ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಎಲೆಕ್ಟ್ರಿಕ್ ವಾಹನಗಳು, ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ವಾಹನಗಳು ಮಾರುಕಟ್ಟೆಯಲ್ಲಿರುವ ಕಾರಣಕ್ಕೆ ಭಾರೀ ಪ್ರಮಾಣದ ಪೈಪೋಟಿ ಏರ್ಪಟ್ಟಿದೆ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಬ್ಯಾಟ್‌‍ರೆ ಸ್ಕೂಟರ್ ಗ್ರಾಹಕರನ್ನು ಸೆಳೆಯುವ ಕಾರಣಕ್ಕೆ ಜೀರೊ ಡೌನ್ ಪೇಮೆಂಟ್ ಕೊಡುಗೆಗಳನ್ನು ನೀಡುತ್ತಿದೆ. ಬ್ಯಾಟ್‍‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಖರೀದಿಸ ಬಯಸುವವರಿಗೆ ಹಲವು ಕೊಡುಗೆಗಳನ್ನು ನೀಡಲು ಮುಂದಾಗಿದೆ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಗ್ರಾಹಕರು ಸುಲಭವಾಗಿ ಖರೀದಿಸುವಂತಾಗಲು ಬ್ಯಾಟ್‌‍ರೆ, ಪೈನ್‌ಲ್ಯಾಬ್ಸ್ ಹಾಗೂ ಪೇಟಿಎಂ ಜೊತೆ ಒಪ್ಪಂದ ಮಾಡಿಕೊಂಡಿದೆ. ಪೈನ್‌ಲ್ಯಾಬ್ಸ್ ಸೌಲಭ್ಯದೊಂದಿಗೆ, ಗ್ರಾಹಕರು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಪಾವತಿಸಬಹುದು.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಡೀಲರ್‍‍ಗಳ ಬಳಿ ಖರೀದಿಸುವ ಆಯ್ಕೆಯನ್ನು ಭಾರತದಾದ್ಯಂತ ಬ್ಯಾಟ್‌‍ರೆ ಡೀಲರ್‍‍ಗಳ ಬಳಿ ಮಾಸಿಕ ಕಂತುಗಳಾಗಿ ಪರಿವರ್ತಿಸಬಹುದು. ಇದರ ಜೊತೆಗೆ, ಪೇಟಿಎಂ ಮೂಲಕ ಖರೀದಿಸಿದ ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಗರಿಷ್ಠ ರೂ.8,000ಗಳ ಕ್ಯಾಶ್ ಬ್ಯಾಕ್ ನೀಡಲಾಗುವುದು.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಬ್ಯಾಟ್‌‍ರೆ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥಾಪಕರಾದ ನಿಶ್ಚಲ್ ಚೌಧರಿರವರು ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯು ಹೆಚ್ಚುತ್ತಿದೆ. ಈ ದೀಪಾವಳಿಯ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಸಾಗಲು ಇದಕ್ಕಿಂತ ಉತ್ತಮವಾದ ಸಮಯವಿಲ್ಲ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಪ್ರತಿಯೊಬ್ಬ ನಾಗರಿಕನು ಹೊಗೆ ಮುಕ್ತ ದೀಪಾವಳಿಯನ್ನು ಮಾಡಬೇಕೆಂದು ನಾವು ಬಯಸುತ್ತೇವೆ, ಹೀಗಾಗಿ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಜೀವನ ವಿಧಾನವಾಗಿ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯ ಭವಿಷ್ಯವನ್ನು ರೂಪಿಸಲಾಗುತ್ತಿದೆ. ಪೆಟ್ರೋಲ್-ಡೀಸೆಲ್ ವಾಹನಗಳು ಎಲೆಕ್ಟ್ರಿಕ್ ವಾಹನಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಕೇಂದ್ರ ಸರ್ಕಾರವು ಸಹ ಪೆಟ್ರೋಲ್-ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರನ್ವಯ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಾಗ ರಿಯಾಯಿತಿಗಳನ್ನು ನೀಡುತ್ತಿದೆ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಬ್ಯಾಟ್‌‍ರೆ ಕಂಪನಿಯು ದ್ವಿಚಕ್ರ ವಾಹನಗಳನ್ನು ಆನ್‍‍ಲೈನ್‍‍ನಲ್ಲಿ ಆರ್ಡರ್ ಮಾಡಿ ಖರೀದಿಸಲು ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಪಾವತಿ ಆಯ್ಕೆಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಬ್ಯಾಟ್‌‍ರೆ ಸ್ಕೂಟರ್ಸ್ ಅನ್ನು 2017ರಲ್ಲಿ ಸ್ಥಾಪಿಸಲಾಯಿತು. ಬ್ಯಾಟ್‌‍ರೆ, ಇ-ಬೈಸಿಕಲ್ ಹಾಗೂ ಇ-ಸ್ಕೂಟರ್‍‍ಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸಿದೆ.

ಬ್ಯಾಟ್‌‍ರೆ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ವಿಚಿತ್ರವೆಂದರೆ, ಪೆಟ್ರೋಲ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಹುತೇಕ ಕಂಪನಿಗಳು ಇನ್ನೂ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಿಲ್ಲ.

Most Read Articles

Kannada
English summary
BattRE electric scooters launch Zero down payment, Diwali discounts. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X