150ಸಿಸಿ ಬೈಕ್ ಸೆಗ್ಮೆಂಟ್ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಬಜಾಜ್ ಪಲ್ಸರ್ ಬೈಕ್‍ಗಳು ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಜನಪ್ರೀಯತೆಯನ್ನು ಪಡೆದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಏಕೆಂದರೆ ನಮಲ್ಲಿ ಹಲವರಿಗೆ ಪಫಾರ್ಮೆನ್ಸ್ ಬೈಕ್ ಎಂದು ಹೆಳಿದರೆ ನೆನಪಾಗೋದೆ ಪಲ್ಸರ್ ಬೈಕ್‍ಗಳು. ಈ ಬೈಕ್‍ಗಳು ಬಿಡುಗಡೆಗೊಂಡಾಗಿನಿಂದಲೂ ಇಲ್ಲಿಯವರೆಗು ಮಾರುಕಟ್ಟೆಯಲ್ಲಿರುವ ಎಲ್ಲಾ ಸಮುದಾಯದ ಗ್ರಾಹಕರನ್ನು ಅದರಲ್ಲಿಯು ಪ್ರತ್ಯೇಕವಾಗಿ ಯುವ ಸಮುದಾಯದ ಗ್ರಾಹಕರನ್ನು ಆಕರ್ಷಿಸುತ್ತಲೇ ಇದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಹೀಗಿರುವಾಗ ಪಲರ್ ಬೈಕ್‍ಗಳ ಸರಣಿಯಲ್ಲಿ ಎಂಟ್ರಿ ಲೆವೆಲ್ ಬೈಕ್ ಆದ ಪಲ್ಸರ್ 150 ಬೈಕ್ ಪ್ರತೀ ತಿಂಗಳು ಬಜಾಜ್ ಆಟೋ ಸಂಸ್ಥೆಯಲ್ಲಿನ ಬೈಕ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಜೂನ್ 2019ರಲ್ಲಿ 7,408 ಯೂನಿಟ್ ಪಲ್ಸರ್ 220, 1,3352 ಯೂನಿಟ್ ಪಲ್ಸರ್ 180 ಬೈಕ್ ಮತ್ತು ಪಲ್ಸರ್ ಬರೊಬ್ಬರಿ 62,248 ಯೂನಿಟ್ ಪಲ್ಸರ್ 150 ಬೈಕ್‍ಗಳು ಮಾರಾಟವಾಗಿದೆ ಎನ್ನಲಾಗಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಇನ್ನು ಬಿಡುಗಡೆಗೊಂಡ 2019ರ ಹೊಸ ಬಜಾಜ್ ಪಲ್ಸರ 150 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 64,998 ಸಾವಿರದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ನಿಯಾನ್ ಕಲೆಕ್ಷನ್ ಬಣ್ಣಗಳನ್ನು ಪಡೆದು, ಹೊಸ ಗ್ರಾಫಿಕ್ಸ್ ಮತ್ತು ಹೊಸ ಬಣ್ಣಗಳನ್ನು ಹೊತ್ತು ಬಿಡುಗಡೆಗೊಂಡಿದೆ ಎನ್ನಲಾಗಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಮೊದಲ ಬಾರಿಗೆ ಪಲ್ಸರ್ ಬೈಕ್ 2003ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಕಂಪನಿಯು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತರಲಾಗುತ್ತಿದ್ದು, ಹೊಸ ಬಣ್ಣದ ಯೋಜನೆಗಳೊಂದಿಗೆ ಉತ್ಪನ್ನಗಳನ್ನು ಶ್ರೀಮಂತಗೊಳಿಸುತ್ತಿರುವುದು ಈ ಬೈಕಿನ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಹೊಸ ನಿಯಾನ್ ಕಲೆಕ್ಷನ್ ಬಣ್ಣಗಳಲ್ಲಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕಿನ ಬೇಸ್ ವೇರಿಯಂಟ್‍‍ನಲ್ಲಿ ಮಾತ್ರ ಲಬ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಹೋಂಡಾ ಸಿಬಿ ಯುನಿಕಾರ್ನ್ 150, ಹೀರೋ ಅಚೀವರ್ 150, ಯಮಹಾ ಎಸ್‍ಜೆಡ್-ಆರ್‍ಆರ್ ಮತ್ತು ಇನ್ನಿತರೆ 150ಸಿಸಿ ಎಂಟ್ರಿ ಲೆವೆಲ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೊಸ ಬಜಾಜ್ ಪಲ್ಸರ್ 150 ನಿಯಾನ್ ಸಿರೀಸ್ ಬೈಕ್ ನಿಯಾನ್ ರೆಡ್, ನಿಯಾನ್ ಎಲ್ಲೊ ಮತ್ತು ಮೇಟ್ ಬ್ಲಾಕ್ ಎಂಬ ಮೂರು ಹೊಸ ಪೆಯಿಂಟ್ ಸ್ಕೀಮ್‍ನ ಆಯ್ಕೆಯಲ್ಲಿ ಇದೀಗ ಖರೀದಿಗೆ ಲಭ್ಯವಿದೆ.

ಈ ಹೊಸ ಮೂರು ಬಣ್ಣಗಳನ್ನು ನೀವು ಹೊಸ ಬಜಾಜ್ ಪಲ್ಸರ್ ಬೈಕಿನ ಹೆಡ್‍‍ಲ್ಯಾಂಪ್‍ನ ಮೇಲೆ, ಪಲ್ಸರ್ ಲೋಗೊ, ರೊಯರ್ ಗ್ರಾಬ್ ರೈಲ್, ಸೈಡ್ ಪ್ಯಾನಲ್ ಮೆಶ್ ಮತ್ತು ಹಿಂಭಾಗದಲ್ಲಿ 3ಡಿ ಚಿಹ್ನೆಯನ್ನು ಪಡೆದುಕೊಂಡಿದ್ದು, ಇನ್ನು ಮೆಟ್ ಬ್ಲಾಕ್ ಬಣ್ಣದ ಬೈಕ್ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆದುಕೊಂಡಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಎಂಜಿನ್ ಸಾಮರ್ಥ್ಯ

ತಾಂತ್ರಿಕವಾಗಿ ಹೊಸದಾಗಿ ಬಿಡುಗಡೆಗೊಂಡ ಬಜಜ್ ಪಲ್ಸರ್ 150 ಬೈಕ್ ಯಾವುದೇ ಬದಲಾವಣೇಗಳನ್ನು ಪಡೆದುಕೊಂಡಿರುವುದಿಲ್ಲವಾಗಿದ್ದು, 149ಸಿಸಿ ಸಿಂಗಲ್ ಸಿಲೆಂಡರ್ ಡಿಟಿಎಸ್ಐ ಎಂಜಿನ್ ಸಹಾಯದಿಂದ 13.8 ಬಿಹೆಚ್‍ಪಿ ಮತ್ತು 13.4 ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಇದಲ್ಲದೇ ಹೊಸ ಬಜಾಜ್ ಪಲ್ಸರ್ 150 ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲಿ ಟ್ವಿನ್ ಶಾಕ್ ಅಬ್ಸಾರ್‍‍ಬರ್‍‍ಗಳನ್ನು ಒದಗಿಸಲಾಗಿದ್ದು, ಜೊತೆಗೆ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡ್ರಂ ಬ್ರೇಕ್‍ಗಳನ್ನು ನೀಡಲಾಗುತ್ತಿದೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಇನ್ನು ಹೊಸ ಬಜಾಜ್ ಪಲ್ಸರ್ 150 ನಿಯಾನ್ ಬಣ್ಣಗಳಲ್ಲಿ ಬಿಡುಗಡೆಯಾದ ಬಗ್ಗೆ ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷರಾದ ಎರಿಕ್ ವಾಸ್ ಅವರು 'ಪಲ್ಸರ್ ಬೈಕ್‍ಗಳು ಸುಮಾರು 17 ವರ್ಷದಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಲು ಕಳೆದ ದಿನಗಳ ಹಿಂದೆ 1 ಕೋಟಿಗು ಹೆಚ್ಚು ಪಲ್ಸರ್ ಬೈಕ್‍ಗಳು ಮಾರಾಟಗೊಂಡಿರುವ ನಿಧರ್ಶನವೇ ಸಾಕ್ಷಿ. ಎಂದು ಹೇಳಿಕೊಂಡಿದ್ದಾರೆ.

150ಸಿಸಿ ಬೈಕ್ ಸೆಗ್ಮೆಂಟ್‍ಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಬಜಾಜ್ ಪಲ್ಸರ್ 150

ಬಜಾಜ್ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಬಿಡಿ ಭಾಗಗಳೂ ಸಹ ಬಹಳ ದುಬಾರಿ ಆಗಿರುವುದಿಲ್ಲ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಸಹ ಸುಲಭವಾಗಿ ಲಭ್ಯವಾಗುವಂತಹ ನಿರ್ವಹಣೆಯನ್ನು ಪಲ್ಸರ್ ಬೈಕ್ ಪಡೆದುಕೊಂಡಿದೆ.

Most Read Articles

Kannada
English summary
Bajaj Pulsar 150 Sales June 2019. Read In Kannada
Story first published: Monday, July 29, 2019, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X