ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡೆಯೊಲ್ಲ

ದೇಶದೆಲ್ಲೆಡೆ ಮಾಡಿಫೈ ವಾಹನಗಳ ಕುರಿತಾಗಿ ತೀವ್ರವಾಗಿ ತನಿಖೆಗಳು ನಡೆಯುತ್ತಿದ್ದು, ನಮ್ಮ ಬೆಂಗಳೂರಿನಲ್ಲಿಯು ಸಹ ಈ ರೀತಿಯಾದ ತನಿಖೆಯು ಬಹಳಾ ತಿಂಗಳುಗಳಿಂದಲೂ ಇದೆ ಎಂದು ಹೇಳಬಹುದು. ನೈಸ್ ರಸ್ತೆಯಲ್ಲಿ ಮತ್ತು ಇನ್ನಿತರೆ ಪ್ರದೇಶಗಳಲ್ಲಿ ಮಾಡಿಫೈಡ್ ವಾಹನಗಳ ಸಂಚಾರ ಮತ್ತು ವ್ಹೀಲಿಂಗ್ ಹಾಗು ಸ್ಟಂಟ್ ಮಾಡುವವರ ಮೇಲೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ಕಾರ್ಯಾಚರಣೆ ಪ್ರಾರಂಭವಾಗಿದೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಬೆಂಗಳೂರಿನಲ್ಲಿ ಅಧಿಕವಾಗುತ್ತಿರುವ ಮಾಡಿಫೈಡ್ ಬೈಕ್‍ಗಳ ಹಾವಳಿಯನ್ನು ತಡೆಗಟ್ಟಲು, ಟ್ರಾಫಿಕ್ ಪೊಲೀಸರು ಆ ಮಾಡಿಫೈಡ್ ಬೈಕ್‍ಗಳನ್ನು ತಯಾರು ಮಾಡುವ ಗ್ಯಾರೇ‍ಜ್‍ಗಳು ಹಾಗು ಮೆಕ್ಯಾನಿಕ್‍ಗಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ ಬೆಂಗಳೂರಿನಲ್ಲಿರುಬ ಮಾಡಿಫೈಡ್ ಕಾರು ಮತ್ತು ಬೈಕ್‍ಗಳನ್ನು ಸೀಝ್ ಮಾಡಿ ನಂತರ ಅವುಗಳನ್ನು ಮಾಡಿಫೈ ಮಾಡಲು ಸಹಕರಿಸಿದ ಗ್ಯಾರೇಜ್‍ಗಳು ಮತ್ತು ಮೆಕ್ಯಾನಿಕ್‍ಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಒಂದು ವಾರದ ಹಿಂದಷ್ಟೆ ಬೆಂಗಳೂರು ಟ್ರಾಫಿಕ್ ಪೊಲೀಸರು ವ್ಹೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುತ್ತಿದ್ದ ಸವಾರರನ್ನು ಹಿಡಿಯಲು ಸ್ಪೆಷಲ್ ಡ್ರೈವ್ ಅನ್ನು ಮಾಡಲಾಗಿದ್ದು, ಇದೀಗ ಮಾಡಿಫೈಡ್ ಬೈಕ್‍ಗಳ ಹಿಂದೆ ಬಿದ್ದಿದ್ದಾರೆ. ಇನ್ಮುಂದೆ ನೀವು ನಿಮ್ಮ ಬೈಕಿನ ಯಾವುದೇ ಉಪಕರಣವನ್ನು ಅನಾಧಿಕೃತವಾಗಿ ಅಳವಡಿಸುವ ಯೋಚನೆ ಇದ್ದರೆ ನೂರಾರು ಬಾರಿ ಯೋಚನೆ ಮಾಡಬೇಕಾಗುತ್ತದೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಈ ಕಾರ್ಯಚರಣೆಯ ಕುರಿತಾಗಿ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್) ಹರಿಶೇಖರನ್‍ರವರು ಮುಂದಿನ ಕೆಲವೇ ದಿನಗಳಲ್ಲಿ ಡ್ರಾಗ್ ರೇಸಿಂಗ್ ಮಾಡುವವರ ಮೇಲೆ ಕಟ್ಟುನಿಟ್ಟಾದ ಡ್ರೈವ್ ಅನ್ನು ನಾವು ಜಾರಿ ಮಾಡಲಿದ್ದು, ಮೊದಲಿಗೆ ಡ್ರಾಗ್ ರೇಸ್ ನಡೆಯುವ ಸ್ಥಳಗಳನ್ನು ಪತ್ತೆ ಮಾಡಿ ಅಲ್ಲಿ ಭಾಗವಹಿಸುವವರನ್ನು ಬಂಧಿಸುತ್ತೇವೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಕೇವಲ ಸವಾರರನ್ನು ಮಾತ್ರವಲ್ಲದೆಯೆ ನಾವು ವಿವಿಧ ಆಟೋಮೊಬೈಲ್ ಎಂಜಿನಿಯರಿಂಗ್ ಕೇಂದ್ರಗಳು, ಗ್ಯಾರೇಜುಗಳು, ಮುಕ್ಯಾನಿಕ್ಸ್, ಮಾಡಿಫೈ ಕಾರು ಹಾಗು ಬೈಕ್‍ಗಳ ಮಾರ್ಪಾಡುಗಳಲ್ಲಿ ತೊಡಗಿರುವವರ ಮೇಲೆಯು ಸಹ ಡ್ರೈವ್ ಅನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಇದಲ್ಲದೆ, ವ್ಹೀಲಿಂಗ್ ಮತ್ತು ಡ್ರ್ಯಾಗ್ ರೇಸಿಂಗ್ ದೂರುಗಳನ್ನು ಕಂಡುಹಿಡಿಯಲು ಟ್ರಾಫಿಕ್ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಕಠಿಣವಾಗಿ ಸಹ ಪರಿಶೀಲಿಸಲಾಗುತ್ತಿದ್ದು, ನಾಗರೀಕರು ಇಂತಹ ಡ್ರಾಗ್ ರೇಸಿಂಗ್, ವ್ಹೀಲಿಂಗ್ ಮತ್ತು ಇನ್ನಿತರೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಾಹನ ಚಿತ್ರ ಮತ್ತು ಅವರ ಚಿತ್ರವನ್ನು ಎರೆ ಹಿಡಿದು ನಮಗೆ ಕಳುಹಿಸಿದ್ದಲ್ಲು, ಅವರ ಮೇಲೆ ಕ್ರಮ ತೆಗೆದುಕೊಳ್ಳಲು ನಮಗೆ ಸುಲಭವಾಗುತ್ತದೆ ಎಂದು. ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಯಾವುದೇ ದಂಡವಿಲ್ಲ ಡೈರೆಕ್ಟ್ ಅರೆಸ್ಟ್

ಇಂತಹ ಪ್ರಕರಣಗಳಲ್ಲಿ ಸಿಕ್ಕಿಕೊಂಡವರಿಗೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದ್ದು, ಅವರ ಮೇಲೆ ತಕ್ಷಣವೇ ಪ್ರಕರಣ ದಾಖಲಿಸಲಾಗುವುದು ಮತ್ತು ಮಾಲೀಕರನ್ನು ಅರೆಸ್ಟ್ ಮಾಡಲಾಗುವುದು ಎಂದು ಹಾರಿಶೇಕರನ್ ವ್ಯಕ್ತಪಡಿಸಿದ್ದಾರೆ. ಮುಂದುವರಿದಂತೆ ಬಂದಿತ ಡ್ರಾಗ್ ರೇಸರ್‍‍ಗಳ ಹತ್ತಿರ ತಮಗೆ ಗೊತ್ತಿರುವ ಡ್ರಾಗ್ ರೇಸರ್‍‍‍‍ಗಳಾ ವಿವರವನ್ನು ಕಲೆಕ್ಟ್ ಮಾಡಲಾಗುತ್ತದೆ.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಕಳೆದ ವರ್ಷದಿಂದ ಮಾಡಿಫೈಡ್ ವಾಹನಗಳು, ಡ್ರಾಗ್ ರೇಸಿಂಗ್ ಮತ್ತು ನಗರದಲ್ಲಿ ವ್ಹೀಲಿಂಗ್ ಮಾಡುವವರ ಮೇಲಿನ ಪ್ರಕರಣಗಳು ಕಡಿಮೆ ಇದ್ದರೂ ಸಹ, ಇವುಗಳಿಗೆ ಸಂಪೂರ್ಣವಾಗಿ ಕೊನೆಗೊಳಿಸುವ ಉದ್ದೇಶದಿಂದಾಗಿ ಈ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಕಳೆದ ಕೆಲವು ತಿಂಗಳುಗಳಲ್ಲಿ, ದೇಶಾದ್ಯಂತ ಪೊಲೀಸರು ತಮ್ಮ ವಾಹನಗಳೊಂದಿಗೆ ಸಾರ್ವಜನಿಕ ರಸ್ತೆಗಳಲ್ಲಿ ಕುಳಿತಿರುವ ಜನರನ್ನು ಹಿಡಿಯಲು ಪ್ರಾರಂಭಿಸಿದ್ದಾರೆ. ಬರ್ನ್‌ಔಟ್‌ಗಳನ್ನು ಮಾಡುವಾಗ ವೀಲಿಯನ್ನು ಪಾಪ್ ಮಾಡುವುದು ಅಥವಾ ಕೆಲವು ರಬ್ಬರ್ ಅನ್ನು ಸುಡುವುದು ತಪ್ಪಲ್ಲವಾದರೂ, ತೆರೆದ ಸಾರ್ವಜನಿಕ ರಸ್ತೆಗಳಲ್ಲಿ ಹಾಗೆ ಮಾಡುವುದು ಶಿಕ್ಷಾರ್ಹ ಅಪರಾಧ.

MOST READ: ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಕಳೆದ ಕೆಲವು ತಿಂಗಳುಗಳಿಂದ, ದೇಶಾದ್ಯಂತ ಪೊಲೀಸರು ತಮ್ಮ ವಾಹನಗಳೊಂದಿಗೆ ಸಾರ್ವಜನಿಕ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿರುವವರನ್ನು ಹಿಡಿಯಲು ಪ್ರಾರಂಭಿಸಿದ್ದಾರೆ. ಬರ್ನ್‌ಔಟ್ ಮಾಡುವಾಗ ವೀಲಿಯನ್ನು ಪಾಪ್ ಮಾಡುವುದು ಅಥವಾ ಕೆಲವು ರಬ್ಬರ್ ಅನ್ನು ಸುಡುವುದು ತಪ್ಪಲ್ಲವಾದರೂ, ಸಾರ್ವಜನಿಕ ರಸ್ತೆಗಳಲ್ಲಿ ಹಾಗೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಬೆಂಗಳೂರಿನಲ್ಲಿ ಇನ್ಮುಂದೆ ಮಾಡಿಫೈಡ್ ಬೈಕ್‍ಗಳ ಆಟ ನಡಿಯೊಲ್ಲ

ಏಕೆಂದರೆ ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದರಿಂದ ಸಹವರ್ತಿ ರಸ್ತೆ ಬಳಕೆದಾರರೊಂದಿಗೆ ಅಪಘಾತ ಸಂಭವಿಸಬಹುದು. ಆದ್ದರಿಂದ, ನೀವು ಸ್ಟಂಟ್ ಮಾಡಲು ಬಯಸಿದರೆ, ನಿಮ್ಮ ಬೈಕು/ಕಾರನ್ನು ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಮತ್ತು ಪೂರ್ಣ ರೈಡಿಂಗ್ ಗೇರ್‌ಗಳಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಮಾರ್ಪಡಿಸಿದ ವಾಹನಗಳನ್ನು ಸಿದ್ಧಪಡಿಸುವ ಮೆಕ್ಯಾನಿಕ್ಸ್ ಮತ್ತು ಗ್ಯಾರೇಜ್‌ಗಳ ಬಗ್ಗೆ, ಪೊಲೀಸರು ಸಹ ಅವರಿಗೆ ದಂಡ ವಿಧಿಸುತ್ತಾರೆಯೇ ಅಥವಾ ಎಚ್ಚರಿಕೆ ನೀಡಿದ ನಂತರ ಬಿಡುತ್ತಾರೆಯೇ ಎಂಬ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿಲ್ಲ.

Most Read Articles

Kannada
English summary
Bangalore Traffic Police Against Modifying Bikes Strict Action For Mechanics and Garage Owners. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X