125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

ಭಾರತೀಯ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಕಳೆದ ವರ್ಷ ಪಲ್ಸರ್ ಎನ್‍ಎಸ್125 ಬೈಕ್ ಅನ್ನು ಪೋಲಾಂಡ್‍‍ನಲ್ಲಿ ಅನಾವರಣಗೊಳಿಸಿತ್ತು. ಪೋಲಾಂಡ್‍‍ನಲ್ಲಿ ಅನಾವರಣಗೊಂಡ ಎನ್‍ಎಸ್125 ಬೈಕಿನ ಬೆಲೆ ಪಿ‍ಎಲ್‍ಎನ್ 7,999ಗಳಾಗಿದ್ದು, ಭಾರತದ ಮೌಲ್ಯದಲ್ಲಿ ರೂ.1.60 ಲಕ್ಷಗಳಾಗಿದೆ. ಅದಾದ ನಂತರ ಈ ಬೈಕ್ ಅನ್ನು ಕೊಲಂಬಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಬಜಾಜ್ ಕಂಪನಿಯು ಹೊಸ 125 ಸಿಸಿ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

ಬಜಾಜ್ ಕಂಪನಿಯು ಪಲ್ಸರ್ ಎನ್‍ಎಸ್ 125 ಬೈಕ್ ಅನ್ನು ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಕೆಲವು ವರದಿಗಳ ಪ್ರಕಾರ, ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಮುಂದಿನ ಬೈಕ್ ಪಲ್ಸರ್ ಎನ್‍ಎಸ್ 125 ಆಗಿರಲಿದೆ. ಬಜಾಜ್ ಕಂಪನಿಯ ಪಲ್ಸರ್ ಸರಣಿಯ ಬೈಕುಗಳು ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. 125ಸಿಸಿ ಸೆಗ್‍‍ಮೆಂಟಿನಲ್ಲಿರುವ ಬೇರೆ ಕಂಪನಿಯ ಬೈಕುಗಳಿಗೂ ಸಹ ಹೆಚ್ಚಿನ ಬೇಡಿಕೆಯಿದೆ. ಆದರೆ ಬಜಾಜ್ ಕಂಪನಿಯು ಈ ಸೆಗ್‍‍ಮೆಂಟಿನಲ್ಲಿ ಯಾವುದೇ ಬೈಕ್ ಅನ್ನು ಹೊಂದಿಲ್ಲ.

125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

ಪಲ್ಸರ್ ಎನ್‍ಎಸ್125 ಬೈಕ್, 125ಸೆಗ್‍‍ಮೆಂಟಿಗೆ ಹೇಳಿ ಮಾಡಿಸಿದ ಬೈಕ್ ಆಗಿದೆ. ಸಿ‍ಎನ್‍‍ಬಿ‍‍ಸಿ ಟಿವಿ18 ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡಿದ ಬಜಾಜ್ ಆಟೋದ ರಾಕೇಶ್ ಶರ್ಮಾರವರು ಬಜಾಜ್ ಕಂಪನಿಯು 125 ಸಿಸಿ ಸೆಗ್‍‍ಮೆಂಟಿನ ಬೈಕ್ ಅನ್ನು ಆಗಸ್ಟ್ 2019ರಲ್ಲಿ ಬಿಡುಗಡೆಗೊಳಿಸಲಿದೆ ಎಂದು ತಿಳಿಸಿದರು. ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ರಾಜೀವ್ ಬಜಾಜ್‍‍ರವರು, 125ಸಿಸಿ ಸೆಗ್‍‍ಮೆಂಟಿನಲ್ಲಿ ಪ್ರತಿ ತಿಂಗಳು 2.5 ಲಕ್ಷ ಬೈಕುಗಳ ಮಾರಾಟವಾಗುತ್ತಿರುವ ಕಾರಣ ಬಜಾಜ್ ಕಂಪನಿಯು ಈ ಸೆಗ್‍‍ಮೆಂಟಿನಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಿದ್ದರು.

125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

2019ರ ಬಜಾಜ್ ಪಲ್ಸರ್ ಎನ್‍ಎಸ್125 ಬೈಕ್, ಪಲ್ಸರ್ ಎನ್‍ಎಸ್ ಸರಣಿಯ ಬೈಕುಗಳಲ್ಲಿರುವಂತಹ ವಿನ್ಯಾಸವನ್ನು ಹೊಂದಿರಲಿದೆ. ಆದರೆ ಈ ಬೈಕ್ ಹೊಸ ಬಗೆಯ ಬಾಡಿ ಗ್ರಾಫಿಕ್ಸ್ ಹಾಗೂ ಬಣ್ಣಗಳನ್ನು ಹೊಂದಿರಲಿದೆ. ಹೊಸ ಪಲ್ಸರ್ ಎನ್‍ಎಸ್125 ಬೈಕಿನಲ್ಲಿ ಮ್ಯಾಟ್ ಫಿನಿಶಿಂಗ್ ಎಕ್ಸಾಸ್ಟ್ ಮಫ್ಲರ್, ಡ್ಯೂಯಲ್ ಟೋನ್ ಕಲರ್ ಸ್ಕೀಂ ಹಾಗೂ ಸ್ಪ್ಲಿಟ್ ಸೀಟುಗಳ ಜೊತೆಗೆ ಅಗಲವಾದ ಟಯರ್‍‍ಗಳಿರಲಿವೆ. ಈ ಬೈಕಿನ ಎಂಜಿನ್ ಸ್ಪೋರ್ಟಿ ಲುಕ್ ಹೊಂದಿರಲಿದೆ. ಟ್ಯಾಂಕ್ ಶ್ರೌಡ್‍‍ಗಳು ಎನ್‍ಎಸ್160 ಹಾಗೂ ಎನ್‍ಎಸ್200ಗಳಂತೆ ಇರಲಿವೆ.

125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

ಈ ಬೈಕಿನಲ್ಲಿರುವ ಉಳಿದ ಡಿಸೈನ್‍ ಅಂಶಗಳನ್ನು ಈಗ ಸ್ಥಗಿತಗೊಂಡಿರುವ ಪಲ್ಸರ್135 ಎಲ್‍ಎಸ್ ಬೈಕಿನಿಂದ ಪಡೆಯಲಾಗಿದೆ. ಇದರಲ್ಲಿ ಶಾರ್ಪ್ ಹೆಡ್‍‍ಲ್ಯಾಂಪ್, ಹೈ ವಿಂಡ್ ಸ್ಕ್ರೀನ್ ಹಾಗೂ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೊಲ್ ಹೊಂದಿರುವ ಅನಲಾಗ್ ಟಾಕೋಮೀಟರ್ ಹಾಗೂ ಡಿಜಿಟಲ್ ಡಿಸ್‍ಪ್ಲೇಗಳಿವೆ. ಬಜಾಜ್ ಎನ್‍ಎಸ್125 ಬೈಕ್ ಅನ್ನು ಬ್ಲಾಕ್, ರೆಡ್, ವೈಟ್ ಹಾಗೂ ಯಲ್ಲೊ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಂ ಬ್ರೇಕ್‍‍ಗಳಿವೆ.

ಎನ್‍ಎಸ್ 125 ಬೈಕಿನ ಮುಂಭಾಗದಲ್ಲಿ ಸಾಂಪ್ರಾದಾಯಿಕ ಮಾದರಿಯ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಸೈಡಿನ ನೈಟ್ರಾಕ್ಸ್ ಶಾಕ್ ಅಬ್ಸರ್ವರ್‍‍ಗಳಿವೆ. ಕಂಸೊಲ್ ಮೇಲೆ ಕಾರ್ಬನ್ ಫೈನರ್ ಟೆಕ್ಸ್ ಚರ್‍‍ಯಿದ್ದು, ಎರಡು ಪೀಸ್‍‍ಗಳ ಗ್ರಾಬ್ ಬಾರ್‍‍ಗಳು ಪ್ರಿಮೀಯಂ ಅಂದವನ್ನು ಹೆಚ್ಚಿಸುತ್ತವೆ. ಬಜಾಜ್ ಪಲ್ಸರ್ ಎನ್‍‍ಎಸ್125 ಬೈಕಿನಲ್ಲಿ 124.45ಸಿಸಿ ಏರ್‍‍ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದ್ದು, 8,500 ಆರ್‍‍ಪಿ‍ಎಂನಲ್ಲಿ 12 ಬಿ‍‍ಹೆಚ್‍‍ಪಿ ಪವರ್ ಹಾಗೂ 6,000 ಆರ್‍‍ಪಿ‍ಎಂನಲ್ಲಿ 11 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

125ಸಿಸಿಯಲ್ಲಿ ಬರಲಿದೆ ಹೊಸ ಬಜಾಜ್ ಪಲ್ಸರ್

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹೊಸ ಪಲ್ಸರ್ ಎನ್‍ಎಸ್125 ಬೈಕ್ ಬಜಾಜ್ ಆಟೋದ 125 ಸಿಸಿ ಸೆಗ್‍‍ಮೆಂಟಿನ ಶಕ್ತಿಶಾಲಿಯಾದ ಬೈಕ್ ಆಗಿದೆ. ಈ ಬೈಕ್ 125ಸಿಸಿಯಾಗಿರುವ ಕಾರಣ ಈ ಬೈಕಿನಲ್ಲಿ ಎ‍‍ಬಿ‍ಎಸ್ ಅಳವಡಿಸುವ ಅವಶ್ಯಕತೆಯಿಲ್ಲ. ಎ‍‍ಬಿ‍ಎಸ್ ಅಳವಡಿಸದ ಕಾರಣ ಬೆಲೆಯೂ ಏರಿಕೆಯಾಗುವುದಿಲ್ಲ. ಆದರೆ ಈ ಬೈಕ್ 125ಸಿಸಿ ಸೆಗ್‍‍ಮೆಂಟಿನಲ್ಲಿ ಕಡ್ಡಾಯವಾಗಿರುವ ಸಿ‍‍ಬಿ‍ಎಸ್ ಹೊಂದಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಬಜಾಜ್ ಪಲ್ಸರ್ ಎನ್‍ಎಸ್125 ಬೈಕಿನ ಬೆಲೆಯು ರೂ.60,000ಗಳಾಗಿರಲಿದೆ.

Most Read Articles

Kannada
Read more on ಬಜಾಜ್ bajaj
English summary
Bajaj Pulsar NS 125 launch in India scheduled for next month? - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X