ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಎವಾನ್ ಮೋಟಾರ್ಸ್ ಎರಡು ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪುಣೆ ಮೋಟಾರ್ ಶೋದಲ್ಲಿ ಪ್ರದರ್ಶಿಸಿದೆ. ಪ್ರದರ್ಶಿಸಲಾದ ಈ ಎರಡು ಸ್ಕೂಟರ್‍‍ಗಳ ಪೈಕಿ, ಟಾಪ್ ಎಂಡ್ ಸ್ಕೂಟರ್‍, ಸಿಂಗಲ್ ಜಾರ್ಜ್‍‍ನಿಂದ 200 ಕಿ.ಮೀ ದೂರ ಚಲಿಸಲಿದೆ.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಫ್ಲಾಗ್‍‍ಶಿಪ್ ಸ್ಕೂಟರ್ 72 ವಿ 22ಎ‍ಎಚ್ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 1200ಡಬ್ಲ್ಯು ಮೋಟರ್ ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ. ಲೊವರ್-ಸ್ಪೆಕ್ ಮಾದರಿಯನ್ನು ಪೂರ್ತಿಯಾಗಿ ಜಾರ್ಚ್ ಮಾಡಿದರೆ 80 ಕಿ.ಮೀ ಚಲಿಸುತ್ತದೆ.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಎಂಟ್ರಿ-ಲೆವೆಲ್ ಸ್ಕೂಟರ್ 60 ವಿ 35 ಎಎಚ್ ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಮತ್ತು 800 ಡಬ್ಲ್ಯು ಮೋಟರ್ ಅನ್ನು ಹೊಂದಿದೆ. ಈ ಸ್ಕೂಟರ್ ಗರಿಷ್ಟ ಟಾಪ್ ಸ್ಪೀಡ್ 45 ಕಿ.ಮೀ ವೇಗದಲ್ಲಿ ಚಲಿಸುವ ಸಾಮಥ್ಯ ಹೊಂದಿದೆ. ಬೈಕಿನ ಬ್ರೇಕ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಸ್ಕೂಟರ್‍‍ಗಳಲ್ಲಿಯೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಎವಾನ್ ಮೋಟಾರ್ಸ್ ಮುಖ್ಯಸ್ಥ ಪಂಕಜ್ ತಿವಾರಿರವರು ಮಾತನಾಡಿ, ಪುಣೆಯ ಮೋಟಾರ್ ಶೋ ಎಂಬ ಪ್ರತಿಷ್ಠಿತ ವೇದಿಕೆಯಲ್ಲಿ ನಮ್ಮ ಇ- ವಾಹನಗಳ ಹೊಸ ಪರಿಕಲ್ಪನೆಯನ್ನು ಬಹಿರಂಗಪಡಿಸಲು ನಾವು ರೋಮಾಂಚನಗೋಂಡಿದ್ದೇವೆ. ಎವಾನ್ ಮೋಟಾರ್ಸ್ ತಂಡವು ಚಿಕ್ಕ ಅಂಶಗಳ ಬಗ್ಗೆಯು ವಿಶೇಷ ಪ್ರತಿನಿಧ್ಯವಹಿಸಿ ಅತುತ್ತಮ ವೈಶಿಷ್ಟ್ಯ ಮತ್ತು ಬೆರಗುಗೊಳಿಸುವಂತಹ ಆಕರ್ಷಕ ವಿನ್ಯಾಸವನ್ನು ಮೂಡಿಸಿದೆ. ಎರಡು ಪರಿಕಲ್ಪನೆಯನ್ನು ಪ್ರದರ್ಶಿಸಿದ ಬಳಿಕ ನಾವು ಉತ್ತಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ ಮತ್ತು ತದನಂತರ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಕಂಪನಿಯು ಮೋಟಾರ್ ಶೋ‍ನಲ್ಲಿ ಪ್ರದರ್ಶಿಸಿದ ಪ್ರಮುಖ ಉದ್ದೇಶವೆಂದರೆ ಸ್ಕೂಟರ್‍‍ಗಳಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಪಡೆದು ಅದರ ಕುರಿತು ಅಧ್ಯಯನ ನಡೆಸಲು ಯೋಜಿಸಿದೆ ಮತ್ತು ಉತ್ಪಾದನಾ ಹಂತದ ಕುರಿತು ಹೆಚ್ಚಿನ ಸಂಶೋಧನೆಯನ್ನು ಕಂಪನಿ ಮುಂದುವರಿಸಲಿದೆ.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಎವಾನ್ ಮೋಟಾರ್ಸ್ ಇಂಡಿಯಾ ಎಲೆಕ್ಟ್ರಿಕ್ ವಾಹನಗಳ ಕಂಪನಿಯಾಗಿದ್ದು, ಇದರ ಉದ್ದೇಶವು ಭಾರತದಲ್ಲಿ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸಿ ಮಾರಾಟ ಮಾಡುವುದು. ಈ ಉದ್ದೇಶದಿಂದ ಈ ಕಂಪನಿಯನ್ನು 2015ರಲ್ಲಿ ಸ್ಥಾಪಿಸಲಾಯಿತು.

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಕಂಪನಿಯ ಸದ್ಯಕ್ಕೆ ಕ್ಸೆರೊ ಮತ್ತು ಕ್ಸೆರೊ ಪ್ಲಸ್ ಮತ್ತು ಟ್ರೆಂಡ್ಇ ಎಂಬ 3 ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ. ಈ ಮೂರು ಸ್ಕೂಟರ್‍‍‍ಗಳಲ್ಲಿ ಲಿಥಿಯಾ ಅಯಾನ್ ಭ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಎಲ್ಲಾ ಮೂರು ಸ್ಕೂಟರ್‍‍‍ಗಳು, ಮುಂಭಾಗದಲ್ಲಿ ಟಿಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಟ್ರಿಂಗ್ ಹೊಂದಿವೆ. ಮೂರೂ ಸ್ಕೂಟರ್‍‍‍ಗಳಲ್ಲಿ ಮುಂಭಾಗದಲ್ಲಿ ಡೀಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಎವಾನ್ ಮೋಟಾರ್ಸ್ ಅವರ ಈ ಮೂರು ಸ್ಕೂಟರ್‍‍ಗಳು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಗಮನಸೆಳೆದಿವೆ. ಎವಾನ್ ಮೋಟಾರ್ಸ್ ಫೇಮ್ ಯೋಜನೆಗೆ ಅರ್ಹತೆಯನ್ನು ಪಡೆದುಕೊಂಡಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಇ-ಸ್ಕೂಟರ್‍‍ಗಳು ಸಿಂಗಲ್ ಜಾರ್ಚ್‍‍ನಲ್ಲಿ 80 ಕಿ.ಮೀ ಚಲಿಸುವಂತೆ ಇರಬೇಕು ಮತ್ತು 40 ಕಿ.ಮೀ ಸ್ಪೀಡ್ ಹೊಂದಿರಬೇಕು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್

ಒಂದು ಸಿಂಗಲ್ ಜಾರ್ಜ್ 200 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‍ ಪರಿಕಲ್ಪನೆಯು ಆಕರ್ಷಕ ವಿನ್ಯಾಸದಿಂದ ಕೊಡಿದೆ. ಪ್ರಸ್ತುತವಾಗಿ ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಅಧಿಕ ಮತ್ತು ವಾಯುಮಾಲಿನ್ಯ ಈ ಎಲ್ಲಾ ಕಾರಣದಿಂದ ಜನರು ಕೂಡ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅವನ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಒಕಿನಾವಾ ಶ್ರೇಣಿಯ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Avan Motors Showcased Two Electric Scooter Concepts At The Pune Motor Show 2019 - Read in Kannada
Story first published: Tuesday, September 24, 2019, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X