ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಬಜಾಜ್ ಸಂಸ್ಥೆಯ ಸ್ಪ್ಲಿಟ್ ಸೀಟ್ ಹೊಂದಿರುವ ಪಲ್ಸರ್ 125 ಡೀಲರ್‍‍ಗಳ ಬಳಿ ತಲುಪಿದೆ. ಈ ಬೈಕ್ ಪಲ್ಸರ್ 125 ನಿಯಾನ್‍ಗಿಂತ ಉನ್ನತ ಮಟ್ಟದಲ್ಲಿದೆ ಮತ್ತು ಕೆಲವು ವ್ಯತ್ಯಸಗಳನ್ನು ಹೊಂದಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಪಲ್ಸರ್ 125 ಬೈಕ್ ಪಲ್ಸರ್ ನಿಯಾನ್‍ಗಿಂತಲೂ ದರದಲ್ಲಿ ರೂ. 3,000 ಸಾವಿರ ಅಧಿಕವಾಗಿದೆ.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಬಜಾಜ್ ಆಟೋ ಸಂಸ್ಥೆಯು ಕಳೆದ ತಿಂಗಳು ಪಲ್ಸರ್ 125 ನಿಯಾನ್ ಅನ್ನು ಬಿಡುಗಡೆ ಮಾಡಿದರು. ಬಜಾಜ್ ಪಲ್ಸರ್ ಶ್ರೇಣೆಯಲ್ಲಿನ ಅತ್ಯಂತ ಪವರ್‍‍‍ಫುಲ್ ಬೈಕ್‍‍ಗಳ ಸಾಲಿನ ಬೈಕ್‍‍ಗಳನ್ನು ಇಷ್ಟ ಪಡುವ ಅಭಿಮಾನಿಗಳಿಗೆ ಅಷ್ಟು ಇಷ್ಟವಾಗಿಲ್ಲ, ಆದರೆ ಪಲ್ಸರ್ ಬೈಕ್ ಅಭಿಮಾನಿಗಳಿಗೆ ಅಗ್ಗದ ದರದಲ್ಲಿ ಬಿಡುಗಡೆ ಮಾಡುವ ಮೂಲಕ ಮಧ್ಯಮ ವರ್ಗದ ಜನರನ್ನು ಸೆಳೆಯಲು ಪ್ರಯತ್ನಿಸಿದರು. ಈ ಮೂಲಕ ಪಲ್ಸರ್ 125 ಶ್ರೇಣೆಯನ್ನು ಪ್ರಾರಂಭಿಸಿದರು.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಭಾರತದ ಎಕ್ಸ್ ಶೋ ರೂಂ ಪ್ರಕಾರ ಆರಂಭಿಕ ಬೆಲೆ ರೂ.64,000 ಸಾವಿರಕ್ಕೆ ಪಲ್ಸರ್ 125 ನಿಯಾನ್ ಅನ್ನು ಆಗಸ್ಟ್ 14ರಂದು ಬಿಡುಗಡೆಗೊಳಿಸಿದ್ದರು. 125 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದರಿಂದ ಎ‍ಬಿಎಸ್ ಹೊಂದುವ ಅವಶ್ಯಕತೆಯಿಲ್ಲದ ಕಾರಣ ಕಡಿಮೆ ದರದಲ್ಲಿ ಬಿಡುಗಡೆ ಮಾಡಿಲಿದೆ.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಪಲ್ಸರ್ 125 ಸಾಲಿಗೆ ಮತ್ತೊಂದು ರೂಪಾಂತರವನ್ನು ಸೇರಿಸಲು ಚಿಂತಿಸಿದೆ. ಡಿನೋಸ್ ವಾಲ್ಟ್ ಚಿತ್ರವನ್ನು ನೋಡುವಾಗ ತಿಳಿಯುತ್ತದೆ ಅದು ಪಲ್ಸರ್ 125 ಶ್ರೇಣೆಯಲ್ಲಿನ ಹೊಸ ರೂಪಾಂತರವೆಂದು ತಿಳಿಯುತ್ತೆ. ವಿನ್ಯಾಸದಲ್ಲಿ ಸ್ವಲ್ಪ ಮಟ್ಟದ ಬದಲಾವಣೆ ಬಿಟ್ಟರೆ ಯಾವುದೆ ಇತರ ಬದಲಾವಣೆ ಮಾಡಿಲ್ಲ.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಇವುಗಳೊಂದಿಗೆ ರಿಫ್ಲೆಕ್ಟರ್ ಹೆಡ್‍ಲ್ಯಾಂಪ್ಸ್, ಡ್ಯುಯಲ್ ಟೋನ್ ಮಾಸ್ಕ್ ಮತ್ತು ಸ್ಕ್ರೀನ್, ಬಲವಾದ ಫ್ಯುಯಲ್ ಟ್ಯಾಂಕ್ ಹಾಗೂ ಡಿಜಿಟಲ್ ಡಿಸ್ಪ್ಲೇ ಮತ್ತು ಅನಾಲಾಗ್ ಟಾಚೋ ಮೀಟರ್ ಅನ್ನು ಪಡೆದ ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕಂಸೋಲ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಬೈಕಿನ ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಕನ್ವೆಂಷನಲ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸೈಡೆಡ್ ನೈಟ್ರೋಕ್ಸ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಬ್ರೇಕ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 260ಎಂಎಂ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಹಿಂಭಾಗದಲ್ಲಿ ಆಕರ್ಷಕವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದ್ದು, ಆದರೆ ಪಲ್ಸರ್ 125 ನಿಯಾನ್‌ನಲ್ಲಿನ ಸ್ಪ್ಲಿಟ್ ಗ್ರ್ಯಾನ್ ರೈಲ್, ಆಕರ್ಷಕ ಗ್ರಾಫಿಕ್ಸ್ ನಿಂದ ಸ್ಟೈಲಿಸ್ ಲುಕ್ ಹೊಂದಿದೆ. ಬೈಕ್ ಏರ್-ಕೂಲ್ಡ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 11.8 ಬಿಎಚ್‍ಪಿ ಪವರ್ ಮತ್ತು 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರೇರ್ ವ್ಹೀಲ್ ಜೊತೆ 5-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಪಲ್ಸರ್ ಬ್ರ್ಯಾಂಡ್ ಸುಮಾರು ಎರಡು ದಶಕಗಳ ಹಿಂದೆ ಲಗ್ಗೆ ಇಟ್ಟು ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ್ದರು. ವರ್ಷಗಳು ಕಳೆದಂತೆ ಹೊಸ ಬೈಕ್‍‍ಗಳ ಆಗಮನದ ಮೂಲಕ ಸ್ಪರ್ಧೆ ಹೆಚ್ಚಾಯಿತು. ಪಲ್ಸರ್ ಬ್ರ್ಯಾಂಡ್ ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಬಜಾಜ್ ಪಲ್ಸರ್ 125

ಪಲ್ಸರ್ 150 ಬೈಕ್ ದುಬಾರಿ ಎಂದು ಖರೀದಿಸಲು ಸಾಧ್ಯವಾಗದವರಿಗೆ ಅಗ್ಗದ ಪಲ್ಸರ್ ಬೈಕ್ ಅನ್ನು ಖರೀದಿಸಬಹುದಾಗಿದೆ. ಬಜಾಜ್ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಬಿಡಿ ಭಾಗಗಳೂ ಸಹ ಬಹಳ ದುಬಾರಿ ಆಗಿರುವುದಿಲ್ಲ. ಇದೆ ಕಾರಣಕ್ಕೆ ಬೈಕ್ ಪ್ರಿಯರು ಹೆಚ್ಚಾಗಿ ಪಲ್ಸರ್ ಬೈಕ್‍ ಅನ್ನು ಇಷ್ಟ ಪಡುತ್ತಾರೆ.

Most Read Articles

Kannada
Read more on ಬಜಾಜ್ bajaj
English summary
Bajaj Pulsar 125 With Split Seats & Sporty Graphics To Be Launched Soon - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X