ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಕಳೆದ ವರ್ಷವಷ್ಟೆ ನಮ್ಮ ಬೆಂಗಳೂರಿನ ಮೂಲದ ಸಂಸ್ಥೆಯದ ಅಥೆರ್ ತಮ್ಮ ಎರಡು ಹೊಸ ಎಲೆಕ್ಟ್ರಿಕ್ ಸ್ಕುಟರ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ತಮ್ಮ ಮಾರಾಟದ ಸಂಖ್ಯೆ ಮತ್ತು ರಸ್ತೆಯಲ್ಲಿ ಹೆಚ್ಚಿನದಾಗಿ ಎಲೆಕ್ಟ್ರಿಕ್ ವಾಹನಗಳು ಓಡಾಡಬೇಕು ಎಂಬ ಉದ್ದೇಶದಿಂದ ತಮ್ಮ ಸ್ಕೂಟರ್‍‍ಗಳನ್ನು ಲೀಸ್‍ಗೆ ನೀಡಲು ಶುರು ಮಾಡಲಾಗಿತ್ತು.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಅಥೆರ್ ಎನರ್ಜಿ ಸಂಸ್ಥೆಯು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆಯೆ ಚೆನ್ನೈ ನಗರದಲ್ಲಿಯು ಸಹ ತಮ್ಮ ವ್ಯಾಪಾರವನ್ನು ಶುರು ಮಾಡಲಾಗಿದ್ದು, ಮತ್ತು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ನಿರ್ಮಾಣಕ್ಕಾಗಿ ಸುಮಾರು ರೂ. 130 ಕೋಟಿ ಹಣ ಹೂಡಿಕೆ ಮಾಡಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಅವುಗಳ ಮೇಲಿರುವ ಜಿಎಸ್‍ಟಿ ಧರವನ್ನು ಕಡಿತ ಮಾಡಲಾಗಿದ್ದು, ಅಥೆರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಹೌದು, ಕೆಲ ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮೇಲಿದ್ದ ಜಿಎಸ್‍ಟಿಯನ್ನಿ ಶೇಕಡ 12 ರಿಂದ ಶೇಕಡ 5ಕ್ಕೆ ಇಳಿಸಲಾಗಿದ್ದು, ಇದರಿಂದಾಗಿ ಅಥೆರ್ ಎನರ್ಜಿ ಸ್ಕೂಟರ್‍‍‍ಗಳ ಬೆಲೆಯಲ್ಲಿ ಸುಮಾರು ರೂ. 8 ರಿಂದ 10 ಸಾವಿರದ ವರೆಗು ಕಡಿತವನ್ನು ಪಡೆಯಬಹುದಾಗಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಫೇಮ್ 2 ಸಬ್ಸಡಿ ಪಡೆದುಕೊಂಡ ನಂತರ ಅಥೆರ್ ಸ್ಕೂಟರ್‌ಗಳ ಬೆಲೆಯು ಎಸ್ 340 ಮಾದರಿಗೆ ರೂ. 1.13 ಲಕ್ಷ ಮತ್ತು ರೂ. 1.24 ಲಕ್ಷ ನಿಗದಿ ಮಾಡಲಾಗಿದ್ದು, ಉತ್ತಮ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವುದು ಸಬ್ಸಡಿ ಯೋಜನೆಗೆ ಅರ್ಹವಾಗಲು ಪ್ರಮುಖ ಕಾರಣವಾಗಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಸ್ಕೂಟರ್ ಪರ್ಫಾಮೆನ್ಸ್

ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್‌ಗಳು 20ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 450 ಸ್ಕೂಟರ್ ಮಾದರಿಗಳು 20.5-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತೆಗೆ ಗಂಟೆಗೆ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ 340 ಸ್ಕೂಟರ್‌ಗಳು ಕೇವಲ 5.1 ಸೇಕೆಂಡುಗಳಲ್ಲಿ 40 ಕಿ.ಮಿ ವೇಗ ಪಡೆದುಕೊಂಡರೇ, 450 ಸ್ಕೂಟರ್‌ಗಳು 3.9 ಸೇಕೆಂಡುಗಳಲ್ಲಿ 40 ಕಿ.ಮಿ ವೇಗದಲ್ಲಿ ಚಲಿಸಬಲ್ಲವು.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಬ್ಯಾಟರಿ ಸಾಮರ್ಥ್ಯ

ಒಂದು ಬಾರಿ ಪೂರ್ಣಪ್ರಮಾಣ ಬ್ಯಾಟರಿ ಚಾರ್ಜ್ ಮಾಡಿದಲ್ಲಿ 340 ಸ್ಕೂಟರ್‌ಗಳು 60 ಕಿ.ಮೀ ಮೈಲೇಜ್ ನೀಡಿದಲ್ಲಿ, 450 ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು. ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇನ್‌ಬಿಲ್ಟ್ ರಿವರ್ಸ್ ಅಸಿಸ್ಟ್ ಫಿಚರ್ಸ್ ನೀಡಲಾಗಿದ್ದು, ಹಿಮ್ಮುಖವಾಗಿ ಪ್ರತಿ ಗಂಟೆಗೆ 5 ಕಿ.ಮಿ ವೇಗದಲ್ಲಿ ಚಲಿಸುವ ಗುಣವಿಶೇಷತೆ ಹೊಂದಿದೆ. ಇದು ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಸ್ಕೂಟರ್‌ಗಳನ್ನು ಹೊರತೆಗೆಯಲು ಹೆಚ್ಚು ಅನುಕೂಲಕರವಾಗಲಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಬೈಕಿನ ಹೊರ ವೈಶಿಷ್ಟ್ಯತೆಗಳು

ಅಥೆರ್ 340 ಮತ್ತು 450 ಸ್ಕೂಟರ್‌ಗಳಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ನ್ಯಾವಿಗೆಷನ್, ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡಬಹುದಾದ ಪಾರ್ಕಿಂಗ್ ಅಸಿಸ್ಟ್, ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್ ಸೌಲಭ್ಯ ಸಹ ಇದರಲ್ಲಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಈ ಹೊಸ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಸೌಲಭ್ಯಗಳು ಸಹ ದೊರೆಯಿದ್ದು, ಮನೆ ಅಂಗಳದಲ್ಲಿ ಉಚಿತವಾಗಿ ಚಾರ್ಜಿಂಗ್ ಪಾಯಿಂಟ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಮೂಲಕವೇ ಸ್ಕೂಟರಿನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಇದಲ್ಲದೇ ಅಥೆರ್ 340 ಮತ್ತು 450 ಖರೀದಿ ಮಾಡುವ ಗ್ರಾಹಕರಿಗೆ ಅನುಕೂಲಕರವಾಗುವಂತೆ ಬೆಂಗಳೂರಿನ 30 ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲಾಗಿದ್ದು, ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಒಂದು ಗಂಟೆ ಕಾಲ ಚಾರ್ಜಿಂಗ್ ಮಾಡಿದಲ್ಲಿ ಕನಿಷ್ಠ 50 ಕಿ.ಮೀ ಮೈಲೇಜ್ ದೊರೆಯಲಿದೆ. ಅಥೆರ್ ಸ್ಕೂಟರ್‌ಗಳಲ್ಲಿನ ಸುರಕ್ಷೆತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಸ್ಕೂಟರ್‌ಗಳಲ್ಲೂ ಮುಂಭಾಗದ ಹಾಗೂ ಹಿಂಭಾಗದ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯ ಒಗದಿಸಿದೆ.

ಜಿಎಸ್‍‍ಟಿ ಎಫೆಕ್ಟ್ - ಅಥೆರ್ ಎನೆರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬೆಲೆ ಕಡಿತ

ಅಥೆರ್ ಸಂಸ್ಥೆಯು ವರ್ಷಾಂತ್ಯಕ್ಕೆ 200 ಚಾರ್ಜಿಂಗ್ ಸ್ಪೆಷನ್‌ಗಳನ್ನು ದೇಶದ ವಿವಿಧಡೆ ತೆರೆಯಲು ನಿರ್ಧರಿಸಿದ್ದು, ಹಾಗೆಯೇ 2022ರ ವೇಳೆಗೆ ಬರೋಬ್ಬರಿ 6,500 ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಗುರಿ ಹೊಂದಿದೆ. ಇದಕ್ಕಾಗಿ ರೂ.130 ಕೋಟಿ ಮೀಸಲಿಟ್ಟಿರುವ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭಾರೀ ಪ್ರಮಾಣದ ಸಬ್ಸಡಿ ಪಡೆದುಕೊಳ್ಳಲಿದೆ.

Most Read Articles

Kannada
English summary
Ather Electric scooters Production Boost Post GST Cut Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X