ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬೆನೆಲ್ಲಿ ಇಂಡಿಯಾ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಇಂಪಿರಿಯಲ್ 400 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈಗ ಈ ಬೈಕಿಗಾಗಿ 352 ಬುಕ್ಕಿಂಗ್‍‍ಗಳನ್ನು ಪಡೆದಿದೆ. ಈ ಬೈಕಿನ ಬುಕ್ಕಿಂಗ್‍‍ಗಳನ್ನು ಕಳೆದ ತಿಂಗಳು ಶುರು ಮಾಡಲಾಗಿತ್ತು.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬುಕ್ಕಿಂಗ್ ಶುರುವಾದ 23 ದಿನಗಳಲ್ಲಿ 352 ಬುಕ್ಕಿಂಗ್‍‍ಗಳನ್ನು ಪಡೆದಿರುವ ಇಂಪಿರಿಯಲ್ 400 ಬೈಕ್ ಹೊಸ ದಾಖಲೆಯನ್ನು ಬರೆದಿದೆ. ಬೆನೆಲ್ಲಿ ಕಂಪನಿಯು ಅಕ್ಟೋಬರ್ 22 ರಂದು ಇಂಪಿರಿಯಲ್ 400 ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿತು. ಈ ಬೈಕಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.69 ಲಕ್ಷಗಳಾಗಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಹೊಸ ಬೈಕ್ ಅನ್ನು ದೇಶಾದ್ಯಂತವಿರುವ ಕಂಪನಿಯ 24 ಡೀಲರ್‌ಶಿಪ್‌ಗಳಲ್ಲಿ ಅಥವಾ ಬೆನೆಲ್ಲಿ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ರೂ.4,000 ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಇಂಪಿರಿಯಲ್ 400 ಬೈಕ್ ಅನ್ನು ಕೆಂಪು, ಸಿಲ್ವರ್ ಹಾಗೂ ಕಪ್ಪು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬೆನೆಲ್ಲಿ ಇಂಪಿರಿಯಲ್ 400 ಕ್ಲಾಸಿಕ್-ರೆಟ್ರೊ ಲುಕ್ ಹೊಂದಿದ್ದು, ಬೈಕಿನ ಸುತ್ತಲೂ ಹೆಡ್‌ಲ್ಯಾಂಪ್‌, ಟೇಲ್ ಲ್ಯಾಂಪ್‌, ಟರ್ನ್-ಇಂಡಿಕೇಟರ್‌ಗಳನ್ನು ಹೊಂದಿದೆ. ರೆಟ್ರೊ ಲುಕ್ ಅನ್ನು ಫ್ಯೂಯಲ್ ಟ್ಯಾಂಕ್ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ವಿನ್ಯಾಸಗಳಿಗೂ ನೀಡಲಾಗಿದೆ. ಡಬಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಣ್ಣ ಟಿಎಫ್‍‍ಟಿ ಡಿಸ್‍‍ಪ್ಲೇ ಹೊಂದಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಈ ಡಿಸ್‍‍ಪ್ಲೇ ಒಡೋ ಮೀಟರ್ ಹಾಗೂ ಟ್ರಿಪ್ ಮೀಟರ್‍‍ಗಳ ಬಗೆಗಿನ ಮಾಹಿತಿಯನ್ನು ನೀಡುತ್ತದೆ. ಇಂಪಿರಿಯಲ್ 400 ಬೈಕಿನಲ್ಲಿ 374 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 5,500 ಆರ್‍‍ಪಿ‍ಎಂ‍‍ನಲ್ಲಿ 20.7 ಬಿಹೆಚ್‍‍ಪಿ ಪವರ್ ಹಾಗೂ 4,500 ಆರ್‍‍ಪಿ‍ಎಂನಲ್ಲಿ 29 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಈ ಎಂಜಿನ್‍‍ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಇಂಪಿರಿಯಲ್ 400 ಬೈಕಿನ ಸಸ್ಪೆಂಷನ್‍‍ಗಾಗಿ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಪ್ರಿ ಲೋಡ್‌ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸರ್ವರ್‌ಗಳನ್ನು ಅಳವಡಿಸಲಾಗಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯೇಲ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬೆನೆಲ್ಲಿ ಇಂಪಿರಿಯಲ್ 400 ಬೈಕ್ ಅನ್ನು ಮೂರು ವರ್ಷಗಳ / ಅನಿಯಮಿತ-ಕಿಲೋಮೀಟರ್ ವಾರಂಟಿಯೊಂದಿಗೆ ಸ್ಟ್ಯಾಂಡರ್ಡ್ ಆಗಿ ಮಾರಾಟ ಮಾಡಲಾಗುತ್ತದೆ. ಮೊದಲ ಎರಡು ವರ್ಷಗಳವರೆಗೆ ಕಾಂಪ್ಲಿಮೆಂಟರಿ ಸರ್ವಿಸ್‍ ನೀಡಲಾಗುತ್ತದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಆರಂಭಿಕ ಕಾಂಪ್ಲಿಮೆಂಟರಿ ಸರ್ವಿಸ್‍ ನಂತರ ತೊಂದರೆಯಿಲ್ಲದ ಮಾಲೀಕತ್ವದ ಅನುಭವಕ್ಕಾಗಿ ಕಂಪನಿಯು ಇಂಪೀರಿಯಲ್ ಗ್ರಾಹಕರಿಗೆ ವಾರ್ಷಿಕ ನಿರ್ವಹಣೆ ಒಪ್ಪಂದ (ಎಎಂಸಿ) ನೀಡಲಿದೆ. ಬೆನೆಲ್ಲಿ ಇಂಪಿರಿಯಲ್ 400 ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350, ಜಾವಾ 350 ಹಾಗೂ ಜಾವಾ 42 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಬುಕ್ಕಿಂಗ್‍‍ನಲ್ಲಿ ಹೊಸ ದಾಖಲೆ ಬರೆದ ಬೆನೆಲ್ಲಿ ಇಂಪಿರಿಯಲ್ 400

ಬೆನೆಲ್ಲಿ ಕಂಪನಿಯು ಇನ್ನೂ ಅನೇಕ ಹೊಸ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಸದ್ಯ ಭಾರತದಲ್ಲಿ 24 ಬೆನೆಲ್ಲಿ ಡೀಲರ್‍‍ಗಳಿದ್ದು, ಬೆನೆಲ್ಲಿ ಕಂಪನಿಯು ಈ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸುವ ಯೋಜನೆಯಲ್ಲಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೆನೆಲ್ಲಿ ಕಂಪನಿಯು ಶೀಘ್ರವಾಗಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾರತದಲ್ಲಿ ಭವಿಷ್ಯದ ವಿಸ್ತರಣೆ ಮತ್ತು ಹೊಸ ಮಾದರಿಗಳ ಬಿಡುಗಡೆಯೊಂದಿಗೆ ಕಂಪನಿಯು ಭಾರತದಲ್ಲಿ ಯಶಸ್ವಿಯಾಗುವತ್ತ ಹೆಜ್ಜೆ ಹಾಕಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಇಂಪಿರಿಯಲ್ ಭಾರತದಲ್ಲಿ 352 ಖರೀದಿದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Benelli Imperiale 400 Bookings Crosses 352 Units In 23 Days: Rivals The Royal Enfield Classic 350 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X