ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಬಜಾಜ್ ಆಟೋ ಸಂಸ್ಥೆಯು ತನ್ನ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಿದೆ. ಇದೀಗ ಕಂಪನಿಯು ಚೇತಕ್ ಲೈವ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ವಿವರಿಸುವ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಹೊಸ ಚೇತಕ್ ಲೈವ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಹೊಂದಿರಲಿದೆ. ಯಾವುದೇ ದೊಡ್ಡ ಮಾಲ್‍‍ಗಳಲ್ಲಿ ಅಥವಾ ಯಾವುದೇ ದೊಡ್ಡ ಸಮಾರಂಭಗಳಿಗೆ ತೆರಳಿ ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ವಾಹನವನ್ನು ಪಾರ್ಕ್ ಮಾಡುತ್ತೇವೆ. ಆದರೆ ನೂರಾರು ವಾಹನಗಳ ಮಧ್ಯೆ ನಮ್ಮ ವಾಹನವನ್ನು ಹುಡುಕಲು ಹರಸಾಹಸ ಮಾಡಬೇಕಾಕುತ್ತೆ. ಅದರೇ ಚೇತಕ್ ಗ್ರಾಹಕರಿಗೆ ಇದರ ಚಿಂತೆ ಇರುವುದಿಲ್ಲ. ಯಾಕೆ ಅಂದರೆ ಈ ಲೈವ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ಸ್ಕೂಟರ್ ಅನ್ನು ಪತ್ತೆ ಹಚ್ಚಬಹುದು.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಇದು ಸರಳವಾದ ಫೀಚರ್ಸ್‍ ಆದರೂ ಇದು ಇನ್ನಿತರ ಪ್ರಯೋಜನವು ಕೂಡ ಇದೆ. ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳು ಈ ಆಪ್ಲಿಕೇಶನ್‍‍‍ನಲ್ಲಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಬಜಾಜ್ ಕಂಪನಿಯು ಇತ್ತೀಚೆಗೆ ತನ್ನ ಚೇತಕ್ ಎಲೆಕ್ಟ್ರಿಕ್ ಯಾತ್ರಾ ಅಭಿಯಾನವನ್ನು ನಡೆಸಿತ್ತು. ಭಾರತದ ಸಾಮನ್ಯ ರಸ್ತೆಗಳಲ್ಲಿ ಸ್ಕೂಟರ್‍‍ನ ಸಾಮರ್ಥ್ಯ ಮತ್ತು ವಿಶ್ಬಾಸಾರ್ಹತೆಯನ್ನು ಸಾಬೀತುಪಡಿಸುವ ಸಲುವಾಗಿ 10 ನಗರಗಳಲ್ಲಿ 3,500 ಕಿ.ಮೀ ಸವಾರಿ ಮಾಡಿದ್ದರು.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 85ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 95 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸೆಕ್ಯುರಿಟಿ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ರಾಜಸ್ಥಾನದ ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್ ಹಲ್ದಿಘಾಟ್ ಯುದ್ದದಲ್ಲಿ ಚೇತಕ್ ಅನ್ನೋ ಹೆಸರಿನ ಕುದುರೆಯನ್ನು ಬಳಸಿದ್ದರು. ಈ ಯುದ್ದದಲ್ಲಿ ಮಹಾರಾಣಾ ನೆಚ್ಚಿನ ಕುದುರೆ ಚೇತಕ್ ಸಾವನ್ನಪ್ಪಿತ್ತು. ರಾಜಸ್ಥಾನ ಬಲಿಚಾ ಗ್ರಾಮದಲ್ಲಿ ಈ ಕುದುರೆಯ ಸ್ಮಾರಕವನ್ನು ನಿರ್ಮಿಸಿದ್ದಾರೆ. ಇದೇ ಐತಿಹಾಸಿಕ ಕುದುರೆಯ ಹೆಸರನ್ನು ಬಜಾಜ್‍ನ ಸ್ಕೂಟರ್‍‍ಗೆ ಇಡಲಾಗಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಬಜಾಜ್ ಆಟೋ ಕಂಪನಿಯು 1972 ರಲ್ಲಿ ಚೇತಕ್ ಸ್ಕೂಟರ್‍ ಅನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು ಮತ್ತು ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತು. ಇದರ ಮೂಲ ವಿನ್ಯಾಸವು ವೆಸ್ಪಾ ಸ್ಟ್ರೀಂಟ್ ಸ್ಕೂಟರ್ ಮಾದರಿಯಲ್ಲಿದೆ. ಒಳಾಂಗಣ(ಇಂಟಿರಿಯರ್) ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ ಲುಕ್ ಅನ್ನು ಹೊಂದಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದ್ದು, ಬಜಾಜ್ ಸಂಸ್ಥೆಯು 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ. ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಬಜಾಜ್ ಚೇತಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ಹೊಂದಿದೆ. ಬಜಾಜ್ ಚೇತಕ್ ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಸ್ಕೂಟರ್ ಆಗಿದೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನವನ್ನು ಮೂಡಿಸಲು ಚೇತಕ್ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Most Read Articles

Kannada
English summary
Bajaj Chetak electric scooter LIVE tracking feature - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X