Just In
- 12 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 13 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 14 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 14 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗಾಗಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ ಬೆನೆಲ್ಲಿ ಇಂಪೀರಿಯಲ್ 400
ಬೆನೆಲ್ಲಿ ಸಂಸ್ಥೆಯು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ರೆಟ್ರೋ ಸ್ಟೈಲ್ ವಿನ್ಯಾಸದ ಇಂಪೀರಿಯಲ್ 400 ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸಂಬಂಧ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವುದು ದೃಡವಾಗಿದೆ.
ರೆಟ್ರೋ ಸ್ಟೈಲ್ ಮಾದರಿಯ ಹೊಸ ಇಂಪೀರಿಯಲ್ 400 ಬೈಕ್ ಮಾದರಿಯನ್ನು ಮೊದಲ ಬಾರಿಗೆ 2017ರ ಮಿಲಾನ್ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಇದೀಗ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಹೊಸ ಬೈಕ್ ಮಾರಾಟಕ್ಕಾಗಿ ಮಹಾವೀರ್ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುವ ಯೋಜನೆಯಲ್ಲಿದೆ.
ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ರೆಟ್ರೊ ಹಾಗೂ ಹೊಸ ಶೈಲಿಯ ಟ್ವಿನ್ ಪವರ್ ಕ್ಲಸ್ಟರ್ ಅನ್ನು ಪಡೆದಿರಲಿದ್ದು, ರೋಡ್ ಟೆಸ್ಟಿಂಗ್ ವೇಳೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಮತ್ತು ಡಬಲ್ ಕ್ರೆಡಲ್ ಸ್ಟೀಲ್ ಫ್ರೇಮ್ ಅನ್ನು ಪಡೆದುಕೊಂಡಿರುವುದು ಖಚಿತವಾಗಿದೆ.
ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ನಲ್ಲಿ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಿಂದ ರೈಡರ್ಗಳಿಗೆ ಗರಿಷ್ಠ ಸುರಕ್ಷತೆ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆ ಹೊಂದಿರಲಿದೆ.
ಮತ್ತೊಂದು ಆಕರ್ಷಣೆ ಅಂದ್ರೆ, ಇಂಪೀರಿಯಲ್ 400 ಬೈಕ್ಗಳು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಆವೃತ್ತಿಯ ಜೊತೆಗೆ ಸ್ಪೋರ್ಟ್ ಆವೃತ್ತಿಯು ಕೂಡಾ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದ್ದು, ದಿನಬಳಕೆಗಾಗಿ ಸಾಮಾನ್ಯ ಆವೃತ್ತಿಯನ್ನು ಮತ್ತು ಅಡ್ವೆಂಚರ್ ಉದ್ದೇಶಗಳಿಗಾಗಿ ಸ್ಪೋರ್ಟ್ ಆವೃತ್ತಿಯನ್ನು ಖರೀದಿ ಮಾಡಬಹುದಾಗಿದೆ.
ಎಂಜಿನ್ ಸಾಮರ್ಥ್ಯ
ಸಾಮಾನ್ಯ ಮಾದರಿಯ ಇಂಪೀರಿಯಲ್ 400 ಮಾದರಿಯು 346ಸಿಸಿ ಎಂಜಿನ್ನೊಂದಿಗೆ 19.8-ಬಿಎಚ್ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಸ್ಪೋರ್ಟ್ ಇಂಪೀರಿಯಲ್ 400 ಮಾದರಿಯು 373-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ನೊಂದಿಗೆ 20.7-ಬಿಎಚ್ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಇನ್ನು ರಾಯಲ್ ಎನ್ಫೀಲ್ಡ್ 350 ಬೈಕ್ಗಳಿಂತಲೂ ತೂಕದಲ್ಲಿ ತುಸು ಭಾರ ಎನ್ನಿಸುವ ಇಂಪೀರಿಯಲ್ 400 ಬೈಕ್ಗಳು 200 ಕೆ.ಜಿ ಭಾರ ಹೊಂದಿದ್ದು, 12-ಲೀಟರ್ ಸಾಮರ್ಥ್ಯದ ಫ್ಯುಲ್ ಟ್ಯಾಂಕ್ ಜೊತೆ ಪ್ರತಿ ಲೀಟರ್ಗೆ 35 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ.
MOST READ: ಅಂತೂ ಇಂತೂ 6 ತಿಂಗಳ ನಂತರ ಗ್ರಾಹಕರ ಕೈ ಸೇರಿದ ಜಾವಾ ಹೊಸ ಬೈಕ್ಗಳು
ಬೈಕ್ ಬಿಡುಗಡೆಯ ಅವಧಿ ಮತ್ತು ಬೆಲೆಗಳು(ಅಂದಾಜು)
ಬೆನೆಲ್ಲಿ ಇಂಪೀರಿಯಲ್ 400 ಬೈಕ್ಗಳು ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಾಣವಾಗುವುದರಿಂದ ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗಿದ್ದು, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ಗಳ ಬೆಲೆ ಮಾದರಿಯಲ್ಲೇ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.1.20 ಲಕ್ಷದಿಂದ ರೂ. 1.65 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.
MOST READ: ಅಡ್ವೆಂಚರ್ ಪ್ರಿಯರ ಹೀರೋ ಎಕ್ಸ್ಪಲ್ಸ್ 200 ಮತ್ತು ಎಕ್ಸ್ಪಲ್ಸ್ 200ಟಿ ಬಿಡುಗಡೆ
ಹೀಗಾಗಿ ಹೊಸ ಇಂಪೀರಿಯಲ್ ಬೈಕ್ಗಳು ಸಂಪೂರ್ಣವಾಗಿ ರಾಯಲ್ ಎನ್ಫೀಲ್ಡ್ ಮತ್ತು ಜಾವಾ ಬೈಕ್ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಜಾರಿ ನಂತರವಷ್ಟೇ ಇಂಪೀರಿಯಲ್ 400 ಬೈಕ್ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.
Source:AutoCar India