ಭಾರತದಲ್ಲಿಯೂ ಲಾಂಚ್ ಆಗಲಿದೆಯೆ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ನಮ್ಮ ದೇಶದಲ್ಲಿ ಮಾತ್ರವಲ್ಲದೇಯೆ ಜಾಗತಿಕ ಮಾರುಕಟ್ಟೆಯಲ್ಲಿ 125ಸಿಸಿ ಸೆಗ್ಮೆಂಟ್ ಬೈಕ್‍ಗಳಿಗೆ ಅಧಿಕವಾದ ಡಿಮ್ಯಾಂಡ್ ಬರುತ್ತಿದ್ದು, ಬಜಾಜ್ ಆಟೋ ಸಂಸ್ಥೆಯು ಪೋಲ್ಯಾಂಡ್‍‍ನಲ್ಲಿ ತಮ್ಮ ಪಲ್ಸರ್ 125 ಎನ್ಎಸ್ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಪೋಲ್ಯಾಂಡ್‍‍ನಲ್ಲಿ ಬಿಡುಗಡೆಯಾದ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್‍ಗಳು ಅಲ್ಲಿನ ಕರೆನ್ಸಿಯ ಪ್ರಕಾರ ರೂ. 1.58 ಲಕ್ಷದ ಬೆಲೆಯನ್ನು ನಿಗದಿ ಮಾಡಲಾಗಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಇದೀಗ ಭಾರತದಲ್ಲಿಯು ಕೆಟಿಎಂ ಡ್ಯೂಕ್ 125 ಬೈಕಿಗೆ ಮಾರುಕಟ್ಟೆಯಲ್ಲಿ ಅಧಿಕವಾಗುತ್ತಿರುವ ಬೇಡಿಕೆಯ ಅನುಸಾರ ಬಜಾಜ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲಿಯೂ ಸಹ ಪಲ್ಸರ್ 125 ಎನ್ಎಸ್ ಬೈಕ್ ಅನ್ನು ಏಪ್ರಿಲ್, 1 ರಿಂದ ಜಾರಿಯಾದ ಹೊಸ ಸುರಕ್ಷಾ ಕಾಯ್ದೆಯ ಅನುಸಾರ ಕಾಂಬಿ ಬ್ರೇಕಿಂಗ್ (ಸಿಬಿಎಸ್) ಸಿಸ್ಟಂ ಅನ್ನು ಅಳವಡಿಸಿ ಬಿಡುಗಡೆ ಮಾಡಲಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಭಾರತಕ್ಕೆ ಬರಲಿರುವ ಸಿಬಿಎಸ್ ಆಧಾರಿತ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್‍ಗಳು ರೂ. 65 ರಿಂದ 75 ಸಾವಿರದ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಈ ವರ್ಷದ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಥ್ರಸ್ಟ್ ಜೋನ್ ವರದಿಗಳು ಹೇಳುತ್ತಿವೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಬಜಾಜ್ ಪಲ್ಸರ್ 135 ಎಲ್ಎಸ್ ಬೈಕಿನಲ್ಲಿ ಕಂಡಂತೆಯೆ ಪಲ್ಸರ್ 125 ಎನ್ಎಸ್ ಬೈಕಿನಲ್ಲಿಯೂ ಸಹ ಸಿಂಗಲ್ ಪೀಸ್ ಸೀಟ್ ಅನ್ನು ಒದಗಿಸಲಾಗಿದ್ದು, ಇವುಗಳೊಂದಿಗೆ ಡಿಸ್ಟಿಂಕ್ಟಿವ್ ಹೆಡ್‍ಲ್ಯಾಂಪ್ಸ್, ಡ್ಯುಯಲ್ ಟೋನ್ ಮಾಸ್ಕ್ ಮತ್ತು ಪ್ಲಯ್ ಸ್ಕ್ರೀನ್, ಬಲವಾದ ಫ್ಯುಯಲ್ ಟ್ಯಾಂಕ್ ಹಾಗು ಡಿಜಿಟಲ್ ಡಿಸ್ಪ್ಲೇ ಮತ್ತು ಅನಾಲಾಗ್ ಟಾಚೋ ಮೀಟರ್ ಅನ್ನು ಪಡೆದ ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಎಂಜಿನ್ ಸಾಮರ್ಥ್ಯ

ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್‍ಗಳು 124.5 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್, ಡಿಟಿಎಸ್-ಐ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ 12 ಬಿಹೆಚ್‍ಪಿ ಮತ್ತು 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಇನ್ನು ಬಜಾಜ್ ಪಲ್ಸರ್ 125 ಎನ್ಎಸ್ ಬೈಕಿನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸೈಡೆಡ್ ನೈಟ್ರೋಕ್ಸ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಅಷ್ಟೆ ಅಲ್ಲದೆಯೆ ರೈಡರ್‍‍ಗಳ ಸುರಕ್ಷತೆಯ ಅನುಸಾರ ಬಜಾಜ್ ಪಲ್ಸರ್ 125 ಎನ್ಎಸ್ ಬೈಕಿನಲ್ಲಿ ಮುಂನಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡ್ರಮ್ ಬ್ರೇಕ್ ಅನ್ನು ಒದಗಿಸಲಾಗಿದೆ. ಇನ್ನಷ್ಟು ಸೇಫ್ಟಿ ಪರವಾಗಿ ಸಿಬಿಎಸ್ ಅನ್ನು ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಬಜಾಜ್ ಪಲ್ಸರ 125 ಎನ್ಎಸ್ ಬೈಕ್ 126.5 ಕಿಲೋಗ್ರಾಂನ ತೂಕ, 170 ಎಂಎಂನ ಗ್ರೌಂಡ್ ಕ್ಲಿಯರೆನ್ಸ್ 1,325 ಎಂಎಂ ವ್ಹೀಲ್‍‍ಬೇಸ್ ಅನ್ನು ನೀಡಲಾಗಿದೆ. ಸಧ್ಯಕ್ಕೆ ಪೋಲ್ಯಾಂಡ್‍‍ನಲಿ ಮಾರಾಟವಾಗುತ್ತಿರುವ ಬಜಾಜ್ ಪಲ್ಸರ್ 125ಎನ್ಎಸ್ ಬೈಕ್‍ಗಳು, ಬ್ಲಾಕ್, ರೆಡ್, ವೈಟ್ ಮತ್ತು ಯೆಲ್ಲೊ ಬಣ್ಣಗಳಲ್ಲಿ ಖರೀದಿಗೆ ಲಬ್ಯವಿದೆ.

ಭಾರತದಲ್ಲಿಯೂ ಲಾಂಚ್ ಆಗುತ್ತಾ ಬಜಾಜ್ ಪಲ್ಸರ್ 125 ಎನ್ಎಸ್ ಬೈಕ್.?

ಬಜಾಜ್ ಸಂಸ್ಥೆಯ 125 ಎನ್ಎಸ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೆ ಪಲ್ಸರ್ 135 ಎಲ್ಎಸ್ ಬೈಕಿಗಿಂತಲೂ ಹೆಚ್ಚಿನ ಬೆಲೆಯನ್ನು ಪಡೆಯಲಿದ್ದು, ಈ ಬೈಕಿನ ಕುರಿತಾದ ಮಾಹಿತಿಯನ್ನು ಬಜಾಜ್ ಸಂಸ್ಥೆಯು ಬೇರಾವ ಮಾಹಿತಿಯನ್ನು ಹೊರಹಾಕಿಲ್ಲ.

Most Read Articles

Kannada
Read more on ಬಜಾಜ್ pulsar
English summary
Exclusive! Bajaj Pulsar NS125 CBS Launch In India By Third Quarter. Read In Kannada
Story first published: Friday, April 12, 2019, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X