ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಪ್ರತಿ ಯುವಕರಿಗೆ ಸುಜುಕಿ ಹಯಾಬುಸಾ ಸೂಪರ್ ಬೈಕ್ ಹೊಂದಬೇಕಂಬ ಕನಸು ಇರುತ್ತದೆ. ಆದರೆ ಈ ಬೈಕ್ ತುಂಬಾನೇ ದುಬಾರಿಯಾಗಿದೆ. ಸಾಮಾನ್ಯ ವರ್ಗದ ಜನರಿಗೆ ಇದನ್ನು ಖರೀದಿಸುವುದು ದೊಡ್ಡ ಸವಾಲಾಗಿದೆ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಸುಜುಕಿ ಹಯಾಬುಸಾ ಬೈಕ್ ಹೊಂದಬೇಕೆಂಬ ಕನಸು ಹೊಂದಿರುವರಿಗೆ ಒಂದು ಸಿಹಿ ಸುದ್ದಿ ಇದೆ. ಡಾಮಿನಾರ್ 400 ಬೈಕ್ ಅನ್ನು ದೆಹಲಿಯ ಮಳಿಗೆಯೊಂದರಲ್ಲಿ ಹಯಾಬುಸಾ ಬೈಕ್ ಆಗಿ ಮಾಡಿಫೈಗೊಳಿಸಲಾಗುತ್ತದೆ. ಇವರು ಮಾಡಿಫೈ ಮಾಡಿದ ಡಾಮಿನಾರ್ ಬೈಕ್ ಹಯಾಬುಸಾ ಮಾದರಿಯ ರೀತಿಯಲ್ಲಿದೆ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಇದನ್ನು ಡಾಮಿನಾರ್ 400 ಬೈಕ್ ಎಂದು ಕಂಡುಹಿಡಿಯುವುದು ಕಷ್ಟಕರವಾಗಿದೆ. ಮಾಡಿಫೈ ಮಾಡಲಾದ ಈ ಬೈಕಿ‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪಿಲಿಯನ್ ಸೀಟ್, ಡೆಕಲ್ಸ್ ಸೇರಿದಂತೆ ಇತ್ಯಾದಿ ಉಪಕರಣಗಳನ್ನು ಅಳವಡಿಸಲಾಗಿದೆ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಈ ಬೈಕ್ ಮುಂಭಾಗದಲ್ಲಿ ಸವಾರನ ಸುರಕ್ಷತೆಗಾಗಿ ಡ್ಯುಯಲ್ ಡಿಸ್ಕ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ. ಹಯಾಬುಸಾ ಮಾದರಿಯಲ್ಲಿ ಇರುವ ಟ್ವಿನ್ ಎಕ್ಸಾಸ್ಟ್ ಅನ್ನು ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ಡಾಮಿನಾರ್ 400 ಬೈಕಿನಲ್ಲಿ ಎಂಜಿನ್‍ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಡಾಮಿನಾರ್ ಬೈಕ್‍ನಲ್ಲಿ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 34.5 ಬಿಹೆಚ್‍‍ಪಿ ಪವರ್ ಹಾಗೂ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಈ ಎಂಜಿನ್‍ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಸುಜುಕಿ ಮೋಟರ್ ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ 2020ರ ಹಯಾಬುಸಾ ಬೈಕ್ ಅನ್ನು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಹೊಸ 2020ರ ಸುಜುಕಿ ಹಯಾಬುಸಾ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.75 ಲಕ್ಷಗಳಾಗಿದೆ. ಹೊಸ ಹಯಾಬುಸಾ ಸೂಪರ್‍‍ಬೈಕ್ ಅನ್ನು ಎರಡು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಈ ಬೈಕ್ ಮೆಟಾಲಿಕ್ ಥಂಡರ್ ಗ್ರೇ ಮತ್ತು ಕ್ಯಾಂಡಿ ಡೇರಿಂಗ್ ರೆಡ್ ಬಣ್ಣಗಳನ್ನು ಹೊಂದಿದೆ. ಹೊಸ ಹಯಾಬುಸಾ ನವೀಕರಿಸಿದ ಗ್ರಾಫಿಕ್ಸ್ ಮತ್ತು ಮುಂಭಾಗದಲ್ಲಿ ಹೊಸ ಬ್ರೇಕ್ ಕ್ಯಾಲಿಪರ್‍ ಅನ್ನು ಹೊಂದಿರಲಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಹೊಸ ಹಯಾಬುಸಾ ಸೂಪರ್‍‍ಬೈಕಿನಲ್ಲಿ ಇನ್ನೂ ಉಳಿದ ಯಾವುದೇ ನವೀಕರಣಗಳನ್ನು ಮಾಡಲಾಗಿಲ್ಲ. ಇದು ಹಯಾಬುಸಾ ಸೂಪರ್‍‍ಬೈಕ್ ಪ್ರಿಯರಿಗೆ ನಿರಾಸೆಯಾಗಿದೆ. ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಇರಲಿದ್ದು, ಈ ಎಂಜಿನ್ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 155 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀ ಆಗಿರಲಿದೆ. ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಸುಜುಕಿಯಿಂದ ಬಂದ ಮೊದಲ ಸೂಪರ್‍‍ಬೈಕ್‍‍ಗಳಲ್ಲಿ ಹಯಾಬುಸಾ ಕೂಡ ಒಂದಾಗಿದೆ. ಸುಜುಕಿ ಹಯಾಬುಸಾ ಸೂಪರ್‍‍ಬೈಕಿನ ಸ್ಥಳೀಯವಾಗಿ ಅಭಿವೃದ್ದಿಪಡಿಸುವುದನ್ನು 2017ರಲ್ಲಿ ಆರಂಭಿಸಿದರು.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಬಜಾಜ್ ಡಾಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.63 ಲಕ್ಷಗಳಾಗಿದೆ. ಇನ್ನೂ ಹಯಾಬುಸಾ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಬರೊಬ್ಬರಿ ರೂ.13.75 ಲಕ್ಷಗಳಾಗಿದೆ.

ಸುಜುಕಿ ಹಯಾಬುಸಾ ಬೈಕ್‍‍ನಂತೆ ಮಾಡಿಫೈಗೊಂಡ ಡಾಮಿನರ್ 400

ಮಾಡಿಫೈ ಮಾಡಲಾದ ಬೈಕಿನ ಬೆಲೆಯನ್ನು ವೀಡಿಯೋದಲ್ಲಿ ಬಹಿರಂಗಪಡಿಸಿಲ್ಲ. ಆದರೂ ಹಯಾಬುಸಾ ಬೈಕಿಗೆ ಹೋಲಿಸಿದರೆ ಇದು ಕಡಿಮೆ ಬೆಲೆಯನ್ನು ಹೊಂದಿರಲಿದೆ. ಸುಜುಕಿ ಹಯಾಬುಸಾ ಬೈಕ್ ಅನ್ನು ಖರೀದಿಸಬೇಕೆಂದು ಬಯಸುವವರಿಗೆ ಒಂದು ಸುಂದರ ಅವಕಾಶವಾಗಿದೆ. ಆದರೆ ಹಯಾಬುಸಾ ಬೈಕ್ ಮಾದರಿಯಂತೆ ಕಂಡರೂ ಸಹ ಡಾಮಿನಾರ್ 400 ಬೈಕಿನ ಎಂಜಿನ್ ಹೊಂದಿರುವುದರಿಂದ ಹಯಾಬುಸಾ ಬೈಕ್‍‍ನಷ್ಟು ಪವರ್ ಅನ್ನು ಉತ್ಪಾದಿಸುವುದಿಲ್ಲ.

Source: Vampvideo/YouTube

Most Read Articles

Kannada
English summary
This Bajaj Dominar Is Tastefully Modified Into A Suzuki Hayabusa - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X