ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಸ್ 340 ಮತ್ತು ಎಸ್ 450 ಎನ್ನುವ ಎರಡು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಆದರೆ ಇದೀಗ ಮಾರಾಟ ತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿರುವ ಅಥೆರ್ ಸಂಸ್ಥೆಯು ಎಸ್ 340 ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಹೌದು, ಅಥೆರ್ ಸಂಸ್ಥೆಯ ಎಸ್ 450 ಎಲೆಕ್ಟ್ರಿಕ್ ಸ್ಕೂಟರ್‌ ಮಾದರಿಗೆ ಭಾರೀ ಬೇಡಿಕೆ ಬರುತ್ತಿದ್ದರೂ ಸಹ ಕಡಿಮೆ ಬ್ಯಾಟರಿ ಸಾಮಾರ್ಥ್ಯದ ಎಸ್ 340 ಸ್ಕೂಟರ್ ಮಾರಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಶೇ.97ರಷ್ಟು ಗ್ರಾಹಕರು ಎಸ್ 450 ಖರೀದಿಗೆ ಒತ್ತು ನೀಡುತ್ತಿದ್ದು, ಗ್ರಾಹಕರ ಬೇಡಿಕೆಯಿಲ್ಲ ಕಾರಣಕ್ಕೆ ಎಸ್ 340 ಸ್ಕೂಟರ್ ಮಾದರಿಯನ್ನು ಸದ್ಯದಲ್ಲೇ ಪೂರ್ಣಪ್ರಮಾಣದ ಮಾರಾಟವನ್ನು ಬಂದ್ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಸದ್ಯ ಸ್ಟಾಕ್ ಪ್ರಮಾಣವು ಮುಕ್ತಾಯದ ತನಕ ಮಾತ್ರವೇ ಎಸ್ 340 ಆವೃತ್ತಿಯು ಖರೀದಿ ಲಭ್ಯವಿರಲಿದ್ದು, ಹೊಸ ಸ್ಕೂಟರ್ ಉತ್ಪಾದನೆಯನ್ನು ಈಗಾಗಲೇ ಬಂದ್ ಮಾಡಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಖರೀದಿಗೆ ಅನುಕೂರವಾಗುವ ಉದ್ದೇಶದಿಂದ ಎಸ್ 340 ಪರಿಚಯಿಸಿದ್ದರೂ ಕೂಡಾ ಬಹುತೇಕ ಗ್ರಾಹಕರು ಹೈ ಎಂಡ್ ಮಾದರಿಯ ಮೇಲೆ ಆಸಕ್ತಿ ತೊರುತ್ತಿದ್ದಾರೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಇದಲ್ಲದೇ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿಗೆ ಅರ್ಹವಾಗಿರುವ ಕೆಲವೇ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅತ್ಯುತ್ತಮ ಬ್ಯಾಟರಿ ಬಳಕೆಯೊಂದಿಗೆ ಗ್ರಾಹಕರ ಸ್ನೇಹಿಯಾಗಿರುವ ಈ ಸ್ಕೂಟರ್‌ ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೂ ಬಂಪರ್ ಆಫರ್ ನೀಡುತ್ತಿದ್ದು, ಇದರಲ್ಲಿ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿ ಮಾಡಬಹುದಾಗಿದೆ. ಫೇಮ್ 2 ಸಬ್ಸಡಿ ಪಡೆದುಕೊಂಡ ನಂತರ ಅಥೆರ್ ಸ್ಕೂಟರ್‌ಗಳ ಬೆಲೆಯು ಎಸ್ 340 ಮಾದರಿಗೆ ರೂ. 1.13 ಲಕ್ಷ ಮತ್ತು ರೂ. 1.24 ಲಕ್ಷ ನಿಗದಿ ಮಾಡಲಾಗಿದೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಉತ್ತಮ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವುದು ಸಬ್ಸಡಿ ಯೋಜನೆಗೆ ಅರ್ಹವಾಗಲು ಪ್ರಮುಖ ಕಾರಣವಾಗಿದೆ. ಈ ಹಿಂದೆ ಫೇಮ್ ಯೋಜನೆಯ ಮೊದಲ ಹಂತವನ್ನು ಪರಿಚಯಿಸಿದ್ದ ವೇಳೆ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಈ ಬಾರಿ 2ನೇ ಹಂತದ ಯೋಜನೆಯನ್ನು ಪರಿಚಯಿಸುವಾಗ ಕೆಲವು ಬದಲಾವಣೆಗಳನ್ನು ತಂದಿದೆ.

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಳ್ಳಲು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಮಾತ್ರವೇ ಸಬ್ಸಡಿ ಎಂದಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಹೊಸ ಮಾರ್ಗಸೂಚಿಯನ್ನು ಪಾಲನೆ ಮಾಡಿರುವ ಅಥೆರ್ ಸಂಸ್ಥೆಯು ಫೇಮ್ 2 ಗಿಟ್ಟಿಸಿಕೊಂಡಿರುವುದು ಗ್ರಾಹಕರನ್ನು ಆಕರ್ಷಿಸುತ್ತಿದೆ.

MOST READ: ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಈ ಹಿನ್ನೆಲೆಯಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಕಾರ್ಯವು ಇದೀಗ ಜೋರಾಗಿದೆ. ಅಥೆರ್ ಎನರ್ಜಿ ಕೂಡಾ ಈ ನಿಟ್ಟಿನಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಅಥೆರ್ ಸಂಸ್ಥೆಯು ವರ್ಷಾಂತ್ಯಕ್ಕೆ 200 ಚಾರ್ಜಿಂಗ್ ಸ್ಪೆಷನ್‌ಗಳನ್ನು ದೇಶದ ವಿವಿಧಡೆ ತೆರೆಯಲು ನಿರ್ಧರಿಸಿದ್ದು, ಹಾಗೆಯೇ 2022ರ ವೇಳೆಗೆ ಬರೋಬ್ಬರಿ 6,500 ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಗುರಿ ಹೊಂದಿದೆ. ಇದಕ್ಕಾಗಿ ರೂ.130 ಕೋಟಿ ಮೀಸಲಿಟ್ಟಿರುವ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭಾರೀ ಪ್ರಮಾಣದ ಸಬ್ಸಡಿ ಪಡೆದುಕೊಳ್ಳುತ್ತಿದೆ.

MOST READ: ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ಎಸ್ 340 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅಥೆರ್..!

ಇದರೊಂದಿಗೆ ಅಥೆರ್ ಎನರ್ಜಿ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊರತರಲು ನಿರ್ಧರಿಸಲಾಗಿದ್ದು, ಕೈಗೆಟುಕುವ ಬೆಲೆಗಳಲ್ಲಿ ಅತಿಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣದ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

Most Read Articles

Kannada
English summary
Ather 340 Electric Scooter Discontinued: Here’s Why. Read in Kannada.
Story first published: Tuesday, September 17, 2019, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X