ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಕಳೆದ ತಿಂಗಳ ಹಿಂದಷ್ಟೇ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಯನ್ನು ಬಹಿರಂಗಪಡಿಸಿದ್ದ ಬಜಾಜ್ ಸಂಸ್ಥೆಯು 'ಚೇತಕ್ ಎಲೆಕ್ಟ್ರಿಕ್ ಯಾತ್ರೆ' ಮೂಲಕ ಇದೀಗ ಹೊಸ ಸ್ಕೂಟರಿನ ಉತ್ಪಾದನಾ ಆವೃತ್ತಿಗಳನ್ನು ಪ್ರದರ್ಶನಗೊಳಿಸಿದ್ದು, ಹೊಸ ಸ್ಕೂಟರ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ರಸ್ತೆಗಿಳಿಯಲಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಚೇತಕ್ ಎಲೆಕ್ಟ್ರಿಕ್ ಮಾದರಿಯ ಕಾರ್ಯಕ್ಷಮತೆ ಬಗೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಯಾತ್ರೆಯನ್ನು ಹಮ್ಮಿಕೊಂಡಿದ್ದ ಬಜಾಜ್ ಸಂಸ್ಥೆಯು ಬರೋಬ್ಬರಿ 3 ಸಾವಿರ ಕಿ.ಮೀ ಯಾತ್ರೆಯನ್ನು ಇದೀಗ ಪೂರ್ಣಗೊಳಿಸಿದ್ದು, ದೆಹಲಿಯಿಂದ ಆರಂಭಗೊಂಡಿದ್ದ ಚೇತಕ್ ಎಲೆಕ್ಟ್ರಿಕ್ ಯಾತ್ರೆಯು ಆಗ್ರಾ, ಜೈಪುರ್, ಉದಯಪುರ, ಅಹಮದಾಬಾದ್, ಮುಂಬೈ, ಪಣಜಿ ಮೂಲಕ ಅಂತಿಮವಾಗಿ ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕಕ್ಕೆ ಬಂದು ತಲುಪಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಬಜಾಜ್ ಆಟೋ ಸಂಸ್ಥೆಯು 2020ರ ಜನವರಿ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಇಂದಿನಿಂದಲೇ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಸದ್ಯಕ್ಕೆ ಬಹಿರಂಗಗೊಂಡಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲವು ಸುದ್ದಿ ಮೂಲಗಳ ಪ್ರಕಾರ ಪ್ರೀಮಿಯಂ ಫೀಚರ್ಸ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.1.05 ಲಕ್ಷದಿಂದ ರೂ.1.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ಮೆಟಲ್ ಬಾಡಿ ಪ್ಯಾನೆಲ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಕೀ ಲೆಸ್ ಸ್ಟಾರ್ಟ್, ಮಲ್ಟಿ ಸ್ಪೋಕ್ ವೀಲ್ಹ್‌ಗಳು, ಪ್ರೀಮಿಯಂ ಟಿಪಿಎಫ್ ಯುನಿಟ್‌ನಂತಹ ಹಲವು ಸುಧಾರಿತ ಸೌಲಭ್ಯಗಳನ್ನು ನೀಡಿದ್ದು, ಜೊತೆಗೆ ರಿವರ್ಸ್ ಮೋಡ್ ಸೌಲಭ್ಯವನ್ನು ನೀಡಿರುವುದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಲಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಪ್ರೇರಣೆಯ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋ‌ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 75ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 70 ಕಿ.ಮೀ ಗರಿಷ್ಠ ಮೈಲೇಜ್ ಒದಗಿಸಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದ್ರೆ, ಹೊಸ ಸ್ಕೂಟರ್‌ನಲ್ಲಿ ಕೀ ಲೆಸ್ ಸ್ಟಾರ್ಟ್ ಸೌಲಭ್ಯ ನೀಡಿರುವ ಬಜಾಜ್ ಸಂಸ್ಥೆಯು ಸ್ಕೂಟರ್ ನಿರ್ವಹಣೆಗಾಗಿ ಪ್ರತ್ಯೇತ ಆ್ಯಪ್ ನೀಡಲಿದ್ದು, ಆ್ಯಪ್ ಮೂಲಕ ಹೊಸ ಸ್ಕೂಟರ್‌ನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿರ್ವಹಣೆ ಮಾಡಬಹುದಾಗಿದೆ.

ಹೊಸ ಬದಲಾವಣೆಯೊಂದಿಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ ಸುರಕ್ಷಾ ಭದ್ರತೆಗಳು ಕೂಡಾ ಇರಲಿದ್ದು, ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳಿದ್ದು, ಹೊಸ ಸ್ಕೂಟರಿನ ಬೆಲೆ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
English summary
Bajaj Chetak Electric Unveiled In Pune: Completes The 3000Km ‘Chetak Electric Yatra’. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X