ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಬೆನೆಲ್ಲಿ ಇಂಡಿಯಾ ಸಂಸ್ಥೆಯು ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ರೆಟ್ರೋ ಸ್ಟೈಲ್ ವಿನ್ಯಾಸದ ಇಂಪೀರಿಯಲ್ 400 ಬೈಕ್ ಆವೃತ್ತಿಯನ್ನು ರಸ್ತೆಗಿಳಿಸಲು ಸಿದ್ದತೆ ನಡೆಸಿದೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ರೆಟ್ರೋ ಸ್ಟೈಲ್ ಮಾದರಿಯ ಹೊಸ ಇಂಪೀರಿಯಲ್ 400 ಬೈಕ್‍ ಮಾದರಿಯನ್ನು ಮೊದಲ ಬಾರಿಗೆ 2017ರ ಮಿಲಾನ್‍ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಇದೀಗ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಹೊಸ ಬೈಕ್ ಮಾರಾಟಕ್ಕಾಗಿ ಮಹಾವೀರ್ ಗ್ರೂಪ್‍ ಜೊತೆ ಒಪ್ಪಂದ ಮಾಡಿಕೊಂಡಿದೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ರೆಟ್ರೊ ಹಾಗೂ ಕಾಂಟೆಪರಿ ಶೈಲಿಯ ಟ್ವಿನ್ ಪವರ್ ಕ್ಲಸ್ಟರ್ ಅನ್ನು ಪಡೆದಿರಲಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಮತ್ತು ಡಬಲ್ ಕ್ರೆಡಲ್ ಸ್ಟೀಲ್ ಫ್ರೇಮ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍ನಲ್ಲಿ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಿಂದ ರೈಡರ್‌ಗಳಿಗೆ ಗರಿಷ್ಠ ಸುರಕ್ಷತೆ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆ ಹೊಂದಿರಲಿದೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಮತ್ತೊಂದು ಆಕರ್ಷಣೆ ಅಂದ್ರೆ, ಇಂಪೀರಿಯಲ್ 400 ಬೈಕ್‌ಗಳು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಆವೃತ್ತಿಯ ಜೊತೆ ಸ್ಪೋರ್ಟ್ ಆವೃತ್ತಿಯು ಕೂಡಾ ಖರೀದಿಗೆ ಲಭ್ಯವಾಗಲಿದ್ದು, ದಿನಬಳಕೆ ಮತ್ತು ಅಡ್ವೆಂಚರ್ ಉದ್ದೇಶಗಳಿಗಾಗಿ ಸಾಮಾನ್ಯ ಮತ್ತು ಸ್ಪೋರ್ಟ್ ಆವೃತ್ತಿಯನ್ನು ಖರೀದಿ ಮಾಡಬಹುದಾಗಿದೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಎಂಜಿನ್ ಸಾಮರ್ಥ್ಯ

ಸಾಮಾನ್ಯ ಮಾದರಿಯ ಇಂಪೀರಿಯಲ್ 400 ಮಾದರಿಯು 346ಸಿಸಿ ಎಂಜಿನ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಸ್ಪೋರ್ಟ್ ಇಂಪೀರಿಯಲ್ 400 ಮಾದರಿಯು 373-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.7-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಇನ್ನು ರಾಯಲ್ ಎನ್‌ಫೀಲ್ಡ್ 350 ಬೈಕ್‌ಗಳಿಂತಲೂ ತೂಕದಲ್ಲಿ ತುಸು ಭಾರ ಎನ್ನಿಸುವ ಇಂಪೀರಿಯಲ್ 400 ಬೈಕ್‌ಗಳು 200 ಕೆ.ಜಿ ಭಾರ ಹೊಂದಿದ್ದು, 12-ಲೀಟರ್‍ ಸಾಮರ್ಥ್ಯದ ಫ್ಯುಲ್ ಟ್ಯಾಂಕ್ ಜೊತೆ ಪ್ರತಿ ಲೀಟರ್‌ಗೆ 35 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ.

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಬೈಕ್ ಬಿಡುಗಡೆಯ ಅವಧಿ ಮತ್ತು ಬೆಲೆಗಳು(ಅಂದಾಜು)

ಬೆನೆಲ್ಲಿ ಇಂಪೀರಿಯಲ್ 400 ಬೈಕ್‌ಗಳು ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಾಣವಾಗುವುದರಿಂದ ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳ ಬೆಲೆ ಮಾದರಿಯಲ್ಲೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.20 ಲಕ್ಷದಿಂದ ರೂ. 1.65 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

MOST READ: ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಬಿಡುಗಡೆಗೆ ಸಿದ್ದವಾದ ಆರ್‌ಇ ಕ್ಲಾಸಿಕ್ 350 ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400

ಹೀಗಾಗಿ ಹೊಸ ಇಂಪೀರಿಯಲ್ ಬೈಕ್‌ಗಳು ಸಂಪೂರ್ಣವಾಗಿ ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಜಾರಿ ನಂತರವಷ್ಟೇ ಇಂಪೀರಿಯಲ್ 400 ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Benelli Launching Imperial 400 In 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X