ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಬಜಾಜ್ ಸಂಸ್ಥೆಯು ತಮ್ಮ ಜನಪ್ರಿಯ ಡಾಮಿನಾ 400 ಬೈಕಿಗೆ ಹಲವಾರು ನವೀಕರಣವನ್ನು ಮಾಡಿ ಏಪ್ರಿಲ್ 2019ರಲ್ಲಿ ಮತ್ತೆ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಗೊಂಡ ಕೇವಲ ಎರಡು ತಿಂಗಳಿನಲ್ಲಿ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ. ಬಜಾಜ್ ಡಾಮಿನಾರ್ 400 ಬೈಕ್ ಪ್ರಸ್ತುತ ಹಣಕಾಸು ವರ್ಷದಲ್ಲಿ ಸುಮಾರು 4,892 ಯೂನಿಟ್ ಮಾರಾಟವಾಗುತ್ತಿದ್ದು, ಮೇ 2019ರಲ್ಲಿ ಮಾತ್ರವೇ 3,100 ಯೂನಿಟ್ ಮಾರಟವಾಗಿ ದಾಖಲೆ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ನವೀಕೃತಗೊಂಡ ಹೊಸ ಬಜಾಜ್ ಡಾಮಿನಾರ್ 400 ಬೈಕ್ ಬಿಡುಗಡೆಯಾದ ಮೊದಲನೆಯ ತಿಂಗಳಿನಲ್ಲಿ ಅಂದರೆ ಏಪ್ರಿಲ್ 2019ರಲಿ ಕೇವಲ 1,346 ಯೂನಿಟ್ ಮಾರಾಟವಾಗಿದ್ದು, ಇನ್ನುಳಿದ ಎರಡನೆತ ತಿಂಗಳು ಮೇ ನಲ್ಲಿ ಮಾತ್ರ ಬರೊಬ್ಬರಿ 3,100 ಯೂನಿಟ್ ಮಾರಾಟವಾಗಿದೆ ಎಂದು ರಶ್‍ಲೇನ್ ವರದಿ ತಿಳಿಸುತ್ತಿದೆ. 2018ರ ಏಪ್ರಿಲ್-ಮೇ ತಿಂಗಳಿನಲ್ಲಿ 2,564 ಯೂನಿಟ್ ಮಾರಾಟವಾದರೆ 2019ರ ಏಪ್ರಿಲ್-ಮೇನಲ್ಲಿ 3,234 ಯೂನಿಟ್ ಮಾರಾಟವಾಗಿದೆ. ಅಂದರೆ ಮಾರಾಟದಲ್ಲಿ ಶೇಕಡ 26.13ರಷ್ಟು ಏರಿಕೆಯನ್ನು ಕಂಡಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಇನ್ನು ಕೇವಲ ದೇಶಿಯವಾಗಿ ಮಾತ್ರ ಮಾರಾಟದಲ್ಲಿ ಸದ್ದು ಮಾಡುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್‍ಗಳು ರಫ್ತು ಮಾರಾಟದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣಲಿಲ್ಲ. 2018ರ ಮೇ ತಿಂಗಳಿನಲ್ಲಿ 2,132 ಯೂನಿಟ್ ರಫ್ತು ಮಾಡಿದ್ದರೆ ಇನ್ನು 2019ರ ಮೇ ತಿಂಗಳಿನಲ್ಲಿ 1,296 ಯೂನಿಟ್ ರಫ್ತು ಮಾಡಲಾಗಿದೆ. ಅಂದರೆ ಶೇಕಡ 39.21ರಶ್ಟು ರಪ್ತು ಮಾರಾಟದಲ್ಲಿ ಇಳಿಕೆಯನ್ನು ಕಂಡಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಬಿಡುಗಡೆಗೊಂಡ ಹೊಸ ಬಜಾಜ್ ಡಾಮಿನಾರ್ ಬೈಕ್ ಬಿಎಸ್-VI ಎಂಜಿನ್ ಅನ್ನು ಪಡೆದುಕೊಂಡಿದ್ದು, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ಗಳಿಗೆ ಟಾಂಗ್ ನೀಡಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಸಿಕ್ಕ ಮಾಹಿತಿಗಳ ಪ್ರಕಾರ ಹೊಸ ಬಜಾಜ್ ಡಾಮಿನಾರ್ 400 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.73 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಹೊಸ ಫೀಚರ್ಸ್

ಪ್ರಸ್ತುತ ಇರುವ ಬೈಕಿನಲ್ಲಿ ನೀಡಲಾದ ಸ್ಕ್ರೀನ್ ಅನ್ನು ಪಡೆದಿರಲಿದ್ದು, ಹೊಸದಾಗಿ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಅನ್ನು ಪಡೆದುಕೊಳ್ಳಲಿದೆ. ಇಷ್ಟೆ ಅಲ್ಲದೆ ಈ ಬೈಕಿನಲ್ಲಿ ಸೆಕೆಂಡರಿ ಡಿಸ್ಪ್ಲೇ ಕೂಡಾ ಬಳಸಲಾಗಿದ್ದು, ಇದು ಫ್ಯುಯಲ್ ಟ್ಯಾಂಕ್‍ನ ಮೇಲೆ ಕಾಣಿಸಿಕೊಳ್ಳುತ್ತೆ. ಇದರಲ್ಲಿ ಗೇರ್ ಪೊಸಿಷನ್, ಟ್ರಿಪ್ ಮೀಟರ್ ಮತ್ತು ಟೈಮ್ ತೋರಿಸುತ್ತದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಕೇಂದ್ರ ಸರ್ಕಾರದ ಆದೇಶದಂತೆ 2020ರ ಏಪ್ರಿಲ್ 1ರ ನಂತರ ಬಿಡುಗಡೆಯಾಗಲಿರುವ ಎಲ್ಲಾ ವಾಹನಗಳು ಬಿಎಸ್-VI ಎಂಜಿನ್ ಅನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಡಗಡೆಯಾಲಗಿರುವ ಡಾಮಿನಾರ್ ಬೈಕಿನಲ್ಲಿ ಬಿಎಸ್-VI ಎಂಜಿನ್ ಅಳವಡಿಕೆಯು ಬಹುಮುಖ್ಯ ಬದಲಾವಣೆ ಎಂದೇ ಹೇಳಬಹುದು.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಡಾಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 40 ಬಿಹೆಚ್‍ಪಿ ಮತ್ತು 34ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಂದರೆ ಹಿಂದಿನ ಮಾದರಿಯ ಬೈಕಿಗೆ ಹೋಲಿಸಿದರೆ 6 ಬಿಹೆಚ್‍ಪಿ ಹೆಚ್ಚಿನದಾಗಿ ಹೊಸ ಬೈಕ್ ಪಡೆದಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಅಷ್ಟೆ ಅಲ್ಲದೇ ಈ ಬಾರಿಯ ಬಜಾಜ್ ಡಾಮಿನಾರ್ 400 ಬೈಕಿನಲ್ಲಿ ಪ್ರೀಮಿಯಂ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ಹೊಸ ಎಕ್ಸಾಸ್ಟ್ ಸಿಸ್ಟಂ ಅನ್ನು ನೀಡಲಾಗಿದೆ. ಈ ಬಾರಿ ಈ ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಪೋರ್ಟ್ಸ್, ಮುಂಭಾಗದಲ್ಲಿ ಅಪ್‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ. ಜೊತೆಗೆ ಈ ಹೊಸ ಎಕ್ಸಾಸ್ಟ್ ಹೆಚ್ಚು ಸದ್ದನ್ನು ಕೂಡ ಹೊರಹಾಕುತ್ತಂತೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಜಾಜ್ ಡಾಮಿನಾರ್ 400 ಬೈಕ್

ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಹೊಸ ಡಾಮಿನಾರ್ 400 ಬೈಕಿನಲ್ಲಿ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಮುಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಬಜಾಜ್ ಸಂಸ್ಥೆಯಲ್ಲಿನ ಜನಪ್ರಿಯ ಡಾಮಿನಾರ್ ಬೈಕ್ ಈ ಬಾರಿ ಹಲವಾರು ಬದಲಾವಣೆಗಳನ್ನು ಪಡೆದು ಇದೀಗ ಬಿಡುಗಡೆಗೊಂಡಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 390, ಹೋಂಡಾ ಸಿಬಿ300ಆರ್ ಮತ್ತು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Bajaj Dominar 400 Bike Sales Up In May 2019. Read In Kannada
Story first published: Monday, June 24, 2019, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X