Just In
- 21 min ago ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- 1 hr ago ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- 1 hr ago ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಬರಲಿವೆ ಟಾಟಾ, ಸಿಟ್ರಸ್ ಕಾರುಗಳು.. ಇವೇ ಜನಸಾಮಾನ್ಯರ ಲ್ಯಾಂಬೋರ್ಗಿನಿಗಳು!
- 3 hrs ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬೆನೆಲ್ಲಿ ಲಿಯಾನ್ಚಿನೊ 250 ಬೈಕ್
ಇಟಲಿಯ ಬೈಕ್ ತಯಾರಕ ಕಂಪನಿಯಾದ ಬೆನೆಲ್ಲಿ ಇತ್ತೀಚಿಗೆ ಹೊಸ ಲಿಯಾನ್ಚಿನೊ 250 ಸ್ಕ್ರಾಂಬ್ಲರ್ ಅನ್ನು ಮಲೇಶಿಯಾದಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಬೈಕ್ ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಯಾದ ಲಿಯಾನ್ಚಿನೊ 500 ಬೈಕಿನ ಸಣ್ಣ ಆವೃತ್ತಿಯಾಗಿದೆ.
ಲಿಯಾನ್ಚಿನೊ 250 ಬೈಕಿನ ಬೆಲೆಯು ಮಲೇಶಿಯಾದ ಕರೆನ್ಸಿಯಲ್ಲಿ 14,688ಗಳಾದರೆ, ಭಾರತದ ರೂಪಾಯಿ ಮೌಲ್ಯದಲ್ಲಿ ತೆರಿಗೆಯನ್ನು ಹೊರತುಪಡಿಸಿ ರೂ.2.51 ಲಕ್ಷಗಳಾಗಿದೆ. ಬೆನೆಲ್ಲಿಯ ಲಿಯಾನ್ಚಿನೊ 250 ಬೈಕ್ ಅನ್ನು ಮೊದಲ ಬಾರಿಗೆ 2017ರ ಇಐಸಿಎಂಎನಲ್ಲಿ ಪ್ರದರ್ಶಿಸಲಾಗಿತ್ತು.
ಈ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್ಲ್ಯಾಂಪ್, ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 17 ಲೀಟರ್ ಸಾಮರ್ಥ್ಯದ ಪ್ಯೂಯಲ್ ಟ್ಯಾಂಕ್ ಹಾಗೂ ಸಿಂಗಲ್ ಸೀಟ್ಗಳನ್ನು ಅಳವಡಿಸಲಾಗಿದೆ.
ಬೆನೆಲ್ಲಿ ಲಿಯಾನ್ಚಿನೊ ಬೈಕಿನ ಮುಂಭಾಗದಲ್ಲಿ 41 ಎಂಎಂನ ಅಪ್ ಸೈಡ್ ಡೌನ್ ಟೆಲಿಸ್ಕೋಪಿಕ್ ಫೋರ್ಕ್ಗಳಿದ್ದರೆ, ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊ ಶಾಕ್ಗಳಿವೆ. ಈ ಬೈಕಿನಲ್ಲಿರುವ 249 ಸಿಸಿ, 4 ವಾಲ್ವ್, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ 25.5 ಬಿಹೆಚ್ಪಿ ಪವರ್ ಹಾಗೂ 21.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್ನಲ್ಲಿ 6 ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ಲಿಯಾನ್ಚಿನೊ ಬೈಕಿನ ಎರಡೂ ಕಡೆ 17 ಇಂಚಿನ ಅಲಾಯ್ ವ್ಹೀಲ್ಗಳನ್ನು ಹಾಕಲಾಗಿದೆ. ಮುಂಭಾಗದಲ್ಲಿ 110/70 ಸೆಕ್ಷನ್ನ ಪೈರೆಲಿ ಆಂಜೆಲ್ ಎಸ್ಟಿ ಟಯರ್ಯಿದ್ದರೆ, ಹಿಂಭಾಗದಲ್ಲಿ 150/60 ಸೆಕ್ಷನ್ನ ಮೆಟ್ಜೆಲೆರ್ ಸ್ಪೋರ್ಟ್ ಟೆಕ್ ಎಂ5 ಟ್ಯೂಬ್ಲೆಸ್ ಟಯರ್ ಅಳವಡಿಸಲಾಗಿದೆ.
ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 280 ಎಂಎಂನ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ 240 ಎಂಎಂನ ಡಿಸ್ಕ್ ಬ್ರೇಕ್ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು
ಲಿಯಾನ್ಚಿನೊ 250 ಬೈಕ್ ಅನ್ನು ಪರ್ಲ್ ಬ್ರೌನ್, ಇಟಾಲಿಯನ್ ರೆಡ್ ಹಾಗೂ ಟಿಟಾನಿಯಂ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನ ಬಿಡುಗಡೆಯ ದಿನವನ್ನು ನಿಗದಿಪಡಿಸದಿದ್ದರೂ, ಅತಿ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಈ ಬೈಕ್ ಅನ್ನು 2020ರ ಆಟೊ ಎಕ್ಸ್ ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ. ಈ ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.2 ಲಕ್ಷದಿಂದ ರೂ.2.30 ಲಕ್ಷಗಳಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಲಿಯಾನ್ಚಿನೊ 250 ಬೈಕ್ ಕೆಟಿಎಂ ಡ್ಯೂಕ್ 250, ರಾಯಲ್ ಎನ್ಫೀಲ್ಡ್ 350 ಸರಣಿಯ ಬೈಕುಗಳಿಗೆ ಹಾಗೂ ಜಾವಾ ಸರಣಿಯ ಬೈಕುಗಳಿಗೆ ಪೈಪೋಟಿ ನೀಡಲಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಬೆನೆಲ್ಲಿಯ ಲಿಯಾನ್ಚಿನೊ 250 ಬೈಕ್ ಕಡಿಮೆ ತೂಕವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ. ಕ್ವಾರ್ಟರ್ ಲೀಟರ್ ಬೈಕಿನಲ್ಲಿ ಹೆಚ್ಚಿನ ಪ್ರಮಾಣದ ಫೀಚರ್ಗಳನ್ನು ನೀಡಲಾಗಿದೆ. ಈ ಮೂಲಕ ಬೆನೆಲ್ಲಿ ಕಂಪನಿಯು ಹೆಚ್ಚು ಜನಪ್ರಿಯವಾಗಿರುವ ಮಾಸ್ ಮಾರುಕಟ್ಟೆಗೆ ಪ್ರವೇಶ ನೀಡುತ್ತಿದೆ.
ಮೊದಲು 500 ಸಿಸಿಯ ಬೈಕುಗಳನ್ನು ಬಿಡುಗಡೆಗೊಳಿಸಿದ್ದ ಕಂಪನಿಯು ಈಗ 250 ಸಿಸಿಯ ಬೈಕುಗಳನ್ನು ಬಿಡುಗಡೆಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ 150 ಸಿಸಿ ಬೈಕುಗಳನ್ನು ಬಿಡುಗಡೆಗೊಳಿಸಿದರೂ ಅಚ್ಚರಿಯಿಲ್ಲ.