ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ನಿನ್ನೆಯಷ್ಟೇ ಬೆನೆಲ್ಲಿ ಇಂಡಿಯಾ ತನ್ನ ಬಹುನೀರಿಕ್ಷಿತ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಆಸಕ್ತ ಗ್ರಾಹಕರಿಂದ ಬುಕ್ಕಿಂಗ್ ಕೂಡಾ ಪಡೆದುಕೊಳ್ಳುತ್ತಿದೆ. ಹೀಗಾಗಿ ಹೊಸ ಬೈಕ್ ದೀಪಾವಳಿ ಉತ್ಸವದಂದೇ ಗ್ರಾಹಕರ ಕೈ ಸೇರುವ ನೀರಿಕ್ಷೆಯಿದೆ.

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್‍‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿರುವ ಬೆನೆಲ್ಲಿ ಸಂಸ್ಥೆಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಸಾಕಷ್ಟು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.69 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ ಮಾದರಿಯ ಬೈಕ್‌ಗಳಲ್ಲೇ ವಿಶೇಷ ಡಿಸೈನ್ ಹೊಂದಿರುವ ಇಂಪೀರಿಯಲ್ 400 ಬೈಕ್‌ಗಳು 1950ರ ಅವಧಿಯಲ್ಲಿ ಜನಪ್ರಿಯತೆ ಹೊಂದಿದ್ದ ಬೆನೆಲ್ಲಿ ಮೊಟೊ ಬಿ ಬೈಕ್ ಪ್ರೇರಣೆಯೊಂದಿಗೆ ನಿರ್ಮಾಣ ಮಾಡಲಾಗಿದ್ದು, ಆಕರ್ಷಕ ಬೆಲೆಗಳೊಂದಿಗೆ ಗ್ರಾಹಕರ ಸೆಳೆಯುವ ವಿಶ್ವಾಸದಲ್ಲಿದೆ.

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಕ್ರೋಮ್ ಸೌಲಭ್ಯ ಹೊಂದಿರುವ ರೌಂಡ್ ಹೆಡ್‌ಲ್ಯಾಂಪ್, ಟೈಲ್ ಲೈಟ್ಸ್, ಟರ್ನ್ ಇಂಡಿಕೇಟರ್ ಮತ್ತು ಲಿವರ್ಸ್ ಜೊತೆಗೆ ಸ್ಪೋಕ್ ವೀಲ್ಹ್, ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಸೀಟ್, ರೆಟ್ರೋ ಸ್ಟೈಲ್ ಫ್ಯೂಲ್ ಟ್ಯಾಂಕ್ ಫೀಚರ್ಸ್ ಪಡೆದುಕೊಂಡಿದೆ.

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಎಂಜಿನ್ ಸಾಮರ್ಥ್ಯ

ಇಂಪೀರಿಯಲ್ 400 ಬೈಕ್ ಮಾದರಿಯು 374 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಪಡೆದುಕೊಂಡಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20.7-ಬಿಎಚ್‌ಪಿ ಮತ್ತು 29-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ. ಹೊಸ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೊಫಿಕ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಶಾಕ್ ಅಬ್ಸಾರ್ವರ್ ನೀಡಲಾಗಿದೆ.

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಹಾಗೆಯೇ ಹೊಸ ಬೈಕಿನಲ್ಲಿ ರೈಡರ್ ಸುರಕ್ಷೆತೆಗಾಗಿ ಮುಂಭಾಗದ ಚಕ್ರದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಜೋಡಿಸಲಾಗಿದೆ.

MOST READ: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍ ಆಯ್ಕೆ ಸಂಬಂಧ ಹೊಸ ಆದೇಶ

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಖರೀದಿಗೆ ಲಭ್ಯವಿರುವ ಬಣ್ಣಗಳು

ಇಂಪೀರಿಯಲ್ 400 ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಣ್ಣದ ಆಯ್ಕೆ ನೀಡಲಿದೆ ಎನ್ನಲಾಗಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ದೀಪಾವಳಿ ಉತ್ಸವಕ್ಕೆ ಗ್ರಾಹಕರ ಕೈ ಸೇರಲಿದೆ ಬೆನೆಲ್ಲಿ ಇಂಪೀರಿಯಲ್ 400

ಸರ್ವೀಸ್ ಮತ್ತು ವಾರಂಟಿ

ಬೈಕ್ ಮಾರಾಟದ ನಂತರದ ಸೇವೆಗಳ ಕುರಿತಾಗಿ ಗ್ರಾಹಕರ ಅಸಮಾಧಾನವನ್ನು ಅರಿತಿರುವ ಬೆನೆಲ್ಲಿ ಸಂಸ್ಥೆಯು ಈ ಬಾರಿ ಇಂಪೀರಿಯರ್ 400 ಬಿಡುಗಡೆಯೊಂದಿಗೆ ಹಲವಾರು ಜನಪ್ರಿಯ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದು, ಬೆಸ್ಟ್ ಇನ್ ಕ್ಲಾಸ್ ಸರ್ವೀಸ್ ಮಾದರಿಯಾದ 3 ವರ್ಷ ಅಥವಾ ಅನ್‌ಲಿಮಿಟೆಡ್ ಕಿ.ಮೀ ವಾರಂಟಿ ಆಫರ್ ನೀಡಿದೆ.

Most Read Articles

Kannada
English summary
Benelli has revealed the deliveries of the Imperiale 400 are scheduled to start from Diwali onwards, across all the exclusive Benelli showrooms in India.
Story first published: Wednesday, October 23, 2019, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X