ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಫೇಮ್ 2 ಯೋಜನೆಯ ಅಡಿಯಲ್ಲಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹೊಸ ಸಬ್ಸಡಿ ಯೋಜನೆಯಲ್ಲಿ ಅಥೆರ್ ನಿರ್ಮಾಣದ ಎಸ್ 340 ಮತ್ತು ಎಸ್ 450 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಗರಿಷ್ಠ ರೂ.27 ಸಾವಿರ ಸಬ್ಸಡಿ ದೊರೆಯಲಿದೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೂ ಬಂಪರ್ ಆಫರ್ ನೀಡುತ್ತಿದೆ. ಇದರಲ್ಲಿ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಾಗಲಿವೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಫೇಮ್ 2 ಸಬ್ಸಡಿ ಪಡೆದುಕೊಂಡ ನಂತರ ಅಥೆರ್ ಸ್ಕೂಟರ್‌ಗಳ ಬೆಲೆಯು ಎಸ್ 340 ಮಾದರಿಗೆ ರೂ. 1.13 ಲಕ್ಷ ಮತ್ತು ರೂ. 1.24 ಲಕ್ಷ ನಿಗದಿ ಮಾಡಲಾಗಿದ್ದು, ಉತ್ತಮ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವುದು ಸಬ್ಸಡಿ ಯೋಜನೆಗೆ ಅರ್ಹವಾಗಲು ಪ್ರಮುಖ ಕಾರಣವಾಗಿದೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಈ ಹಿಂದೆ ಫೇಮ್ ಯೋಜನೆಯ ಮೊದಲ ಹಂತವನ್ನು ಪರಿಚಯಿಸಿದ್ದ ವೇಳೆ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಈ ಬಾರಿ 2ನೇ ಹಂತದ ಯೋಜನೆಯನ್ನು ಪರಿಚಯಿಸುವ ಕೆಲವು ಬದಲಾವಣೆಗಳನ್ನು ತಂದಿದೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಳ್ಳಲು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಮಾತ್ರವೇ ಸಬ್ಸಡಿ ಎಂದಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಈ ಮೂಲಕ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ ಮತ್ತು ಮಾರಾಟದ ಜೊತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ಹೆಚ್ಚಿಸುವುದು ಈ ಯೋಜನೆ ಮೂಲ ಉದ್ದೇಶವಾಗಿದೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಈ ಹಿನ್ನೆಲೆ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಕಾರ್ಯ ಜೋರಾಗಿದೆ. ಅಥೆರ್ ಎನರ್ಜಿ ಕೂಡಾ ಈ ನಿಟ್ಟಿನಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

MOST READ: ಅಡ್ವೆಂಚರ್ ಪ್ರಿಯರ ಹೀರೋ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬಿಡುಗಡೆ

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಅಥೆರ್ ಸಂಸ್ಥೆಯು ವರ್ಷಾಂತ್ಯಕ್ಕೆ 200 ಚಾರ್ಜಿಂಗ್ ಸ್ಪೆಷನ್‌ಗಳನ್ನು ದೇಶದ ವಿವಿಧಡೆ ತೆರೆಯಲು ನಿರ್ಧರಿಸಿದ್ದು, ಹಾಗೆಯೇ 2022ರ ವೇಳೆಗೆ ಬರೋಬ್ಬರಿ 6,500 ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಗುರಿ ಹೊಂದಿದೆ. ಇದಕ್ಕಾಗಿ ರೂ.130 ಕೋಟಿ ಮೀಸಲಿಟ್ಟಿರುವ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭಾರೀ ಪ್ರಮಾಣದ ಸಬ್ಸಡಿ ಪಡೆದುಕೊಳ್ಳಲಿದೆ.

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಹೀಗಾಗಿ ಆಟೋ ಉದ್ಯಮದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಮೇಲೆ ಸಾಕಷ್ಟು ಒತ್ತು ನೀಡುತ್ತಿರುವ ವಾಹನ ಉತ್ಪಾದಕರು ಮುಂದಿನ 2020 ರ ಆರಂಭದಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದ್ದು, ಇದಕ್ಕೆ ಪೂರಕವಾಗಿ ನಗರಪ್ರದೇಶಗಳಲ್ಲಿ ಪ್ರತಿ 3 ಕಿ.ಮಿಗೆ ಒಂದರಂತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಕೇಂದ್ರ ಸರ್ಕಾರವು ಬೃಹತ್ ಯೋಜನೆ ರೂಪಿಸಿದೆ.

MOST READ: ಹೆಲ್ಮೆಟ್‌ಗೂ ಬಂತೂ ವೈಪರ್, ಐಡಿಯಾ ಸೂಪರ್ರೋ ಸೂಪರ್..!

ಫೇಮ್ 2 ಸಬ್ಸಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್

ಇದಕ್ಕಾಗಿ ಸಬ್ಸಡಿಯನ್ನು ಘೋಷಣೆ ಮಾಡಲಾಗಿದ್ದು, ನಗರಪ್ರದೇಶಗಳಲ್ಲಿ ಪ್ರತಿ 3 ಕಿ.ಮಿಗೆ ಒಂದರಂತೆ ಚಾರ್ಜಿಂಗ್ ಸ್ಟೆಷನ್ ತಲೆ ಎತ್ತಲಿದ್ದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 25 ಕಿ.ಮಿಗೆ ಒಂದರಂತೆ ಚಾರ್ಜಿಂಗ್ ಸ್ಪೆಷನ್‌ಗಳು ಕಾರ್ಯನಿರ್ವಹಿಸಲಿವೆ.

Most Read Articles

Kannada
English summary
Ather 450 Deliveries To Begin — Scooter Is FAME II Compliant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X