ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಸದ್ಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಬೆಂಗಳೂರು ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಅಗ್ಗದ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಅಥೆರ್ ಎನರ್ಜಿ ಸಂಸ್ಥೆಯು ಸದ್ಯ ಎಸ್340 ಮತ್ತು ಎಸ್450 ಎನ್ನುವ ಎರಡು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ದುಬಾರಿ ಬೆಲೆ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅಥೆರ್ ಸಿಲುಕಿಕೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ಅಗ್ಗದ ಬೆಲೆಯ ಸ್ಕೂಟರ್‌ಗಳನ್ನು ನಿರ್ಮಾಣ ಮಾಡುವ ಸಂಬಂಧ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್340 ಮಾದರಿಯು ರೂ.1.13 ಲಕ್ಷ ಮತ್ತು ಎಸ್450 ಮಾದರಿಯು ರೂ.1.24 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಸ್ಕೂಟರ್‌ಗಳಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಹಿನ್ನಲೆಯಲ್ಲಿ ಬಹುತೇಕ ಗ್ರಾಹಕರು ಅಥೆರ್ ಸ್ಕೂಟರ್‌ಗಳ ಬಗೆಗೆ ಉತ್ತಮ ಅಭಿಪ್ರಾಯ ಹೊಂದಿದ್ದರೂ ಸಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಈ ಬಗ್ಗೆ ಮಾರುಕಟ್ಟೆ ಅಧ್ಯಯನ ನಡೆಸಿರುವ ಅಥೆರ್ ಎನರ್ಜಿ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಗ್ಗದ ಬೆಲೆಯಲ್ಲೇ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸುವತ್ತ ಚಿಂತನೆ ನಡೆಸಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಉತ್ಪಾದನಾ ಶೈಲಿಯನ್ನು ಬದಲಿಸುವ ಸುಳಿವು ನೀಡಿದೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಇದಲ್ಲದೇ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸುವ ಸಂಬಂಧ ಆರಂಭವಾಗಿರುವ ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಯ ಹೊರತಾಗಿಯೂ ದುಬಾರಿ ಬೆಲೆ ಹೊಂದಿರುವ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ನಿಗದಿತ ಮಟ್ಟದ ಮಾರಾಟ ಗುರಿ ತಲುಪುವಲ್ಲಿ ಹಿನ್ನಡೆ ಅನುಭಿಸುತ್ತಿವೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಆದರೂ ಕೂಡಾ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುವ ಭರವಸೆಯೊಂದಿಗೆ ಮಹತ್ವದ ಹೆಜ್ಜೆಯಿಡುತ್ತಿರುವ ಅಥೆರ್ ಸಂಸ್ಥೆಯು ಮುಂದಿನ ಎರಡು ವರ್ಷದೊಳಗೆ ಹೋಂಡಾ ಮತ್ತು ಎಪ್ರಿಲಿಯಾ ಪೆಟ್ರೋಲ್ ಸ್ಕೂಟರ್‌ಗಳ ಬೆಲೆಯಲ್ಲೇ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಮತ್ತೊಂದು ಪ್ರಮುಖ ವಿಚಾರ ಅಂದರೆ, ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಕಿರುವ ಪ್ರಮುಖ ಲೀಥಿಯಂ ಅಯಾನ್ ಬ್ಯಾಟರಿ ಸಾಧನವನ್ನು ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗಳಿದ್ದು, ಭಾರತದಲ್ಲಿ ಯಾವುದೇ ಸಂಸ್ಥೆಯು ಬ್ಯಾಟರಿ ಉತ್ಪಾದನಾ ಘಟಕಗಳನ್ನು ಹೊಂದಿಲ್ಲ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಸಾಮಾನ್ಯ ವಾಹನಗಳ ಬೆಲೆಗಿಂತ ಅಧಿಕವಾಗಲು ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿಯೇ ಸಿದ್ದಗೊಳ್ಳುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಬಳಕೆ ಮಾಡಿದ್ದಲ್ಲಿ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಈ ಸಂಬಂಧ ಭಾರತದಲ್ಲೇ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯಲು ಈಗಾಗಲೇ ಹಲವಾರು ಸಂಸ್ಥೆಗಳು ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮುಂದಿನ 1 ವರ್ಷದೊಳಗೆ ಸ್ಥಳೀಯವಾಗಿ ನಿರ್ಮಾಣವಾದ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿ ಸಾಧನವು ಖರೀದಿಗೆ ಲಭ್ಯವಾಗಲಿದೆ.

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಅಲ್ಲಿನ ತನಕ ಲೀಥಿಯಂ ಅಯಾನ್ ಬ್ಯಾಟರಿಗಾಗಿ ವಿದೇಶಿ ಮಾರುಕಟ್ಟೆಯನ್ನೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆಗಳಿದ್ದು, ಸ್ಥಳೀಯವಾಗಿ ಲಭ್ಯವಾಗುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆ ಶುರುವಾದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.

MOST READ: ಎರಡೂವರೆ ಟನ್ ತೂಕದ ಸ್ಕಾರ್ಪಿಯೋ ಕಾರನ್ನು ಸಲೀಸಾಗಿ ಎಳೆದ ಆರ್15 ಬೈಕ್..!

ಹೋಂಡಾ ಮತ್ತು ಎಪ್ರಿಲಿಯಾಗೆ ಪೈಪೋಟಿಯಾಗಿ ಅಥೆರ್‌ನಿಂದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್..!

ಇನ್ನು ಅಥೆರ್ ಎನರ್ಜಿ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲೇ ವಿಭಿನ್ನ ಎನ್ನಿಸುವ ರೀತಿಯಲ್ಲಿ ಎಸ್340 ಮತ್ತು ಎಸ್450 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದು, ಗಂಟೆಗೆ 80 ಕಿ.ಮಿ ಟಾಪ್ ಸ್ಪೀಡ್‌ದೊಂದಿಗೆ ಪ್ರತಿ ಚಾರ್ಜ್‌ನಲ್ಲಿ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

Most Read Articles

Kannada
English summary
Ather Energy Working On Affordable Electric Scooter — Will Compete With Honda and Aprilia. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X