ಬಜಾಜ್ ಪಲ್ಸರ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬರಲಿದೆ ಎಪ್ರಿಲಿಯಾ ಬೈಕ್‍ಗಳು

ಪಿಯಾಜಿಯೊ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ 125-150ಸಿಸಿ ಸೆಗ್ಮೆಂಟ್ ಬೈಕ್‍ಗಳನ್ನು ಬಿಡುಗಡೆಗೊಳಿಸುವ ತಯಾರಿಯಲಿದ್ದು, ಸಂಸ್ಥೆಯು 125-150ಸಿಸಿ ಸೆಗ್ಮೆಂಟ್‍ನಲ್ಲಿ ಬಿಡುಗಡೆಗೊಳಿಸಿದ ಸ್ಕೂಟರ್‍‍ಗಳು ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿರುವ ಸಲುವಾಗಿ ಹೊಸ ಬೈಕ್‍ಗಳನ್ನು ಪರಿಚಯಿಸಲಿವೆ.

ಬಜಾಜ್ ಪಲ್ಸರ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬರಲಿದೆ ಎಪ್ರಿಲಿಯಾ ಬೈಕ್‍ಗಳು

ಪಿಯಾಜಿಯೋ ವೆಹಿಕಲ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಡಿಯಾಗೋ ಗ್ರಾಫಿಯವರು ಬಜಾಜ್ ಪಲ್ಸರ್ ಮತ್ತು ಯಮಹಾ ಆರ್‍15 ಬೈಕ್‍ಗಳಿಗೆ ಪೋಟಿಯಾಗಿ ನಮ್ಮ 150ಸಿಸಿ ಸೆಗ್ಮೆಂಟ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವುದಾಗಿ ಅವರು ಕಚಿತ ಪಡಿಸಿದ್ದಾರೆ. ಕಾಲಿಡಲಿರುವ ಎರಡೂ ಬೈಕ್‍ಗಳಲ್ಲಿ ಒಂದು ಸ್ಟ್ರೀಟ್ ಬೈಕ್ ಆದರೆ ಮತ್ತೊಂದು ಪ್ರೀಮಿಯಂ ಬೈಕ್ ಎಂದು ಹೇಳಲಾಗುತ್ತಿದೆ.

ಬಜಾಜ್ ಪಲ್ಸರ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬರಲಿದೆ ಎಪ್ರಿಲಿಯಾ ಬೈಕ್‍ಗಳು

ಇವುಗಳ ಜೊತೆಗೆ 2018ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲ್ಪಟ್ಟ ಎಪ್ರಿಲಿಯಾ ಆರ್‍ಎಸ್150 ಮತ್ತು ಟ್ಯೊನೊ 150 ಸ್ಟ್ರೀಟ್ ಬೈಕ್‍ಗಳನ್ನೆ ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಇನ್ನು ಈ ಬೈಕ್‍ಗಳ ಕಾನ್ಸೆಪ್ಟ್ ಅನ್ನು ಕೂಡಾ ತಯಾರು ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹಾಗು ಭವಿಷ್ಯದಲ್ಲಿ 125ಸಿಸಿ ಇಂದ 250ಸಿಸಿ ಬೈಕ್‍ಗಳನ್ನು ಪಿಯಾಜಿಯೊ ಹಾಗು ಎಪ್ರಿಲಿಯಾ ಸಂಸ್ಥೆಯು ಪರಿಚಯಿಸಲಿದೆಯಂತೆ.

ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಟ್ಯೂನೊ 150 ಮತ್ತು ಆರ್ ಎಸ್ 150 ಬೈಕುಗಳು 125 ಸಿಸಿ ಮಾದರಿಗಳಲ್ಲಿ ದೊರೆಯುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದೇ ಬೈಕುಗಳನ್ನು 150 ಸಿಸಿ ಬೈಕ್ ಗಳಾಗಿ ಬಿಡುಗಡೆಗೊಳ್ಳಬೇಕೆಂಬ ಸದ್ದು ಕೇಳಿಬರುತ್ತಿದೆ.

ಬಜಾಜ್ ಪಲ್ಸರ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬರಲಿದೆ ಎಪ್ರಿಲಿಯಾ ಬೈಕ್‍ಗಳು

ಎಂಜಿನ್ ಸಾಮರ್ಥ್ಯ
ಎಪ್ರಿಲಿಯಾ ಆರ್ ಎಸ್ 150 ಮತ್ತು ಟ್ಯೂನೊ 150 ಬೈಕ್ ಗಳು ಒಂದೇ ರೀತಿಯಾದ ಫ್ಯುಯಲ್ ಇಂಜೆಕ್ಟೆಡ್ ಎಂಜಿನನ್ನು ಹೊಂದಿದ್ದು, 17ಬಿಹೆಚ್ ಪಿ ಮತ್ತು 14ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಇನ್ನು ಬೈಕುಗಳ ಬ್ರೇಕ್ ವಿಷಯಕ್ಕೆ ಬಂದಾಗ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದ ಚಕ್ರದಲ್ಲಿ 218 ಎಂಎಂ ಡಿಸ್ಕ್ ಹೊಂದಿದ ಎಬಿಎಸ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

ಎಪ್ರಿಲಿಯಾ ಸಂಸ್ಥೆಯು ಈ ಬೈಕ್ ಗಳನ್ನು ಪ್ರದರ್ಶನಗೊಳಿಸಿ, ಭಾರತದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವ ತವಕದಲ್ಲಿದ್ದು, ಇನ್ನು ಬೈಕುಗಳ ಬಿಡುಗಡೆಯ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆಯಲಿದೆಯೆಂದು ಕಾದು ನೋಡಬೇಕಿದೆ.

Most Read Articles

Kannada
English summary
Aprillias New Bikes Will Rival Bajaj Pulsar And Yamaha R15. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X