ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ವರದಿಗಳ ಪ್ರಕಾರ, ಪಲ್ಸರ್ ಆರ್‌ಎಸ್‌ 200 ಬೈಕ್ ಅನ್ನು ಡ್ಯುಯಲ್ ಚಾನೆಲ್ ಎಬಿಎಸ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಆವೃತ್ತಿಯ ಬೆಲೆಯು ಜೈಪುರದ ಎಕ್ಸ್ ಶೋರೂಂ ದರದಂತೆ ರೂ.1,43,016ಗಳಾಗಲಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಡ್ಯುಯಲ್ ಚಾನೆಲ್ ಎಬಿಎಸ್‍ ಹೊಂದಲಿರುವ ಬೈಕ್, ಸಿಂಗಲ್ ಚಾನೆಲ್ ಎಬಿಎಸ್ ಬೈಕಿಗಿಂತ ಸುಮಾರು ರೂ.1,402 ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಪಲ್ಸರ್ ಆರ್‍ಎಸ್ 200 ಬೈಕಿನ ಪ್ರತಿಸ್ಪರ್ಧಿ ಬೈಕ್ ಆದ ಯಮಹಾ ವೈಜೆಡ್-ಆರ್ 15 ವಿ 3.0 ಬೈಕಿನಲ್ಲಿ ಈಗಾಗಲೇ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಪಲ್ಸರ್ ಆರ್‍ಎಸ್ 200 ಬೈಕಿನಲ್ಲಿರುವ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‍‍ಗಳನ್ನು ಬೇರೆ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುವಂತೆ ಅಪ್‍‍ಗ್ರೇಡ್ ಮಾಡಲಾಗುವುದು. ಪುಣೆ ಮೂಲದ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ ಆರ್‍ಎಸ್ 200 ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ಗೆ ಅಪ್‌ಗ್ರೇಡ್ ಮಾಡುವುದಿಲ್ಲ ಎಂದು ಮತ್ತೊಂದು ವರದಿ ಹೇಳಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಸದ್ಯಕ್ಕೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಮಾತ್ರ ಅಪ್‍‍ಗ್ರೇಡ್ ಮಾಡಲಾಗುತ್ತಿದೆ. ಈ ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅಳವಡಿಸಲಾಗಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿ‍‍ಹೆಚ್‍‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ ಆರ್‍ಎಸ್ 200 ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140.8 ಕಿ.ಮೀಗಳಾಗಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಬಿಎಸ್ 6 ಎಂಜಿನ್ ಹೊಂದಿರುವ ಬೈಕ್ ಅನ್ನು 2020ರ ಏಪ್ರಿಲ್‍‍ಗೆ ಮುಂಚಿತವಾಗಿ ಬಿಡುಗಡೆಗೊಳಿಸಲಾಗುವುದು. ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ ಹಾರ್ಡ್‍‍ವೇರ್ ಸ್ಪೆಸಿಫಿಕೇಶನ್‍‍ಗಳನ್ನು ಅಪ್‍‍ಡೇಟ್ ಮಾಡುತ್ತಿರುವ ಬೈಕಿನಲ್ಲಿ ಉಳಿಸಿಕೊಳ್ಳಲಾಗುವುದು.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಹೊಂದಲಿರುವ ಪಲ್ಸರ್ ಆರ್‍ಎಸ್ 200 ಬೈಕಿನ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿರಲಿವೆ. ಆಂಕರಿಂಗ್ ಪವರ್‍‍ಗಾಗಿ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್‍ ಡಿಸ್ಕ್ ಬ್ರೇಕ್‌ಗಳಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಸುರಕ್ಷತಾ ಫೀಚರ್‍‍ಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗುತ್ತದೆ. ಸಿಂಗಲ್ ಚಾನೆಲ್ ಎಬಿಎಸ್ ಹೊಂದಿರುವ ಬೈಕುಗಳ ಬಗ್ಗೆ ಯಾವುದೇ ವರದಿಯಾಗಿಲ್ಲವಾದರೂ, ಆ ಬೈಕುಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಬೈಕಿನ ಸ್ಟೈಲಿಂಗ್‍‍ನಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಪಲ್ಸರ್ ಆರ್‍ಎಸ್ 200 ಬೈಕಿನಲ್ಲಿ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಟ್ವಿನ್ ಪಾಡ್ ಪ್ರೊಜೆಕ್ಟರ್‍‍ಗಳು, ಎಲ್ಇಡಿ ಟೇಲ್‍‍ಲೈಟ್, ಬ್ಲಿಂಕರ್‍‍ಗಳು, ಪೂರ್ಣ ಪ್ರಮಾಣದ ಫೇರಿಂಗ್ ಡಿಸೈನ್, ಮಸ್ಕ್ಯುಲರ್ ಶೇಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್‍ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳಿವೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಈ ಬೈಕ್ ಅನ್ನು ಸದ್ಯಕ್ಕೆ ರೇಸಿಂಗ್ ರೆಡ್, ರೇಸಿಂಗ್ ಬ್ಲೂ ಹಾಗೂ ಗ್ರ್ಯಾಫೈಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪಲ್ಸರ್ 125 ನಿಯಾನ್‌ನ ಡ್ರಮ್ ಬ್ರೇಕ್ ಮಾದರಿಯ ಬೈಕ್ ಅನ್ನು ಬಜಾಜ್ ಆಟೋ ವೆಬ್‌ಸೈಟ್‌ನಿಂದ ತೆಗೆದು ಹಾಕಲಾಗಿದೆ.

ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್‍ ಪಡೆಯಲಿದೆ ಬಜಾಜ್ ಪಲ್ಸರ್ ಆರ್‍ಎಸ್ 200

ಕಂಪನಿಯ ವೆಬ್‌ಸೈಟ್‍‍ನಲ್ಲಿ ಪಲ್ಸರ್ 125 ನಿಯಾನ್‌ನ ಡಿಸ್ಕ್ ಬ್ರೇಕ್ ಬೈಕಿನ ಬೆಲೆಯನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,618ಗಳಾಗಿದೆ.

Most Read Articles

Kannada
English summary
Bajaj Pulsar RS200 dual-channel ABS to be launched soon - Read in Kannada
Story first published: Friday, November 29, 2019, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X