್ನು ಹತ್ತಿರದಿಂದ ಗಮನಿಸಿದಾಗ ಈ ಬೈಕ್ ವಿ 4 ಎಸ್ ಕಂಡು ಬರುತ್ತದೆ. ವಿ 4 ಆರ್ ಬೈಕಿನಲ್ಲಿ ಮ್ಯಾನುವಲ್ ಅಡ್ಜಸ್ಟಬಲ್ ಸಸ್ಪೆಂಷನ್ ಯುನಿಟ್‍‍ಗಳಿವೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಆದರೆ ವಿ 4 ಎಸ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸಸ್ಪೆಂಷನ್ ಸೆಟ್ ಅಪ್‍‍ಗಳಿವೆ. ವಿ 4 ಎಸ್ ಬೈಕಿನ ಶಾಕ್ ಅಬ್ಸರ್ಷನ್‍‍ಗಳನ್ನು ಮುಂಭಾಗದಲ್ಲಿ ಓಹ್ಲಿನ್ಸ್ ಎನ್ಐಎಕ್ಸ್ 30 ಹಾಗೂ ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ನಿರ್ವಹಿಸುತ್ತವೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಇವೆರಡೂ ಹೊಸ ಕ್ಯಾಲಿಬ್ರೇಷನ್ ಹೊಂದಿರುತ್ತವೆ. ಇವುಗಳನ್ನು ಓಹ್ಲಿನ್ಸ್ ಸ್ಮಾರ್ಟ್ ಇಸಿ 2.0 ಸಿಸ್ಟಂ ನಿಯಂತ್ರಿಸುತ್ತದೆ. ಈ ಬೈಕಿನಲ್ಲಿ ಮಾರ್ಚೆಸಿನಿ ಫೋರ್ಜ್ಡ್ ಅಲ್ಯೂಮಿನಿಯಂ ಹಾಗೂ ಲಿಥಿಯಂ ಐಯಾನ್ ಬ್ಯಾಟರಿಗಳಿವೆ. ಮೂಲ ಮಾದರಿಯ ವಿ 4 ಬೈಕ್ ಮ್ಯಾನುವಲ್ ಆಗಿ ಅಡ್ಜಸ್ಟ್ ಮಾಡಬಹುದಾದ 43 ಎಂಎಂ ಶೋವಾ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ ಹಾಗೂ ಸಾಚ್ ರೇರ್ ಶಾಕ್‍‍ಗಳನ್ನು ಹೊಂದಿದೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

2020ರ ಡುಕಾಟಿ ಪ್ಯಾನಿಗಲ್ ವಿ 4 ಸರಣಿಯ ಬೈಕುಗಳಲ್ಲಿ ಏರೋ ಡೈನಾಮಿಕ್ ಪ್ಯಾಕೇಜ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಮೋಟೊ ಜಿಪಿ ಬೈಕುಗಳಿಂದ ಪ್ರೇರಿತವಾಗಿರುವ ಏರೋ ಡೈನಾಮಿಕ್ ವಿಂಗ್ಲೆಟ್ ವಿನ್ಯಾಸವನ್ನು ಬೈಕಿನ ಸ್ಟಾಬಿಲಿಟಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಈ ಬೈಕುಗಳಲ್ಲಿ ಹೆಚ್ಚುವರಿ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಈ ಎಕ್ವಿಪ್‍‍ಮೆಂಟ್‍‍ಗಳನ್ನು ಎಡಭಾಗದಲ್ಲಿರುವ ಸ್ವಿಚ್ ಗೇರ್‍‍ನಲ್ಲಿ ಕಾಣಬಹುದು. ಅಬುಧಾಬಿ ಪೊಲೀಸ್ ಬ್ಯಾಡ್ಜ್ ಅನ್ನು ಬೈಕಿನ ಫೇರಿಂಗ್‍‍ನಲ್ಲಿ ಅಳವಡಿಸಲಾಗಿದೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಪ್ಯಾನಿಗಲ್ ವಿ 4 ಎಸ್ ಬೈಕಿನಲ್ಲಿ 1,103 ಸಿಸಿಯ ಡೆಸ್ಮೊಸೆಡಿಸಿ ಸ್ಟ್ರಾಡಲ್ 90 ಲಿಕ್ವಿಡ್ ಕೂಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 13,000 ಆರ್‍‍ಪಿ‍ಎಂನಲ್ಲಿ 214 ಬಿ‍‍ಹೆಚ್‍‍ಪಿ ಪವರ್ ಹಾಗೂ 10,000 ಆರ್‍‍ಪಿ‍ಎಂನಲ್ಲಿ 123.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು ಐಷಾರಾಮಿ ಬೈಕ್ ಖರೀದಿಸಿದ ಅಬುಧಾಬಿ ಪೊಲೀಸರು

ಈ ಬೈಕ್ ಹಲವಾರು ಎಲೆಕ್ಟ್ರಾನಿಕ್ ಪ್ಯಾಕೇಜ್‍ಗಳನ್ನು ಹೊಂದಿದೆ. ಅವುಗಳಲ್ಲಿ ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಕಾರ್ನರಿಂಗ್, ಡುಕಾಟಿ ಸ್ಲೈಡ್ ಕಂಟ್ರೋಲ್, ಡುಕಾಟಿ ವ್ಹೀಲಿ ಕಂಟ್ರೋಲ್, ಡುಕಾಟಿ ಕ್ವಿಕ್ ಶಿಫ್ಟ್ ಅಪ್ / ಡೌನ್, ಎಂಜಿನ್ ಬ್ರೇಕ್ ಕಂಟ್ರೋಲ್, ಹಾಗೂ ಡುಕಾಟಿ ಪವರ್ ಲಾಂಚ್ ಸೇರಿವೆ.

Most Read Articles

Kannada
English summary
Abu dhabi police adds ducati panigale v 4 s to its fleet - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X