ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬಜಾಜ್ ಕಂಪನಿಯು ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಅನ್ನು ಅಕ್ಟೋಬರ್ 16ರಂದು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಹೊಸ ಬಜಾಜ್ ಎಲೆಕ್ಟ್ರಿಕ್ ಚೇತಕ್ 2020ರ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಎಲೆಕ್ಟ್ರಿಕ್ ಚೇತಕ್ ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರಿಗೆ ಪೈಪೋಟಿ ನೀಡಲಿದೆ. ಅಥೆರ್ 450 ಸ್ಕೂಟರ್‍‍ನಂತೆಯೇ, ಬಜಾಜ್ ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಅನ್ನು ಸಹ ಭಾರತದಲ್ಲಿ ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲು ಪುಣೆಯಲ್ಲಿ ಬಿಡುಗಡೆಗೊಳಿಸಲಾಗುವುದು.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ನಂತರ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುವುದು. ಈ ರೀತಿಯಾಗಿ ಹಂತ ಹಂತವಾಗಿ ಬಿಡುಗಡೆಗೊಳಿಸುವುದರಿಂದ ದೇಶಾದ್ಯಂತ ಬಿಡುಗಡೆಗೊಳಿಸುವ ಮೊದಲು ಬಜಾಜ್ ಕಂಪನಿಗೆ ಮಾರುಕಟ್ಟೆಯ ಸಂಪೂರ್ಣ ಅರಿವಾಗಲಿದೆ. ಅಥೆರ್ 450 ಹಾಗೂ ಹೊಸ ಬಜಾಜ್ ಎಲೆಕ್ಟ್ರಿಕ್ ಚೇತಕ್ ಸ್ಕೂಟರ್‍‍ಗಳ ವಿನ್ಯಾಸ, ಫೀಚರ್ ಹಾಗೂ ಸ್ಪೆಸಿಫಿಕೇಶನ್‍‍ಗಳಲ್ಲಿ ಯಾವೆಲ್ಲಾ ವ್ಯತ್ಯಾಸಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ವಿನ್ಯಾಸ

ಬಜಾಜ್ ಎಲೆಕ್ಟ್ರಿಕ್ ಚೇತಕ್ ಹಾಗೂ ಅಥೆರ್ 450 ಎರಡೂ ಸ್ಕೂಟರ್‍‍ಗಳು ಸಂಪೂರ್ಣವಾಗಿ ವಿರುದ್ಧವಾದ ವಿನ್ಯಾಸವನ್ನು ಹೊಂದಿವೆ. ಬಜಾಜ್ ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಹಳೆಯ ಸ್ಕೂಟರ್ ಅನ್ನು ನೆನಪಿಸುವಂತಹ ಕ್ಲಾಸಿಕ್ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಮತ್ತೊಂದೆಡೆ, ಅಥೆರ್ 450 ಶಾರ್ಪ್ ಡಿಸೈನ್ ಹಾಗೂ ಸ್ಪೋರ್ಟಿ ಅಪಿಲ್‍‍ನೊಂದಿಗೆ ಆಧುನಿಕ ಲುಕ್ ಹೊಂದಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಚಿಕ್ಕ ಬಾಡಿ ಗ್ರಾಫಿಕ್ಸ್ ನೊಂದಿಗೆ ಸರಳವಾದ ವಿನ್ಯಾಸವನ್ನು ಹೊಂದಿವೆ. ಆಥೆರ್ 450 ಸ್ಕೂಟರ್ ಬಿಳಿ ಬಣ್ಣದ ಮುಂಭಾಗದ ಏಪ್ರನ್‌ನಲ್ಲಿ ಕಪ್ಪು ಟಚ್‍ ಹೊಂದಿರುವ ಒಂದೇ ಬಣ್ಣದಲ್ಲಿ ಲಭ್ಯವಿದೆ. ಮತ್ತೊಂದೆಡೆ ಎಲೆಕ್ಟ್ರಿಕ್ ಚೇತಕ್ ಅನ್ನು, ಅನೇಕ ಸಿಂಗಲ್ ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬಜಾಜ್ ಎಲೆಕ್ಟ್ರಿಕ್ ಚೇತಕ್ ದೊಡ್ಡ ಸೀಟ್ ಹಾಗೂ ದೊಡ್ಡ ಫುಟ್ ಬೋರ್ಡ್‍‍ಗಳನ್ನು ಹೊಂದಿದೆ. ಇದು ಸ್ಕೂಟರ್‌ನ ರೆಟ್ರೊ ವಿನ್ಯಾಸದ ಜೊತೆಗೆ ಹೆಚ್ಚು ಸಾಂಪ್ರದಾಯಿಕ ಸ್ಕೂಟರ್ ಸವಾರರನ್ನು ಆಕರ್ಷಿಸಲಿದೆ. ಅಥೆರ್ 450 ಯುವ ಜನರನ್ನು ಆಕರ್ಷಿಸಲಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಫೀಚರ್ಸ್

ಅಥೆರ್ 450 ಸ್ಕೂಟರ್ ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಇದರಲ್ಲಿ ಹೆಡ್‌ಲೈಟ್‌, ಡಿಆರ್‌ಎಲ್‌, ಇಂಡಿಕೇಟರ್ಸ್ ಹಾಗೂ ಟೇಲ್ ಲ್ಯಾಂಪ್‌ಗಳು ಸೇರಿವೆ. ಈ ಎಲ್ಲವೂ ಎಲ್‍ಇ‍‍ಡಿಯಾಗಿವೆ. ಇದರ ಜೊತೆಗೆ ಮಲ್ಟಿ ಫಂಕ್ಷನ್‍‍ಗಾಗಿ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಹೊಂದಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಅಥೆರ್ 450 ಬ್ಲೂಟೂತ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಇದು ಲೈವ್ ವೆಹಿಕಲ್ ಟ್ರ್ಯಾಕಿಂಗ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಮಲ್ಟಿಪಲ್ ರೈಡಿಂಗ್ ಮೋಡ್, ಚಾರ್ಜಿಂಗ್ ಸ್ಟೇಷನ್ ಲೊಕೇಶನ್ ಹಾಗೂ ಜಿಪಿಎಸ್ ನ್ಯಾವಿಗೇಷನ್ ಮುಂತಾದ ಫೀಚರ್‍‍ಗಳನ್ನು ಒಳಗೊಂಡಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬಜಾಜ್ ಎಲೆಕ್ಟ್ರಿಕ್ ಚೇತಕ್ ಕಡಿಮೆ ಫೀಚರ್‍‍ಗಳನ್ನು ನೀಡುತ್ತದೆ. ಈ ಸ್ಕೂಟರ್ ಎಲ್‍ಇ‍‍ಡಿ ಲೈಟಿಂಗ್‍‍ಗಳೊಂದಿಗೆ ಅನೇಕ ರೈಡಿಂಗ್ ಮೋಡ್‍‍ಗಳನ್ನು ಹೊಂದುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ಚೇತಕ್‍ ಟಚ್‌ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದುವ ಸಾಧ್ಯತೆಗಳಿಲ್ಲ. ಬಜಾಜ್ ಎಲೆಕ್ಟ್ರಿಕ್ ಚೇತಕ್‌ನಲ್ಲಿರುವ ಡಿಜಿಟಲ್ ಡಿಸ್‍‍ಪ್ಲೇ ಕೆಲವೊಂದು ಮಾಹಿತಿಗಳನ್ನು ಮಾತ್ರ ತೋರಿಸಲಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಟೆಕ್ನಿಕಲ್ ಸ್ಪೆಸಿಫಿಕೇಶನ್

ಅಥೆರ್ 450 ಸ್ಕೂಟರ್, 5.4 ಕಿ.ವ್ಯಾ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಈ ಮೋಟರ್ ಗರಿಷ್ಠ 20.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಮೋಟರಿಗೆ ಜೋಡಿಸಲಾಗಿರುವ ಹೆಚ್ಚಿನ ಸಾಮರ್ಥ್ಯದ 2.4 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ, ಒಂದು ಬಾರಿ ಚಾರ್ಜ್‌ ಮಾಡಿದರೆ 75 ಕಿ.ಮೀವರೆಗೆ ಚಲಿಸಬಹುದು.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಅಥೆರ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯೊಂದಿಗೆ ಮಾರಾಟ ಮಾಡುತ್ತದೆ. ಈ ಚಾರ್ಜರ್ 1 ಕಿ.ಮೀ / ನಿಮಿಷದಲ್ಲಿ 80% ಚಾರ್ಜ್ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಅಥೆರ್, 0 - 40 ಕಿ.ಮೀ ವೇಗವನ್ನು 3.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಮತ್ತೊಂದೆಡೆ, ಬಜಾಜ್ ಎಲೆಕ್ಟ್ರಿಕ್ ಚೇತಕ್ ಸ್ಕೂಟರಿನಲ್ಲಿ 4.5 ಕಿ.ವ್ಯಾ ವಿದ್ಯುತ್ ಮೋಟರ್ ಅಳವಡಿಸುವ ಸಾಧ್ಯತೆಗಳಿವೆ. ಆದರೆ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಯಾವುದೇ ಟೆಕ್ನಿಕಲ್ ಸ್ಪೆಸಿಫಿಕೇಶನ್‍‍ಗಳನ್ನು ಬಹಿರಂಗಪಡಿಸಿಲ್ಲ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 80 ಕಿ.ಮೀ ಚಲಿಸಬಹುದೆಂದು ಬಜಾಜ್ ಕಂಪನಿಯು ತಿಳಿಸಿದೆ. ಬಜಾಜ್ ಎಲೆಕ್ಟ್ರಿಕ್ ಚೇತಕ್‍‍ನಲ್ಲಿರುವ ಸ್ಪೆಸಿಫಿಕೇಶನ್‍‍ಗಳ ಬಗ್ಗೆ ಹೆಚ್ಚಿನ ವಿವರಗಳನ್ನು 2020ರ ಜನವರಿಯಲ್ಲಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವಾಗ ನೀಡಲಾಗುವುದು.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬೆಲೆಗಳು

ಅಥೆರ್ 450 ಸ್ಕೂಟರ್ ಅನ್ನು ಮೊದಲು ಬೆಂಗಳೂರಿನಲ್ಲಿ 2018ರಲ್ಲಿ ಬಿಡುಗಡೆಗೊಳಿಸಲಾಯಿತು. ಆರಂಭದಲ್ಲಿ ಅಥೆರ್ 450 ಸ್ಕೂಟರಿನ ಬೆಲೆಯು ರೂ.1.25 ಲಕ್ಷಗಳಾಗಿತ್ತು. ಆದರೆ, ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‍‍ಟಿ ದರವನ್ನು ಕಡಿಮೆಗೊಳಿಸಿದ ಕಾರಣ, ಈ ಸ್ಕೂಟರಿನ ಬೆಂಗಳೂರಿನ ಆನ್ ರೋಡ್ ಬೆಲೆಯು ಈಗ ರೂ.1.12 ಲಕ್ಷಗಳಾಗಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬೆಂಗಳೂರಿನ ನಂತರ ಅಥೆರ್ ಎನರ್ಜಿ ಇತ್ತೀಚೆಗೆ ಚೆನ್ನೈನಲ್ಲಿಯೂ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಂಪನಿಯು 450 ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಡೆಲಿವರಿಯನ್ನು ಪ್ರಾರಂಭಿಸಿದೆ. ಕಂಪನಿಯು ಶೀಘ್ರದಲ್ಲೇ ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ ಕಾರ್ಯಚರಿಸಲಿದ್ದು ನಂತರ ದೇಶಾದ್ಯಂತ ಮಾರಾಟ ಮಾಡಲಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬಿಡುಗಡೆಯಾದ ನಂತರ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆರಂಭದಲ್ಲಿ ಪುಣೆಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ನಂತರ ಕಂಪನಿಯು ಬೆಂಗಳೂರಿನಲ್ಲಿ ಮಾರಾಟ ಮಾಡಲಿದೆ. ಎಲೆಕ್ಟ್ರಿಕ್ ಚೇತಕ್ ಅನ್ನು ಹಂತ ಹಂತಗಳಲ್ಲಿ ಬಿಡುಗಡೆಗೊಳಿಸಿ ಬಜಾಜ್ ಕಂಪನಿಯು ಮಾರುಕಟ್ಟೆಯ ಅವಶ್ಯಕತೆಗಳನ್ನು ಅರಿಯಲಿದೆ. ನಂತರ ದೇಶಾದ್ಯಂತ ಬಿಡುಗಡೆಗೊಳಿಸಲಿದೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಬೆಲೆಯ ಬಗ್ಗೆ ಹೇಳುವುದಾದರೆ, ಬಜಾಜ್ ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಅಥೆರ್ 450 ಸ್ಕೂಟರಿನಷ್ಟೆ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ. ಬಜಾಜ್ ಎಲೆಕ್ಟ್ರಿಕ್ ಸ್ಕೂಟರಿನ ಆನ್ ರೋಡ್ ಬೆಲೆಯು ರೂ.1 ಲಕ್ಷದಿಂದ 1.10 ಲಕ್ಷಗಳಾಗುವ ಸಾಧ್ಯತೆಗಳಿವೆ.

ಚೇತಕ್ ಹಾಗೂ ಅಥೆರ್ 450 - ಎರಡರಲ್ಲಿ ಯಾವುದು ಬೆಸ್ಟ್?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸ್ಟೈಲಿಂಗ್ ವಿಷಯದಲ್ಲಿ ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈ ಸೆಗ್‍‍ಮೆಂಟಿನಲ್ಲಿರುವ ಪ್ರೀಮಿಯಂ ಸ್ಕೂಟರ್‍‍ಗಳಾಗಿವೆ. ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿವೆ. ಈ ಎರಡು ಸ್ಕೂಟರ್‍‍ಗಳಲ್ಲಿ ಯಾವುದು ಬೆಸ್ಟ್ ಎಂಬುದು ಎಲೆಕ್ಟ್ರಿಕ್ ಚೇತಕ್ ಸ್ಕೂಟರ್ ಬಿಡುಗಡೆಯಾದ ನಂತರ ಖಚಿತವಾಗಿ ತಿಳಿಯಲಿದೆ.

Most Read Articles

Kannada
English summary
Bajaj Electric Chetak Vs Ather 450: An Initial Comparison Of Two Premium Electric Scooters - Read in Kannada
Story first published: Friday, October 25, 2019, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X