ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಪುಣೆ ಮೂಲದ ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‍‍ಫಾರ್ಮ್ ಯುಲು ಕಂಪನಿಯಲ್ಲಿ ರೂ.57.27 ಕೋಟಿ ಹೊಡಿಕೆ ಮಾಡಿದೆ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯು ಬೆಂಗಳೂರು ಸಿಟಿಯ ಪ್ರಮುಖ ಸ್ಥಳಗಳಲ್ಲಿ ತಮ್ಮ ಇ ಸೈಕಲ್‍‍ಗಳ ಸೇವೆಯನ್ನು ಒದಗಿಸುತ್ತಿದೆ.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಬಜಾಜ್ ಆಟೋ ಲಿಮಿಟೆಡ್ ಕಂಪನಿ ಮತ್ತು ಯೂಲು ಕಂಪನಿಗಳು ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಒಪ್ಪಂದದ ಪ್ರಕಾರ ಬಜಾಜ್ ಆಟೋ, ಯುಲುಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಒದಗಿಸಲಿದೆ.ಈ ಎಲೆಕ್ಟ್ರಿಕ್ ಸೈಕಲ್‍ಗಳನ್ನು ಬಜಾಜ್ ಮತ್ತು ಯುಲು ಅಭಿವೃದ್ದಿಪಡಿಸಿದ್ದು, ಇದನ್ನು ಗ್ರಾಹಕರ ಗಮನಸೆಳೆಯುವಂತೆ ತಯಾರಿಸಲಾಗುವುದು.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಯುಲು ಮೈಕ್ರೊ ಮೊಬಿಲಿಟಿ ಎಲೆಕ್ಟ್ರಿಕ್ ವಾಹನಗಳ ನಿಯೋಜನೆಯನ್ನು ಬಜಾಜ್ ಆಟೋ ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲಿದೆ.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಹೊಸ ಸಹಭಾಗಿತ್ವವು ದೇಶದಲ್ಲಿನ ನಗರಗಳ ಪ್ರಯಾಣವನ್ನು ಸುಲಭವಾಗಿಸುವ ಗುರಿಯನ್ನು ಹೊಂದಿದೆ. ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್‍‍ರವರು ಮಾತನಾಡಿ, ಬಜಾಜ್ ಆಟೋ ಲಿಮಿಟೆಡ್‍‍ನಲ್ಲಿ ಸಂಚಾರ ದಟ್ಟಣೆ ಕಡಿತ ಮತ್ತು ಮಾಲಿನ್ಯ ನಿಯಂತ್ರಣ ಎಂಬ ಈ ಎರಡು ಅಂಶಗಳು ಭವಿಷ್ಯದಲ್ಲಿ ಗಮನದಲ್ಲಿಕೊಂಡು ವಾಹನಗಳನ್ನು ಬಿಡುಗಡೆಗೊಳಿಸುತ್ತೇವೆ.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ದೊಡ್ಡ ನಗರಗಳಲ್ಲಿ ಮೆಟ್ರೊದಂತಹ ಆಧುನಿಕ ಸಾರಿಗೆ ವ್ಯವಸ್ಥೆ ಇರುವಲ್ಲಿ ಇ-ಸೈಕಲ್‍ಗಳ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಯುಲುನಲ್ಲಿ ನಾವು ಬಹಳ ಕಡಿಮೆ ಸಮಯದಲ್ಲಿ ನಮ್ಮ ಪಾಲುಗಾರಿಕೆಯಲ್ಲಿ ಹೊಸ ಸಾಧನೆಯನ್ನು ಮಾಡಿದ್ಡೇವೆ. ಇದಕ್ಕಾಗಿ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಯುಲು ಪಾಲುಗಾರಿಕೆಯಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಯುಲು ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಗುಪ್ತಾ ಮಾತನಾಡಿ, ಹೆಚ್ಚಿನ ಸಂಖ್ಖೆಯಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ವಾಹನಗಳ ಪೂರೈಕೆಯನ್ನು ಮಾಡಲು ಬಜಾಜ್ ಕಂಪನಿಯ ಜೊತೆ ಸಹಭಾಗಿತ್ವ ಹಂಚಿಕೊಂಡ ಮೇಲೆ ಮೈಕ್ರೊ ಮೊಬಿಲಿಟಿ ವ್ಯವಹಾರದಲ್ಲಿ ಇನ್ನಷ್ಟು ಯಶ್ವಸಿಯಾಗಲಿದೆ.

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಬಜಾಜ್ ಆಟೋ ಲಿಮಿಟೆಡ್ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿದ್ದು, ತನ್ನ ಗುಣಮಟ್ಟ ಮತ್ತು ಉತ್ಪಾದನಾ ಸಾಮರ್ಥ್ಯಗಳಿಗಾಗಿ ಜಾಗತಿಕವಾಗಿ ಜನಪ್ರಿಯತೆಗಳಿಸಿದ ಕಂಪನಿಯಾಗಿದೆ. ಯುಲು ತನ್ನ ಗ್ರಾಹಕರಿಗೆ ಸೇವೆ ಸಲ್ಲಿಸಲು ವಿಶ್ವಾಸಾರ್ಹ ಮತ್ತು ಆರಾಮದಾಯಕವಾದ ಎಲೆಕ್ಟ್ರಿಕ್ ವಾಹನಗಳ ಪೂರೈಕೆಯನ್ನು ಮಾಡಲು ಬಜಾಜ್ ಕಂಪನಿಯಾಂತಹ ಜನಪ್ರಿಯ ಸಂಸ್ಥೆಗಳ ಸಹಭಾಗಿತ್ವದಿಂದ ಇನ್ನಷ್ಟು ಯಶ್ವಸ್ವಿಯಾಗಲು ಸಹಕಾರಿಯಾಗಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಬಜಾಜ್ ಆಟೋ ಇತ್ತೀಚಿಗೆ ಹೂಡಿಕೆಯನ್ನು ತ್ವರಿತವಾಗಿ ತನ್ನ ಸೇವೆಯನ್ನು ವಿಸ್ತರಿಸಲು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ. ಇದು ವಾಹನಗಳ ಲಭ್ಯತೆಯನ್ನು ಹೆಚ್ಚಿಸಿ, ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಕಂಪನಿ ಹೇಳಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

2020ರ ಅಂತ್ಯದ ವೇಳೆಗೆ ಯುಲು ಒಂದು ಲಕ್ಷಗಳ ಸೈಕಲ್‍‍ಗಳನ್ನು ತಯಾರಿಸಲು ಯೋಜಿಸಿದೆ. ಕಂಪನಿಯು ತನ್ನ ಸ್ಪಾರ್ಟ್ ಸೀಟಿಸ್ ಮಿಷನ್ ಅಡಿಯಲ್ಲಿ ಎಂಟು ಮೆಗಾ ನಗರಗಳಿಗೆ ಮತ್ತು ಇತರ ಸ್ಮಾರ್ಟ್ ಸಿಟಿಗಳಿಗೆ ವಿಸ್ತರಿಸಲು ಯೋಜಿಸಿದೆ. ಸದ್ಯಕ್ಕೆ ಬೆಂಗಳೂರು, ದೆಹಲಿ, ಪುಣೆ, ಗ್ರೇಟರ್ ಮುಂಬೈ ಮತ್ತು ಭುವನೇಶ್ವರದಲ್ಲಿ ಈ ಇ-ಎಲೆಕ್ಟ್ರಿಕ್ ಸೈಕಲ್ ಬೈಕ್‍‍ಗಳ ಸೇವೆಗಳಿದೆ. ಬಜಾಜ್ ಕಂಪನಿಗೆ ಮೈಕ್ರೋ ಮೊಬಿಲಿಟಿ ವಿಭಾಗವನ್ನು ಪ್ರವೇಶಿಸಲು ಪಾಲುದಾರಿಕೆ ಸುಲಭವಾದ ಮಾರ್ಗವಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಯುಲು ಇ-ಸೈಕಲ್‍‍‍ನಲ್ಲಿ ಹೂಡಿಕೆ ಮಾಡಲಿದೆ ಬಜಾಜ್ ಆಟೋ

ಯುಲುನಲ್ಲಿ ಹೂಡಿಕೆ ಮಾಡುವುದರಿಂದ ಅನೇಕ ನಗರದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ಸುಲಭವಾಗಲಿದೆ. ಬಜಾಜ್ ಅಂತಹ ಜನಪ್ರಿಯ ಕಂಪನಿಗೆ ಸ್ವಂತವಾಗಿ ಮಾಡುವುದು ಸುಲಭವಾದರೂ, ಪಾಲುಗಾರಿಕೆಯಿಂದ ವಿವಿಧ ನಗರಗಳಲ್ಲಿ ತನ್ನ ಸೇವೆ ವಿಸ್ತರಿಸಲು ಮತ್ತು ಹೂಡಿಕೆಯ ಮೇಲೆ ತಕ್ಷಣದ ಆದಾಯವನ್ನು ಪಡೆಯಬಹುದಾಗಿದೆ.

Most Read Articles

Kannada
English summary
Bajaj Auto Partners With Electric Mobility Start-Up Yulu: Invests 57.27 Crore - Read in Kannada
Story first published: Wednesday, November 27, 2019, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X