ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಕಳೆದ ವಾರವಷ್ಟೇ ಅನಾವರಣಗೊಂಡ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 2020ರ ಆರಂಭದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಬೆಲೆಗಳ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಅನಾವರಣಗೊಳಿಸಲಾಗಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲವು ಸುದ್ದಿ ಮೂಲಗಳ ಪ್ರಕಾರ ಹೊಸ ಸ್ಕೂಟರ್ ಬೆಲೆಯು ಆನ್‌ರೋಡ್ ಪ್ರಕಾರ ರೂ.1.05 ಲಕ್ಷದಿಂದ ರೂ.1.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ತುಸು ದುಬಾರಿಯಾಗಿರಲಿದೆ ಎನ್ನಲಾಗಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕುರಿತಾಗಿ ಅನಾವರಣ ಕಾರ್ಯಕ್ರಮದಲ್ಲಿ ಇದೇ ಮಾತುಗಳನ್ನಾಡಿದ್ದ ಬಜಾಜ್ ಎಂಡಿ ರಾಜೀವ್ ಅವರು ಕೂಡಾ ಹೊಸ ಸ್ಕೂಟರ್ ಬೆಲೆಯು ತುಂಬಾ ದುಬಾರಿಯಾಗಿರುವುದಿಲ್ಲ ಆದರೆ ಸ್ಪರ್ಧಾತ್ಮಕವಾಗಿಲಿದೆ ಎನ್ನುವ ಸುಳಿವು ನೀಡಿದ್ದರು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಆದರೆ ಹೊಸ ಸ್ಕೂಟರ್ ಬೆಲೆಯು ರೂ.80 ಸಾವಿರದಿಂದ ರೂ.90 ಸಾವಿರ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಾಗಬಹುದು ಎಂಬ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಇದು ತುಸು ನಿರಾಶೆಯಾಗಲಿದ್ದು, ಅಧಿಕೃತ ಬೆಲೆಯ ಘೋಷಣೆಯ ನಂತರವಷ್ಟೇ ಹೊಸ ಸ್ಕೂಟರ್ ಭವಿಷ್ಯ ನಿರ್ಧಾರವಾಗಲಿದೆ ಎನ್ನಬಹುದು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಇನ್ನು ಹೊಸ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನ ಮಾರುಕಟ್ಟೆ ಅಧ್ಯಯನ ನಡೆಲಿಸಲಿರುವ ಬಜಾಜ್ ಸಂಸ್ಥೆಯು ಬೆಂಗಳೂರಿನ ಪ್ರೊ ಬೈಕಿಂಗ್ ನೆಟ್‌ವರ್ಕ್ ಮೂಲಕ ಗ್ರಾಹಕರ ಸಲಹೆಗಳನ್ನು ತಿಳಿದುಕೊಂಡು ಬಿಡುಗಡೆಗೆ ವೇಳೆಗೆ ಮತ್ತಷ್ಟು ಬದಲಾವಣೆ ಮಾಡುವ ಸುಳಿವು ನೀಡಿದ್ದು, ಇದರಿಂದಾಗಿ ಅನಾವರಣಗೊಳಿಸಲಾದ ಸ್ಕೂಟರ್ ವೈಶಿಷ್ಟ್ಯತೆಗಳು ಬಿಡುಗಡೆ ವೇಳೆಗೆ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಅನಾವರಣಗೊಳಿಸಲಾದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಮಹಾ ಫ್ಯಾಸಿನೊ ಸ್ಟೈಲ್ ಹೊಂದಿದ್ದರು ಫ್ಯಾಸಿನೊಗಿಂತಲೂ ವಿಭಿನ್ನ ತಾಂತ್ರಿಕ ಅಂಶಗಳನ್ನು ಪಡೆದಿರುವ ಹೊಸ ಸ್ಕೂಟರ್ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ಮೆಟಲ್ ಬಾಡಿ ಪ್ಯಾನೆಲ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಕೀ ಲೆಸ್ ಸ್ಟಾರ್ಟ್, ಪ್ರೀಮಿಯಂ ಟಿಪಿಎಫ್ ಯುನಿಟ್‌ನಂತಹ ಹಲವು ಸುಧಾರಿತ ಸೌಲಭ್ಯಗಳನ್ನು ನೀಡಿದ್ದು, ಹೊಸ ಸ್ಕೂಟರ್‌ನಲ್ಲಿರುವ ಬ್ಯಾಟರಿ ಸೌಲಭ್ಯ ಕೂಡಾ ಗಮನಸೆಳೆಯಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಪ್ರೇರಣೆಯ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋ‌ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಗರಿಷ್ಠ ಮೈಲೇಜ್ ಒದಗಿಸಿದೆ.

MOST READ: ದೀಪಾವಳಿಗೂ ಮುನ್ನ ಈ ಕಾರುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಆದರೆ ಹೊಸ ಸ್ಕೂಟರ್‌ನಲ್ಲಿ ಸದ್ಯಕ್ಕೆ ಇನ್ ಬಿಲ್ಟ್ ಚಾರ್ಜರ್ ಸೌಲಭ್ಯವನ್ನು ಮಾತ್ರವೇ ನೀಡುತ್ತಿರುವ ಬಜಾಜ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ನೀಡುವ ಸುಳಿವು ನೀಡಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದ್ರೆ, ಹೊಸ ಸ್ಕೂಟರ್‌ನಲ್ಲಿ ಕೀ ಲೆಸ್ ಸ್ಟಾರ್ಟ್ ಸೌಲಭ್ಯ ನೀಡಿರುವ ಬಜಾಜ್ ಸಂಸ್ಥೆಯು ಸ್ಕೂಟರ್ ನಿರ್ವಹಣೆಗಾಗಿ ಪ್ರತ್ಯೇತ ಆ್ಯಪ್ ನೀಡಲಿದ್ದು, ಆ್ಯಪ್ ಮೂಲಕ ಹೊಸ ಸ್ಕೂಟರ್‌ನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ ಸುರಕ್ಷಾ ಭದ್ರತೆಗಳು ಕೂಡಾ ಇರಲಿದ್ದು, ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳಿರಲಿವೆ.

Most Read Articles

Kannada
English summary
According to report, Bajaj chetak electric scooter will be priced under Rs. 1.05 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X