ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ದೇಶಿಯ ಮಾರುಕಟ್ಟೆಯಲ್ಲಿ ಮೋಟಾರ್‍‍ಬೈಕ್‍ಗಳ ಬೇಡಿಕೆಗಿಂತಲೂ ಸ್ಕೂಟರ್‍‍ಗಳ ಬೇಡಿಕೆಯು ಹೆಚ್ಚುತ್ತ್ರುವ ಕಾರಣ ವಾಹನ ತಯಾರಕ ಸಂಸ್ಥೆಗಳು ಕಳೆದ ವರ್ಷ ಹಲವಾರು ಸ್ಕೂಟರ್‍‍ಗಳನ್ನು ಬಿಡುಗಡೆಗಡೆ ಮಾಡಿತು. ಆದರೆ ಇದೀಗ ಎಪ್ರಿಲಿಯಾ ಸಂಸ್ಥೆಯು 300ಸಿಸಿ ಆಧಾರಿತ ಸ್ಕೂಟರ್ ಒಂದುನ್ನು ಪರಿಚಯಿಸಲಿದ್ದು, ಈ ಕುರಿತಾದ ಮಾಹಿತ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ...

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಸ್ಕೂಟರ್‍‍ಗಳ ಮಾರಾಟದಲ್ಲಿ ಮೊದಲಿಗೆ ಟ್ರೆಂಡ್ ಸೃಷ್ಟಿಸಿದ್ದ ಕೈನೆಟಿಕ್ ಬ್ಲೇಜ್ ಬೈಕ್‍ಗಳು, 165ಸಿಸಿ ಮೋಟರ್ ಸಹಾಯದಿಂದ ಗಂಟೆಗೆ ಸುಮಾರು 100 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿತ್ತು. ನಂತರ ವಿನುತನವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‍‍ಗಳು ಜನಪ್ರಿಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಇದೀಗ ಎಪ್ರಿಲಿಯಾ ಸಂಸ್ಥೆಯು ತಮ್ಮ ಹೊಸ 300ಸಿಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ, ಅಧಿಕವಾದ ಜನಪ್ರಿಯತೆಯನ್ನು ಪಡೆಯುವ ತವಕದಲ್ಲಿದೆ.?

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಹೌದು, ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಎಪ್ರಿಲಿಯಾ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ 300ಸಿಸಿಯ ಎಪ್ರಿಲಿಯಾ ಎಸ್ಆರ್ ಮಾಕ್ಸ್ 300 ಸ್ಕೂಟರ್ ಅನ್ನು ಬಬಿಡುಗಡೆಗೊಳಿಸಲಿದ್ದು, ಈ ಸ್ಕೂಟರ್‍‍ನ ಕೆಲ ಚಿತ್ರಗಳು ಸೋರಿಕೆಯಾಗಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಗೋವಾನಲ್ಲಿರುವ ಡೀಲರ್‍‍ನ ಬಳಿ ಹೊಸ ಎಪ್ರಿಲಿಯಾ ಎಸ್ಆರ್ ಮ್ಯಾಕ್ಸ್ 300 ಸ್ಕೂಟರ್ ಕಾಣಿಸಿಕೊಂಡಿದ್ದು, ಈ ಸ್ಕೂಟರ್ ಜಿಟಿ ಮಾದರಿಯ ಬೈಕಿನ ವಿನ್ಯಾಸವನ್ನು ಪಡೆದುಕೊಂಡಿದೆ. ಎಸ್ಆರ್ ಮ್ಯಾಕ್ಸ್ 300 ಸ್ಕೂಟರ್‍‍ನಲ್ಲಿ ಏರೊಡೈನಾಮಿಕ್ ಏಪ್ರಾನ್ ಅನ್ನು ನೀಡಲಾಗಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಸಾಧಾರಣವಾಗಿ ಕೆಲ ಕಡಿಮೆ ಸಾಮರ್ಥ್ಯ ನೀಡುವ ಸ್ಕೂಟರ್‍‍ಗಳಲ್ಲಿ ಕಂಡು ಬರುವ ವಿಂಡ್‍ಸ್ಕ್ರೀನ್ ಹಾಗೆ ಅಲ್ಲದೇ, ಜೊತೆಗೆ ಬೃಹತ್ ಆಕಾರವನ್ನು ಪಡೆದಿರುವ ಈ ಸ್ಕೂಟರ್‍‍ಗೆ ವಿಂಡ್‍ಸ್ಕ್ರೀನ್ 15 ಇಂಚಿನ ಫ್ರಂಟ್ ವ್ಹೀಲ್, ಮತ್ತು 35ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ನಅನ್ನು ಒದಗಿಸಲಾಗಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಎಂಜಿನ್ ಸಾಮರ್ಥ್ಯ

ಹೊಸ ಎಪ್ರಿಲಿಯಾ ಎಸ್ಆರ್ ಮ್ಯಾಕ್ಸ್ 300 ಸ್ಕೂಟರ್‍‍ಗಳು 278ಸಿಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 22 ಬಿಹೆಚ್‍ಪಿ ಮತ್ತು 23ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಈ ಸ್ಕೂಟರ್ ಹೆಚ್ಚು ಸ್ಪೀಡ್‍‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಕೂಡಾ ಪಡೆದಿರಲಿದೆ ಎನ್ನಲಾಗಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಎಪ್ರಿಲಿಯಾ ಎಸ್ಆರ್ 300 ಸ್ಕೂಟರ್‍‍ಗಳ ಬ್ರೇಕಿಂಗ್ ಸಿಸ್ಟಂ ಮತ್ತು ಸಸ್ಪೆಂಷನ್ ವಿಚಾರಕ್ಕೆ ಬಂದ್ರೆ, ಇದು ಮುಂಭಾಗದಲ್ಲಿ ಟೆಲ್ಸಿಕೋಪಿಕ್ ಪೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿರಲಿದೆ. ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗಲ್ಲಿ 260 ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಹಾಗು ಡ್ಯುಯಲ್ ಚಾನಲ್ ಎಬಿಎಸ್ ಎನ್ನು ಹೊಂದಿರಲೇಬೇಕಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಬಿಡುಗಡೆ ಎಂದು.?

ಪಿಯಾಜಿಯೊ ಸಂಸ್ಥೆಯು ತಮ್ಮ ಎಸ್ಆರ್ ಮ್ಯಾಕ್ಸ್ 300 ಸ್ಕೂಟರ್‍‍ನಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ಮಾಹಿತಿಯನ್ನು ಹೊರಹಾಕಲಿಲ್ಲವಾದರೂ, ಬಿಡುಗಡೆಗೊಂಡರೆ ಈ ಸ್ಕೂಟರ್‍‍ಗಳನ್ನು ಸಿಕೆಡಿ ಮಾರ್ಗದ ಮುಖಾಂತರ ಮಾರುಕಟ್ಟೆಗೆ ಕಾಲಿಡಲಿದೆ.

ಎಪ್ರಿಲಿಯಾ ಸಂಸ್ಥೆಯಿಂದ ಮೊದಲ 300ಸಿಸಿ ಸ್ಕೂಟರ್..!

ಬೆಲೆ (ಅಂದಾಜು)

ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿರುವ ಏಕೈಕ ಮ್ಯಾಕ್ಸಿ ಸ್ಕೂಟರ್ ಆದ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 68,345 ಬೆಲೆಯನ್ನು ಪಡೆದುಕೊಂಡಿದೆ. ಹಾಗಾದರೆ ಇನ್ನು ಹೆಚ್ಚು ಸಾಮರ್ಥ್ಯದೊಂದಿಗೆ ಬಿಡುಗಡೆಯಾಲಿರುವ ಎಪ್ರಿಲಿಯಾ ಎಸ್ಆರ್ 300 ಸ್ಕೂಟರ್‍‍ಗಳು ಸುಮಾರು ರೂ. 2 ರಿಂದ 2.50 (ಅಂದಾಜು) ಲಕ್ಷದ ಎಕ್ಸ್ ಶೋರಂ ಬೆಲೆಯನ್ನು ಪಡೆಯಬಹುದಾಗಿದೆ.

Source: Motoroids

Most Read Articles

Kannada
English summary
Aprilia SR Max 300 Scooter Spotted In India. Read In Kannada
Story first published: Thursday, January 17, 2019, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X