ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಬೈಕ್‍‍ವಾಲೆ ವರದಿಗಳ ಪ್ರಕಾರ, ಹೊಸ ತಲೆಮಾರಿನ ಎಪ್ರಿಲಿಯಾ ಎಸ್‍ಆರ್ ಸರಣಿಯ ಸ್ಕೂಟರ್‍‍ಗಳಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್‍‍ಗಳ ಜೊತೆಗೆ, ಬ್ಲೂಟೂತ್ ಕನೆಕ್ಟಿವಿಟಿಗಳನ್ನು ಅಳವಡಿಸಲಾಗುವುದು.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಎಪ್ರಿಲಿಯಾ ಎಸ್‍ಆರ್ 150, ಎಸ್‍ಆರ್125 ಹಾಗೂ ಎಸ್‍ಆರ್ 125 ಸ್ಟಾರ್ಮ್ ಸ್ಕೂಟರ್‍‍ಗಳಲ್ಲಿ ಬ್ಲೂಟೂತ್ ಹೊಂದಿರುವ ಸ್ಪೀಡೊಮೀಟರ್ ಕಂಸೊಲ್ ಅಳವಡಿಸಲಾಗುವುದು. 2020ರ ಮೊದಲ ತ್ರೈಮಾಸಿಕದ ವೇಳೆಗೆ ಎಸ್‌ಆರ್‌ ಸರಣಿಯ ಸ್ಕೂಟರ್‌ಗಳಲ್ಲಿ ಈ ಫೀಚರ್‍‍ಗಳನ್ನು ಅಪ್‌ಗ್ರೇಡ್ ಮಾಡುವ ನಿರೀಕ್ಷೆಗಳಿವೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ನವೀಕರಿಸಿದ ಗ್ರಾಫಿಕ್ಸ್ ಸೇರಿದಂತೆ ಇತರ ಅಪ್‍‍ಗ್ರೇಡ್‍‍ಗಳನ್ನು ಪಡೆಯುವ ರೀತಿಯಲ್ಲಿ ಸ್ಕೂಟರ್‌ಗಳನ್ನು ತಯಾರಿಸಲಾಗಿದೆ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಈ ಎಲ್ಲಾ ಅಪ್‍‍ಡೇಟ್‍‍ಗಳಿಂದಾಗಿ ಬೆಲೆ ಹೆಚ್ಚಳವಾಗುವುದು ಖಚಿತವಾಗಿದೆ. ಪಿಯಾಜಿಯೊ ಕಂಪನಿಯು ವೆಸ್ಪಾ ಹಾಗೂ ಎಪ್ರಿಲಿಯಾ ಸರಣಿಯ ಎಲ್ಲಾ ಸ್ಕೂಟರ್‍‍‍ಗಳಲ್ಲಿ ಬಿ‍ಎಸ್6 ಎಂಜಿನ್ ಅನ್ನು ಅಳವಡಿಸುವತ್ತಾ ಚಿತ್ತ ಹರಿಸಿದ್ದು, ಹೊಸ ಎಂಜಿನ್ ಹೊಂದಿರುವ ಸ್ಕೂಟರ್‍‍ಗಳನ್ನು 2020ರ ಜನವರಿ ಕೊನೆಯ ವೇಳೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಬಿ‍ಎಸ್6 ಎಂಜಿನ್ ಹೊಂದಲಿರುವ ಸ್ಕೂಟರ್‍‍ಗಳಲ್ಲಿ ಫ್ಯೂಯಲ್ ಇಂಜಕ್ಷನ್ ಸಿಸ್ಟಂ ಹಾಗೂ ಇ‍‍ಸಿ‍‍ಯುಗಳನ್ನು ಅಳವಡಿಸಲಾಗುವುದು. ಟಿವಿಎಸ್ ಎನ್‌ಟಾರ್ಕ್ 125, ದೇಶಿಯ ಮಾರುಕಟ್ಟೆಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ನೀಡುತ್ತಿರುವ ಏಕೈಕ ಸ್ಕೂಟರ್ ಆಗಿದೆ. ಈ ಫೀಚರ್, ಕಾಲರ್ ಐಡಿ ಹಾಗೂ ನ್ಯಾವಿಗೇಷನ್‌ನಂತಹ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಳಸುತ್ತದೆ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಎಪ್ರಿಲಿಯಾ ಸ್ಮಾರ್ಟ್‌ಫೋನ್ ಆ್ಯಪ್ ಅಭಿವೃದ್ಧಿಪಡಿಸುವ ಸಾಧ್ಯತೆಗಳಿದ್ದು, ಈ ಆ್ಯಪ್ ಅನ್ನು ಎಸ್‌ಆರ್ 150, ಎಸ್‌ಆರ್ 125 ಮತ್ತು ಎಸ್‌ಆರ್ 125 ಸ್ಟಾರ್ಮ್‌ ಸ್ಕೂಟರ್‍‍ಗಳಲ್ಲಿ ಬ್ಲೂಟೂತ್ ಸ್ಪೀಡೋಮೀಟರ್ ಕನ್ಸೋಲ್ ಮೂಲಕ ಅಳವಡಿಸಿ, ಹಲವು ಬಗೆಯ ಕನೆಕ್ಟಿವಿಟಿ ಫೀಚರ್‍‍ಗಳನ್ನು ನೀಡಲಾಗುತ್ತದೆ. ಇಟಾಲಿಯನ್ ತಯಾರಕ ಕಂಪನಿಯು 150 ಸಿಸಿ ಹಾಗೂ 200 ಸಿಸಿ ನಡುವೆ ಹೆಚ್ಚಿನ ಡಿಸ್‍‍ಪ್ಲೇಸ್‍‍ಮೆಂಟ್ ಎಂಜಿನ್ ಹೊಂದಿರುವ ಸ್ಕೂಟರ್ ಅಭಿವೃದ್ದಿಪಡಿಸುತ್ತಿದೆ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಪಿಯಾಜಿಯೊ ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸಲಿರುವ ಎಂಜಿನ್ ಅನ್ನು ಸಬ್ 200 ಸಿಸಿಯ ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್‌ಗಳಲ್ಲಿ ಅಳವಡಿಸಲಿದೆ. ಹೊಸ ಎಂಜಿನ್ ಅನ್ನು ದೇಶಿಯ ಮಾರುಕಟ್ಟೆಗಾಗಿ, ಇಟಲಿಯ ಕಂಪನಿಯ ಆರ್ ಅಂಡ್ ಡಿ ಘಟಕದಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.

MOST READ: ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಪಿಯಾಜಿಯೊ ವೆಹಿಕಲ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಡಿಗೋ ಗ್ರಾಫಿರವರು ಮಾತನಾಡಿ, ದೇಶಿಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ನಾವು ನೋಡುತ್ತಿರುವದಕ್ಕಿಂತ ಹೆಚ್ಚಿನ ಪ್ರಮಾಣದ ಜಿಗಿತವಾಗಲಿದೆ. ನಂತರ ಮಾರುಕಟ್ಟೆಯಲ್ಲಿ ಏನಾಗಬಹುದು ಎಂಬುದನ್ನು ಪರೀಕ್ಷಿಸಿ ನೋಡುತ್ತೇವೆ.

MOST READ: ಹೆಚ್ಚು ಮಾರಾಟವಾಗುವ ಸ್ಕೂಟರ್‍‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಸ್ಕೂಟರ್ ಅಪ್ಲಿಕೇಶನ್‌ಗಾಗಿ ಆ ರೀತಿಯ ಡಿಸ್‍‍ಪ್ಲೇಸ್‍‍ಮೆಂಟ್ ಇನ್ನೂ ಮುಂಚಿತವಾಗಿ ಆಗಬಹುದಾದರೂ, 150ಸಿಸಿ-200ಸಿಸಿ ಮಧ್ಯೆ ಖಂಡಿತವಾಗಿಯೂ ಆಗಲಿದೆ. ನಮ್ಮಿಂದ ಮಾತ್ರವಲ್ಲದೇ ನಮ್ಮ ಪೈಪೋಟಿದಾರರಿಂದಲೂ ಆಗಬಹುದು ಎಂದು ತಿಳಿಸಿದರು.

MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಎಪ್ರಿಲಿಯಾ ಸಬ್-200ಸಿಸಿ ಸ್ಕೂಟರ್ 2020ರ ಜೂನ್ ನಂತರ ಹಾಗೂ ವೆಸ್ಪಾ 2021ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕನೆಕ್ಟಿವಿಟಿ ಎಂಬುದು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಹೊಸ ಫೀಚರ್ ಆಗಿದೆ. ಕನೆಕ್ಟಿವಿಟಿ ಫೀಚರ್‍‍ಗಳನ್ನು ಸ್ಕೂಟರ್ ತಯಾರಕರು ಅಭಿವೃದ್ಧಿಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾದರೂ ಅವರು ಯಾರನ್ನು ಕನೆಕ್ಟ್ ಮಾಡಲಿದ್ದಾರೆ ಎಂಬುದರ ಬಗ್ಗೆ ಖಚಿತತೆಯಿಲ್ಲ.

ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍‍ಗಳು

ಸ್ಕೂಟರ್ ಕೇವಲ ಸ್ಕೂಟರ್ ಹಾಗೂ ಬೈಕ್ ಕೇವಲ ಬೈಕ್ ಆಗಿದ್ದ ದಿನಗಳು ಮುಗಿದು, ಆಧುನಿಕ ಟೆಕ್ನಾಲಜಿಗಳು ಈಗ ದ್ವಿಚಕ್ರವಾಹನಗಳನ್ನೂ ಆಕ್ರಮಿಸಿವೆ. ನಾವು ಈಗ ಸೈಕಲ್‍‍ಗಳನ್ನು ಖರೀದಿಸಿದರೆ, ಮುಂಬರುವ ದಿನಗಳಲ್ಲಿ ಸೈಕಲ್ ತಯಾರಕರು ಸೈಕಲ್‍‍ಗಳಲ್ಲಿಯೂ ಕನೆಕ್ಟಿವಿಟಿ ಫೀಚರ್‍‍ಗಳನ್ನು ಅಳವಡಿಸಬಹುದು. ಆಟೋರಿಕ್ಷಾಗಳೇ ಸೂಕ್ತವೆನಿಸುತ್ತವೆ.

Source: Bikewale

Most Read Articles

Kannada
English summary
Aprilia Plans To Add Bluetooth Connectivity To Its Scooter Fleet - Read in kannada
Story first published: Saturday, June 22, 2019, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X