ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಬಜಾಜ್ ಆಟೋ ಕಂಪನಿಯು ತನ್ನ ಹಸ್ಕ್ ವರ್ನಾ ಸರಣಿಯ ಮೋಟಾರ್ ಸೈಕಲ್‍‍ಗಳ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಸರಣಿಯ ಬೈಕುಗಳನ್ನು ಹಲವಾರು ಸಂದರ್ಭಗಳಲ್ಲಿ ಪರೀಕ್ಷಿಸಲಾಗಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ವಿಟ್‍‍ಪಿಲೆನ್ ಮತ್ತು ಸ್ವಾರ್ಟ್‍‍ಪಿಲೆನ್ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವಾಗ ಇಲ್ಲಿನ ಮಾರುಕಟ್ಟೆಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಮನಿಕಂಟ್ರೋಲ್ ಸುದ್ದಿಸಂಸ್ಥೆಯು ಬಜಾಜ್‍‍ನ 2019ರ ಯೋಜನೆಗಳ ಬಗ್ಗೆ ವಿಚಾರಿಸಿದಾಗ, ಬಜಾಜ್ ಆಟೋದ ಮುಖ್ಯ ಕಮರ್ಷಿಯಲ್ ಆಫೀಸರ್ ರವರಾದ ರಾಕೇಶ್ ಶರ್ಮಾ ರವರು ಮಾತನಾಡಿ, ಮಾರುಕಟ್ಟೆಯಲ್ಲಿ ಜೂನ್ ನಲ್ಲಿ ಹಲವಾರು ಬದಲಾವಣೆಗಳಾಗಲಿವೆ. ನಾವು ಕಳೆದ ಎರಡು ತಿಂಗಳಿನಲ್ಲಿ ಹಲವು ವಾಹನಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಡೊಮಿನರ್ ಮತ್ತು ಅವೆಂಜರ್ ಬೈಕುಗಳನ್ನು ಅಪ್‍‍ಗ್ರೇಡ್ ಮಾಡಲಾಗಿದೆ. ಮುಂದಿನ ಮೂರು ನಾಲ್ಕು ತಿಂಗಳಿನಲ್ಲಿ ಇನ್ನೂ 3-4 ಬೈಕುಗಳನ್ನು ಬಿಡುಗಡೆ ಮಾಡಲಾಗುವುದು. ಇವುಗಳು ಕ್ರಿಯಾಶೀಲ ಆವಿಷ್ಕಾರಗಳೇ ಹೊರತು ಕ್ರಾಂತಿಕಾರಕವಲ್ಲ. ಇವುಗಳು ನಮ್ಮ ಬೆಳವಣಿಗೆಗೆ ಪೂರಕವಾಗಲಿವೆ ಎಂದು ತಿಳಿಸಿದರು.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಶರ್ಮಾ ರವರು ಮಾತನಾಡಿ, ನಾವು ಹಸ್ಕ್ ವರ್ನಾ ಬೈಕುಗಳ ಬಗ್ಗೆ ಹೆಚ್ಚು ಗಮನವಹಿಸುತ್ತಿದ್ದು, ಈ ಬೈಕುಗಳನ್ನು ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲಾಗುವುದು, ಬಹುಶಃ ಸೆಪ್ಟೆಂಬರ್ - ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು, ಏಕೆಂದರೆ ಈ ಸಮಯದಲ್ಲಿ ಹಬ್ಬದ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ನಾವು ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಹಸ್ಕ್ ವರ್ನಾದ ವಿಟ್‍‍ಪಿಲೆನ್ ಮತ್ತು ಸ್ವಾರ್ಟ್‍‍ಪಿಲೆನ್ 401 ಸರಣಿಯ ಬೈಕುಗಳನ್ನು, ಕೆ‍‍ಟಿ‍ಎಂ ಡ್ಯೂಕ್ 390 ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ, ಆದರೆ ಇದರ ಡಿಸೈನ್, ಸ್ಟೈಲ್ ಮತ್ತು ದಕ್ಷತೆಯಲ್ಲಿ ಬದಲಾವಣೆಗಳಾಗಿವೆ. ವಿಟ್‍‍ಪಿಲೆನ್ 401 ಬೈಕ್, ಕೆಫೆ ರೇಸರ್ ಡಿಸೈನ್ ಹೊಂದಿರಲಿದ್ದು, ಹ್ಯಾಂಡಲ್‍‍ಬಾರ್‍‍ಗಳ ಮೇಲೆ ಕ್ಲಿಪ್‍‍ಗಳಿದ್ದು, ಹಿಂಭಾಗದಲ್ಲಿ ಫುಟ್ ಪೆಗ್‍‍ಗಳಿವೆ. ಸ್ವಾರ್ಟ್‍‍ಪಿಲೆನ್ 401 ಬೈಕಿನಲ್ಲಿ ಸ್ಕ್ರಾಂಬ್ಲರ್ ಸ್ಟೈಲ್ ಡಿಸೈನ್ ಇದ್ದು, ಎತ್ತರದ ಹ್ಯಾಂಡಲ್‍‍ಬಾರ್ ಸೆಟ್‍‍ಗಳಿವೆ ಹಾಗೂ ಮುಂಭಾಗದಲ್ಲಿ ಮೌಂಟೆಡ್ ಫುಟ್ ಪೆಗ್‍‍ಗಳಿವೆ. ಚಾಲನೆ ಮಾಡುವವರಿಗೆ ಎತ್ತರದ ಭಂಗಿಯನ್ನು ನೀಡಲಿವೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಹಸ್ಕ್ ವರ್ನಾ ವಿಟ್‍‍ಪಿಲೆನ್ 401 ಮತ್ತು ಸ್ವಾರ್ಟ್‍‍ಪಿಲೆನ್ 401 ಬೈಕುಗಳಲ್ಲಿ 373 ಸಿಸಿ ಯ 4 ಸ್ಟ್ರೋಕಿನ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಇದ್ದು, 44 ಬಿಹೆಚ್‍‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ ನಾಲ್ಕು ವಾಲ್ವ್ ಹೆಡ್ ಮತ್ತು ಟ್ವಿನ್ ಒವರ್‍‍ಹೆಡ್ ಕ್ಯಾಮ್‍‍ಶಾಫ್ಟ್ ಗಳನ್ನು ಹೊಂದಿದೆ. ಈ ಎಂಜಿನ್‍‍ನಲ್ಲಿ ಸ್ಲಿಪರ್ ಕ್ಲಚ್ ಇದ್ದು, 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

MOST READ: ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಹಸ್ಕ್ ವರ್ನಾ ಸರಣಿಯ ಈ ಬೈಕುಗಳಲ್ಲಿ ಒಂದೇ ರೀತಿಯ ಸಸ್ಪೆಂಷನ್ ಯೂನಿಟ್ ಇದ್ದರೂ, ಬೇರೆ ಬೇರೆ ಸೆಟ್‍‍ಅಪ್‍‍ಗಳನ್ನು ಹೊಂದಿರಲಿವೆ. ಎರಡೂ ಬೈಕುಗಳ ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಮೋನೊ ಶಾಕ್‍‍ಗಳಿವೆ. ಸ್ವಾರ್ಟ್‍‍ಪಿಲೆನ್ 401 ಬೈಕುಗಳಲ್ಲಿ ಆಫ್ ರೋಡ್ ಮಾದರಿಗೆ ಅನುಕೂಲವಾಗುವಂತಹ ಟಯರ್‍‍ಗಳನ್ನು ಅಳವಡಿಸಲಾಗಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಎರಡೂ ಬೈಕುಗಳನ್ನು ಪುಣೆಯ ಚಕಾನ್‍‍ನಲ್ಲಿರುವ ಕೆ‍‍ಟಿ‍ಎಂ ಘಟಕದಲ್ಲಿ ತಯಾರಿಸಲಾಗುವುದು. ಬೆಲೆಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ ಇದ್ದರೂ ಸುಮಾರು ರೂ.2.3 ಲಕ್ಷಗಳಾಗುವ ಸಂಭವವಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಬಜಾಜ್ ಹಸ್ಕ್ ವರ್ನಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಸ್ಕ್ ವರ್ನಾ ಸರಣಿಯ ಬೈಕುಗಳು ಕೆ‍‍ಟಿ‍ಎಂ ಡ್ಯೂಕ್ 390 ಬೈಕುಗಳಿಗಿಂತ ಎರಡರಷ್ಟು ಹುರುಪಾಗಿವೆ. ಕಡಿಮೆ ತೂಕವನ್ನು ಹೊಂದಿರಲಿದ್ದು, ಪರ್ಫಾಮೆನ್ಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸರಣಿಯ ಬೈಕುಗಳು ದೇಶಿಯ ಮಾರುಕಟ್ಟೆಗೆ ಬಂದ ನಂತರ ಉತ್ತಮ ದರ್ಜೆಯ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

Most Read Articles

Kannada
English summary
Bajaj Auto Confirms November Launch For Husqvarna Twins — And So Our Watch Begins - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X