ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಭಾರತೀಯ ಆಟೋ ಮೊಬೈಲ್ ಉದ್ಯಮವು ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಕಂಪನಿಗಳು ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿವೆ. ವಾಹನಗಳ ಮಾರಾಟವಾಗದೇ ನಷ್ಟವನ್ನು ಅನುಭವಿಸುತ್ತಿರುವ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಇತ್ತೀಚಿಗೆ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಕಂಪನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ್ದವು. ಇತ್ತೀಚಿಗೆ ಮಾತನಾಡಿದ ಬಜಾಜ್ ಆಟೋ ಇಂಡಿಯಾದ ಎಂ‍‍ಡಿ ರಾಜೀವ್ ಬಜಾಜ್‍‍ರವರು, ಉದ್ಯೋಗ ಕಡಿತ ಅನಗತ್ಯವೆಂದು ಹೇಳಿದ್ದಾರೆ. ಆಟೋ ಉದ್ಯಮದಲ್ಲಿನ ಮಾರಾಟ ಪ್ರಮಾಣವು ನಿಧಾನಗತಿಯಲ್ಲಿರುವ ಕಾರಣ ಉದ್ಯೋಗ ಕಡಿತ ಮಾಡುವುದು ನ್ಯಾಯ ಸಮ್ಮತವಲ್ಲವೆಂದು ರಾಜೀವ್ ಬಜಾಜ್‍‍ರವರು ತಿಳಿಸಿದ್ದಾರೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಇಟಿ ಆಟೋ ವರದಿಗಳ ಪ್ರಕಾರ, ರಾಜೀವ್ ಬಜಾಜ್ ಅವರು ಮಾರಾಟದಲ್ಲಿನ ಮಂದಗತಿಗೆ ಮುಖ್ಯವಾಗಿ ಭಾರತದ ಆಟೋಮೊಬೈಲ್ ಕಂಪನಿಗಳಲ್ಲಿರುವ ನ್ಯೂನತೆಗಳೇ ಕಾರಣವೆಂದು ಹೇಳಿದ್ದಾರೆ. ಭಾರತದಲ್ಲಿ ತಯಾರಾಗುವ ವಾಹನಗಳು ಸಾಧಾರಣ ಗುಣಮಟ್ಟದ್ದಾಗಿವೆ ಎಂದು ಬಜಾಜ್‍‍ರವರು ಹೇಳಿದ್ದಾರೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಭಾರತದ ಬಹುತೇಕ ಕಂಪನಿಗಳಿಗೆ, ತಮ್ಮ ವಾಹನಗಳು ಸಾಧಾರಣ ಗುಣಮಟ್ಟದಾಗಿರುವ ಕಾರಣಕ್ಕೆ ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಯಾವುದೇ ಕಂಪನಿಯ ಹೆಸರನ್ನು ಹೇಳಲು ಬಯಸುವುದಿಲ್ಲ. ನಮ್ಮ ದೇಶದಲ್ಲಿ ಸ್ಕೂಟರ್, ಬೈಕ್, ಕಾರ್, ಜೀಪ್, ಎಸ್‍‍ಯು‍‍ವಿ, ಟ್ರಕ್‌, ಬಸ್‌ ಎಲ್ಲವೂ ತಯಾರಾಗುತ್ತವೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಇವೆಲ್ಲವೂ ನಮ್ಮ ದೇಶದಲ್ಲಿಯೇ ತಯಾರಾಗಿ ಇಲ್ಲಿಯೇ ಮಾರಾಟವಾಗುತ್ತಿವೆ. ಇವು ವಿಶ್ವ ದರ್ಜೆಯ ಉತ್ಪನ್ನಗಳಾಗಿಲ್ಲ ಎಂದು ಹೇಳಿದರು. ಉದ್ಯೋಗ ಕಡಿತದ ಬಗ್ಗೆ ಮಾತನಾಡಿದ ಅವರು, ಆಟೋ ಉದ್ಯಮವು ಕಠಿಣ ಸಮಯವನ್ನು ಎದುರಿಸುತ್ತಿದೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಆದರೂ 5% ನಿಂದ 7%ರಷ್ಟು ಕುಸಿತವನ್ನು ಬಿಕ್ಕಟ್ಟು ಎಂದು ಹೇಳುವುದು ಸರಿಯಲ್ಲ. ನಾನು ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ನಾನು ನನ್ನ ಉದ್ಯೋಗಿಗಳಿಗೆ ಹೇಳಿದರೆ, ನನ್ನ ಉದ್ಯೋಗಿಗಳು ನನ್ನನ್ನು ಹೇಗೆ ನಂಬುತ್ತಾರೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಇದು ದ್ವಿಮುಖ ನೀತಿಯಾಗಲಿದೆ. ವಾಹನಗಳ ಮಾರಾಟದ 4%ನಷ್ಟು ಮಾತ್ರ ನೌಕರರಿಗೆ ಸಂಬಳವನ್ನಾಗಿ ನೀಡಲಾಗುತ್ತಿದೆ. ಇಷ್ಟು ಸಣ್ಣ ಪ್ರಮಾಣದ ಹಣವನ್ನು ಉಳಿಸಲು ಉದ್ಯೋಗಿಗಳನ್ನು ತೆಗೆದು ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ನಾನು ನನ್ನ ಕಂಪನಿಯ ನೌಕರರ ಜೀವನ ಹಾಗೂ ಅವರ ಕುಟುಂಬಗಳೊಂದಿಗೆ ಆಟವಾಡಲು ಇಷ್ಟಪಡುವುದಿಲ್ಲ ಎಂದು ರಾಜೀವ್ ಬಜಾಜ್‍‍ರವರು ಹೇಳಿದರು. ಭಾರತೀಯ ಆಟೋಮೋಬೈಲ್ ಉದ್ಯಮವು ನಿಧಾನಗತಿಯ ಮಾರಾಟವನ್ನು ಎದುರಿಸುತ್ತಿದೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಮಾರಾಟದ ಮಂದಗತಿಯಿಂದಾಗಿ ಅನೇಕ ವಾಹನ ತಯಾರಕ ಕಂಪನಿಗಳು ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ. ದೊಡ್ಡ ಕಾರು ಕಂಪನಿಗಳಾದ ಮಾರುತಿ ಸುಜುಕಿ ಹಾಗೂ ಮಹೀಂದ್ರಾ ಕಂಪನಿಗಳು ಈಗಾಗಲೇ ಉದ್ಯೋಗವನ್ನು ಕಡಿತಗೊಳಿಸಿವೆ.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಮಾರುಕಟ್ಟೆಯಲ್ಲಿನ ನಿಧಾನಗತಿಯ ಮಾರಾಟದಿಂದಾಗಿ, ಬಹುತೇಕ ಕಂಪನಿಗಳು, ಸತತವಾಗಿ ವಾಹನಗಳನ್ನು ಉತ್ಪಾದಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಾಹನಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುವವರೆಗೆ ಅನೇಕ ಕಂಪನಿಗಳು ತಮ್ಮ ಕಂಪನಿಯ ಉತ್ಪನ್ನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಮುಂಬರುವ ಹಬ್ಬದ ಅವಧಿಯಲ್ಲಿ ವಾಹನಗಳ ಮಾರಾಟವು ಸುಧಾರಿಸಲಿದೆ ಎಂಬುದು ಬಹುತೇಕ ಉದ್ಯಮ ತಜ್ಞರ ಅಭಿಪ್ರಾಯವಾಗಿದೆ.

ಸಂಕಷ್ಟದಲ್ಲೂ ಉದ್ಯೋಗ ಕಡಿತ ಅನಗತ್ಯವೆಂದ ರಾಜೀವ್ ಬಜಾಜ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಜೀವ್ ಬಜಾಜ್ ಉದ್ಯೋಗ ಕಡಿತದ ಬಗ್ಗೆ ಬಲವಾದ ಹೇಳಿಕೆ ನೀಡಿದ್ದಾರೆ. ತಾತ್ಕಾಲಿಕವಾಗಿಯೇ ಆಗಲಿ ಅಥವಾ ಶಾಶ್ವತವಾಗಿಯೇ ಆಗಲಿ ಉದ್ಯೋಗಗಳನ್ನು ಕಡಿತಗೊಳಿಸುವುದರಿಂದ ಕಂಪನಿಯ ಮಾರಾಟ ಪ್ರಮಾಣವು ಹೆಚ್ಚುವುದಿಲ್ಲ. ಹಾಗೂ ಕಂಪನಿಯ ಹಣಕಾಸು ಸ್ಥಿತಿಯೂ ಸುಧಾರಿಸುವುದಿಲ್ಲ.

Most Read Articles

Kannada
English summary
Rajiv Bajaj Speaks Against Job Cuts During Auto Industry Slowdown - Read in kannada
Story first published: Friday, August 23, 2019, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X