ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಎಪ್ರಿಲಿಯಾ ಅಧಿಕೃತವಾಗಿ ತನ್ನ ಹೊಸ ಜಿಪಿ‍ಆರ್ 250 ಸೂಪರ್ ಬೈಕ್ ಅನ್ನು ಚೀನಾದಲ್ಲಿ ಅನಾವರಣಗೊಳಿಸಿದೆ. ವಿನ್ಯಾಸ ಹಾಗೂ ಸ್ಟೈಲ್‍‍ನ ದೃಷ್ಟಿಯಿಂದ ಹೇಳುವುದಾದರೆ 250ಸಿಸಿಯ ಈ ಬೈಕ್ ಅನ್ನು ಲೀಟರ್ ಕ್ಲಾಸ್‍‍‍ನ ಆರ್‍ಎಸ್‍‍ವಿ4 ಸರಣಿಯ ಸೂಪರ್‍‍ಬೈಕುಗಳಿಂದ ಪ್ರಭಾವಿತವಾಗಿ ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಗ್ರಾಹಕರ ಗಮನ ಸೆಳೆಯುವ ಕಾರಣಕ್ಕೆ 2020ರ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಈ ಬೈಕ್ ಅನ್ನು ಪ್ರದರ್ಶಿಸಲಾಗುವುದು. ಈ ಬೈಕ್ 2020ರ ಕೊನೆಗೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಎಪ್ರಿಲಿಯಾ ಜಿ‍‍ಪಿಆರ್ 250 ಬೈಕ್ 249.2 ಸಿಸಿಯ ಲಿಕ್ವಿಡ್ ಕೂಲ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 9,000 ಆರ್‍‍ಪಿ‍ಎಂನಲ್ಲಿ 26.5 ಬಿ‍‍ಹೆಚ್‍‍ಪಿ ಪವರ್ ಹಾಗೂ 7,500 ಆರ್‍‍ಪಿ‍ಎಂನಲ್ಲಿ 22 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಈ ಎಂಜಿನ್ 6 ಸ್ಪೀಡ್‍‍ನ ಗೇರ್‍‍ಬಾಕ್ಸ್ ಹೊಂದಿದೆ. 250 ಸಿಸಿ ಸೆಗ್‍‍ಮೆಂಟಿನಲ್ಲಿರುವ ಬೇರೆ ಬೈಕುಗಳಿಗೆ ಹೋಲಿಸಿದರೆ ಈ ಬೈಕ್ ಕೇವಲ 150 ಕೆ.ಜಿ ತೂಕವನ್ನು ಹೊಂದಿದ್ದು, ಗಮನಾರ್ಹವಾದ ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಬ್ರೇಕಿಂಗ್‍‍ಗಾಗಿ ಮುಂಭಾಗದಲ್ಲಿ 300 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್‍‍ಗಳಿದ್ದರೆ, ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳಿವೆ. ಕಂಪನಿಯು ಹಿಂಭಾಗದ ಡಿಸ್ಕ್ ಗಾತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೊಸ ಸುರಕ್ಷಾ ನಿಯಮಗಳ ಪ್ರಕಾರ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ 125 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬೈಕುಗಳಲ್ಲಿ ಎ‍‍ಬಿ‍ಎಸ್ ನೀಡುವುದು ಕಡ್ಡಾಯವಾಗಿದೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಅದರಂತೆ ಭಾರತದ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ 250 ಸಿಸಿಯ ಬೈಕುಗಳಲ್ಲಿ ಎಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದೆ. ಎಪ್ರಿಲಿಯಾ ಜಿ‍‍ಪಿ‍ಆರ್ 250 ಬೈಕ್ ಸಹ 2 ಚಾನೆಲ್ ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ಹೊಂದಿರಲಿದೆ.

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಸಸ್ಪೆಂಷನ್‍‍ಗಳಿಗಾಗಿ, ಈ ಸ್ಪೋರ್ಟ್ ಬೈಕಿನ ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗು ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊಶಾಕ್‍‍ಗಳಿವೆ. ಎಪ್ರಿಲಿಯಾ ಜಿ‍‍ಪಿ‍ಆರ್ 250 ಬೈಕ್ 1950 ಎಂಎಂ ಉದ್ದ, 770 ಎಂಎಂ ಅಗಲ ಹಾಗೂ 1100 ಎಂಎಂ ಎತ್ತರವನ್ನು ಹೊಂದಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಈ ಸೂಪರ್‍‍ಬೈಕಿ‍ನ ವ್ಹೀಲ್‍‍ಬೇಸ್ 1350 ಎಂಎಂ ಆಗಿದ್ದು, 14 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ 130/70 - ಆರ್17ನ ಟಯರ್‍‍ಗಳಿದ್ದರೆ, ಮುಂಭಾಗದಲ್ಲಿ 100/80 - ಆರ್17 ಟಯರ್‍‍‍ಗಳಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಜಿಪಿ‍ಆರ್ 250 ಬೈಕಿನಲ್ಲಿ ಪೆರಿಮೀಟರ್ ಫ್ರೇಂ, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್, ಹ್ಯಾಂಡಲ್‍‍‍ಬಾರ್‍‍ಗಳ ಮೇಲೆ ಕ್ಲಿಪ್. ಎಕ್ಸಾಸ್ಟ್ ಹಾಗೂ ಅಲ್ಯುಮಿನಿಯಂ ಸ್ವಿಂಗ್ ಆರ್ಮ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಅನಾವರಣವಾಯ್ತು ಎಪ್ರಿಲಿಯಾ ಜಿಪಿ‍ಆರ್ 250 ಬೈಕ್

ಭಾರತದಲ್ಲಿ ಬಿಡುಗಡೆಯಾದ ನಂತರ ಈ ಬೈಕ್, ಹೋಂಡಾ ಸಿ‍‍ಬಿ‍ಆರ್ 250 ಆರ್, ಸುಜುಕಿ ಜಿಕ್ಸರ್ ಎಸ್‍ಎಫ್ 250 ಹಾಗೂ ಟಿವಿ‍ಎಸ್ ಅಪಾಚೆ ಆರ್‍ಆರ್ 310 ಬೈಕುಗಳಿಗೆ ಪೈಪೋಟಿ ನೀಡಲಿದೆ. ಜಿ‍‍ಪಿ‍ಆರ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.20 ಲಕ್ಷಗಳಾಗುವ ಸಾಧ್ಯತೆಗಳಿವೆ.

Source: Newmotor

Most Read Articles

Kannada
English summary
Aprilia GPR 250 Officially Revealed, India Launch Expected in 2020 - Read in Kannada
Story first published: Tuesday, September 24, 2019, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X