ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಗತಕಾಲದ ಹೆಸರಿನ ವೈಭವವನ್ನು ಗ್ರಾಹಕರಿಗೆ ಮರಳಿ ನೀಡುವ ಉದ್ದೇಶದಿಂದ ಬಜಾಜ್ ಆಟೋ ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಇ-ಚೇತಕ್ ಅನ್ನು ಬಿಡುಗಡೆಗೊಳಿಸಿತು. ಟಾಟಾ ಮೋಟಾರ್ಸ್ ಉಪಾಧ್ಯಕ್ಷರು ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೋಟರ್‍‍ಗಳು ವೆಸ್ಪಾ ಆವೃತ್ತಿಯಂತೆ ಕಾಣುತ್ತಿವೆ ಎಂದು ಹೇಳಿದರು.

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಟಾಟಾ ಮೋಟಾರ್ಸ್ ಡಿಸೈನ್ ಉಪಾಧ್ಯಕ್ಷರಾದ ಪ್ರತಾಪ್ ಬೋಸ್ ಅವರು ಬಜಾಜ್ ಆಟೋ ಕಂಪನಿಗೆ ಟ್ವಿಟರ್‍‍ನಲ್ಲಿ ಶಾಕ್ ನೀಡಿದರು. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ ಸ್ಕೂಟರ್‍‍ಗಳ ನಕಲು ಆಗಿದೆ ಎಂದು ಅವರು ಟ್ವೀಟ್‍ ಮಾಡಿದ್ದಾರೆ. ಹೆಚ್ಚು ವಿಶಿಷ್ಟವಾದ ಸ್ಕೂಟರ್ ಅಭಿವೃದ್ದಿ ಪಡಿಸುವ ಉತ್ತಮ ಅವಕಾಶವನ್ನು ಬಜಾಜ್ ಕೈ ಚೆಲ್ಲಿದೆ ಎಂದು ಹೇಳಿದ್ದಾರೆ.

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಐಪಿ67(ವಾಟರ್‍‍ಪ್ರೂಫ್) ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸೆಕ್ಯುರಿಟಿ ವೈಶಿಷ್ಟ್ಯಗಳನ್ನು ಹೊಂದಿದೆ.

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ರಾಜಸ್ಥಾನದ ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್ ಹಲ್ದಿಘಾಟ್ ಯುದ್ದದಲ್ಲಿ ಚೇತಕ್ ಅನ್ನೋ ಹೆಸರಿನ ಕುದುರೆಯನ್ನು ಬಳಸಿದ್ದರು. ಈ ಯುದ್ದದಲ್ಲಿ ಮಹಾರಾಣಾ ನೆಚ್ಚಿನ ಕುದುರೆ ಚೇತಕ್ ಸಾವನ್ನಪ್ಪಿತ್ತು. ರಾಜಸ್ಥಾನ ಬಲಿಚಾ ಗ್ರಾಮದಲ್ಲಿ ಈ ಕುದುರೆಯ ಸ್ಮಾರಕವನ್ನು ನಿರ್ಮಿಸಿದ್ದಾರೆ. ಇದೇ ಐತಿಹಾಸಿಕ ಕುದುರೆಯ ಹೆಸರನ್ನು ಬಜಾಜ್‍ನ ಸ್ಕೂಟರ್‍‍ಗೆ ಇಡಲಾಗಿದೆ.

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಬಜಾಜ್ ಆಟೋ ಕಂಪನಿಯು 1972 ರಲ್ಲಿ ಚೇತಕ್ ಸ್ಕೂಟರ್‍ ಅನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು ಮತ್ತು ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತು. ಇದರ ಮೂಲ ವಿನ್ಯಾಸವು ವೆಸ್ಪಾ ಸ್ಟ್ರೀಂಟ್ ಸ್ಕೂಟರ್ ಮಾದರಿಯಲ್ಲಿದೆ. ಒಳಾಂಗಣ(ಇಂಟಿರಿಯರ್) ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್ ಲುಕ್ ಅನ್ನು ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಹೊಸ ಇ-ಚೇತಕ್ ಬಿಡುಗಡೆಯಾದ ನಂತರವೂ ಬಜಾಜ್ ಆಟೋ ತನ್ನ ಬೈಕ್‍‍ಗಳತ್ತ ಗಮನ ಹರಿಸುವ ನಿರೀಕ್ಷಿಯಿದೆ. ಕಂಪನಿಯ ಸರಣಿಯಲ್ಲಿರುವ ಬೈಕುಗಳು ಹೆಚ್ಚು ಮಾರಾಟವಾಗುತ್ತಿವೆ. 2000ದ ಆರಂಭದಲ್ಲಿ ಬಜಾಜ್ ಚೇತಕ್ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳಲು ಆರಂಭಿಸಿತು. 2005ರಲ್ಲಿ ಬಜಾಜ್ ಚೇತಕ್ ಉತ್ಪಾದನೆಯು ಸಂಪೂರ್ಣವಾಗಿ ಸ್ಥಗಿತವಾಯ್ತು. 2006ರಲ್ಲಿ ತಮ್ಮ ಬಳಿಯಿದ್ದ ಕೊನೆಯ ಸ್ಕೂಟರ್‍‍ಗಳನ್ನು ಮಾರಾಟ ಮಾಡಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

 ಚೇತಕ್ ಸ್ಕೂಟರ್‍‍ನ ವಿನ್ಯಾಸವನ್ನು ಹೀಯಾಳಿಸಿದ ಟಾಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಚೇತಕ್ ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಸ್ಕೂಟರ್ ಆಗಿದೆ. ಇಷ್ಟು ಜನಪ್ರಿಯತೆಯನ್ನು ಹೊಂದಿದ ಸ್ಕೂಟರ್ ಮತ್ತೆ ರಸ್ತೆಗೆ ಇಳಿಯಲಿದೆ ಎಂದು ಹಲವಾರು ಜನರು ಬಹುನಿರೀಕ್ಷೆಯಿಂದ ಕಾದಿದ್ದರು. ಆದರೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ ಸ್ಕೂಟರ್ ವಿನ್ಯಾಸದಲ್ಲಿ ಬಿಡುಗಡೆಗೊಳಿಸಿರುವುದು ಚೇತಕ್ ಪ್ರಿಯರಿಗೆ ನಿರಾಸೆ ಮೂಡಿಸಿದೆ.

Most Read Articles

Kannada
English summary
Bajaj e-Chetak Looks Like Vespa: Says Tata Motors’ VP Of Design Pratap Bose - Read in Kannada
Story first published: Wednesday, October 23, 2019, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X