ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಆಟೋ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಬೈಕುಗಳ ಬೆಲೆಯನ್ನು ಏರಿಸಿದೆ. ಪಲ್ಸರ್, ಅವೆಂಜರ್ ಹಾಗೂ ಡೊಮಿನಾರ್ 400 ಸೇರಿದಂತೆ ಎಲ್ಲಾ ಸರಣಿಯ ಬೈಕುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಪಲ್ಸರ್ ಸರಣಿಯಲ್ಲಿ ಕ್ಲಾಸಿಕ್ 150, ಪಲ್ಸರ್ 150 ನಿಯಾನ್, 160 ಎನ್‍ಎಸ್, 200 ಎನ್‍ಎಸ್ ಹಾಗೂ 220 ಎಫ್ ಸೇರಿದಂತೆ ಹಲವು ಬೈಕುಗಳಿದ್ದು, ಇವುಗಳ ಬೆಲೆಯನ್ನು ರೂ.4,000ದವರೆಗೆ ಏರಿಕೆ ಮಾಡಲಾಗಿದೆ.

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಅವೆಂಜರ್ ಸರಣಿಯಲ್ಲಿ ಸ್ಟ್ರೀಟ್ 160, ಕ್ರೂಸ್ ಹಾಗೂ ಸ್ಟ್ರೀಟ್ 220 ಬೈಕುಗಳಿವೆ. ಇವುಗಳ ಬೆಲೆಯನ್ನು ರೂ.1,000ದವರೆಗೆ ಏರಿಸಲಾಗಿದೆ. ಬಜಾಜ್ ಎಲ್ಲಾ ಬೈಕುಗಳಿಗಿಂತ ಡೊಮಿನಾರ್ ಬೈಕಿನ ಬೆಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಮಾದರಿ ಹಳೆ ದರ ಹೊಸ ದರ
ಬಜಾಜ್ ಪಲ್ಸರ್ 150 ಕ್ಲಾಸಿಕ್ ಮತ್ತು ನಿಯಾನ್ ರೂ.71,200 ರೂ.75,200
ಬಜಾಜ್ ಪಲ್ಸರ್ 150 (ಸಿಂಗಲ್ ಡಿಸ್ಕ್) ರೂ.84,960 ರೂ.85,958
ಬಜಾಜ್ ಪಲ್ಸರ್ 150 (ಟ್ವಿನ್ ಡಿಸ್ಕ್) ರೂ.88,838 ರೂ.89,837
ಬಜಾಜ್ ಪಲ್ಸರ್ ಎನ್‍ಎಸ್160 ರೂ.93,094 ರೂ.94,195
ಬಜಾಜ್ ಪಲ್ಸರ್ 180 ಎಫ್ ರೂ.95,290 ರೂ.96,390
ಬಜಾಜ್ ಪಲ್ಸರ್ 220 ಎಫ್ ರೂ.107,028 ರೂ.108,327
ಬಜಾಜ್ ಪಲ್ಸರ್ ಎನ್‍ಎಸ್200 ರೂ.113,056 ರೂ.114,355
ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಕಂಪನಿಯು ಡೊಮಿನಾರ್ 400 ಬೈಕಿನ ಬೆಲೆಯನ್ನು ರೂ.10,000ದವರೆಗೆ ಹೆಚ್ಚಿಸಿದೆ. ಈ ವರ್ಷದ ಆರಂಭದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಿದ ನಂತರ ಎರಡನೇ ಬಾರಿಗೆ ಈ ಬೈಕಿನ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ.

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಹೊಸ ತಲೆಮಾರಿನ ಡೊಮಿನಾರ್ ಬೈಕ್ ಅನ್ನು ಬಿಡುಗಡೆಗೊಳಿಸಿದಾಗ ಬೈಕಿನ ಬೆಲೆಯು ರೂ.1.74 ಲಕ್ಷಗಳಾಗಿತ್ತು. ನಂತರ ಈ ಬೈಕಿನ ಬೆಲೆಯನ್ನು ರೂ.6,000ದಷ್ಟು ಏರಿಸಲಾಯಿತು. ಈಗ ಮತ್ತೊಮ್ಮೆ ರೂ.10,000 ಏರಿಸಲಾಗಿದೆ.

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.90 ಲಕ್ಷಗಳಾಗಿದೆ. ಬೆಲೆ ಏರಿಕೆಯ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬಜಾಜ್ ಕಂಪನಿಯ ಎಲ್ಲಾ ಬೈಕುಗಳ ಮೇಲಿನ ಬೆಲೆ ಏರಿಕೆಯು ತಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಎಂಟ್ರಿ ಲೆವೆಲ್‍‍ನ ಪಲ್ಸರ್ 125 ಬೈಕಿನ ಬೆಲೆಯನ್ನು ಏರಿಕೆ ಮಾಡಲಾಗಿಲ್ಲ. ಬಜಾಜ್ ಕಂಪನಿಯು ಪಲ್ಸರ್ 125 ಬೈಕ್ ಅನ್ನು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿತ್ತು. ಈ ಬೈಕಿನಲ್ಲಿ ಪಲ್ಸರ್ 150 ಬೈಕಿನಲ್ಲಿರುವಂತಹ ಸ್ಟೈಲ್ ಹಾಗೂ ವಿನ್ಯಾಸಗಳನ್ನು ಅಳವಡಿಸಲಾಗಿದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಹೊಸ ಬಜಾಜ್ ಪಲ್ಸರ್ 125 ಬೈಕಿನಲ್ಲಿ 124 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 11.8 ಬಿ‍‍ಹೆಚ್‍‍ಪಿ ಪವರ್ ಹಾಗೂ 11 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಪಲ್ಸರ್ 125 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,618ಗಳಾಗಿದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಪಲ್ಸರ್ ಸರಣಿಯ ಬೈಕುಗಳು ಹೆಚ್ಚು ಮಾರಾಟವಾಗುವ ಬೈಕುಗಳಾಗಿವೆ. ಪಲ್ಸರ್ ಸರಣಿಯ ಬೈಕುಗಳು ಸ್ಪೋರ್ಟಿ ಡಿಸೈನ್, ಉತ್ತಮವಾದ ಪರ್ಫಾಮೆನ್ಸ್ ಹಾಗೂ ಒಳ್ಳೆಯ ಮೈಲೇಜ್ ಅನ್ನು ತಮ್ಮ ಗ್ರಾಹಕರಿಗೆ ನೀಡುತ್ತವೆ. ಡೊಮಿನಾರ್ 400 ಬೈಕುಗಳು ಬಜಾಜ್ ಕಂಪನಿಯ ಪ್ರಮುಖ ಬೈಕುಗಳಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೆ‍‍ಟಿ‍ಎಂ 390 ಬೈಕಿಗೆ ಪೈಪೋಟಿ ನೀಡುತ್ತವೆ.

Most Read Articles

Kannada
English summary
Bajaj Hikes Prices Of Its Entire Product Lineup: Prices Increased By Up To Rs 10,000 - Read in kannada
Story first published: Tuesday, September 17, 2019, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X