ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಬೆನೆಲ್ಲಿ ಕಂಪನಿಯು ತನ್ನ ಬಹು ನಿರೀಕ್ಷಿತ ಲಿಯಾನ್‍‍ಚಿನೊ 250 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆಗೊಳಿಸಿದೆ. ಹೊಸ ಲಿಯಾನ್‍‍ಚಿನೊ 250 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.2.5 ಲಕ್ಷಗಳಾಗಿದೆ.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಬೆನೆಲ್ಲಿ ಕಂಪನಿಯು 2018ರಲ್ಲಿ ಟಿ‍ಎನ್‍‍ಟಿ 25 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತ್ತು. ಆ ಬೈಕಿನ ಬದಲಿಗೆ ಕಂಪನಿಯು ಕ್ವಾರ್ಟರ್ ಲೀಟರ್ ಸೆಗ್‍‍ಮೆಂಟಿನಲ್ಲಿ ಬೇಬಿ ಲಿಯಾನ್‍‍ಚಿನೊ ಎಂದು ಹೆಸರಾದ ಲಿಯಾನ್‍‍ಚಿನೊ 250 ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಲಿಯಾನ್‍‍ಚಿನೊ 250 ಬೆನೆಲ್ಲಿ ಕಂಪನಿಯ ಎಂಟ್ರಿ ಲೆವೆಲ್‍‍ನ ಸ್ಕ್ರಾಂಬ್ಲರ್ ಬೈಕ್ ಆಗಿದೆ. ಈ ಬೈಕ್ ಇತ್ತೀಚಿಗೆ ಬಿಡುಗಡೆಗೊಳಿಸಲಾದ ಲಿಯಾನ್‍‍ಚಿನೊ 500 ಬೈಕಿನ ಸ್ಟೈಲಿಂಗ್ ಅನ್ನು ಹೊಂದಿದೆ. ಬೆನೆಲ್ಲಿಯ ಲಿಯಾನ್‍‍ಚಿನೊ 250 ಬೈಕ್ ಅನ್ನು ಮೊದಲ ಬಾರಿಗೆ 2017ರ ಇ‍ಐ‍‍ಸಿ‍ಎಂ‍ಎನಲ್ಲಿ ಪ್ರದರ್ಶಿಸಲಾಗಿತ್ತು.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಈ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 17 ಲೀಟರ್ ಸಾಮರ್ಥ್ಯದ ಪ್ಯೂಯಲ್ ಟ್ಯಾಂಕ್ ಹಾಗೂ ಸಿಂಗಲ್ ಸೀಟು‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಬೆನೆಲ್ಲಿ ಲಿಯಾನ್‍‍ಚಿನೊ ಬೈಕಿನ ಮುಂಭಾಗದಲ್ಲಿ 41 ಎಂಎಂನ ಅಪ್ ಸೈಡ್ ಡೌನ್ ಟೆಲಿಸ್ಕೋಪಿಕ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊ ಶಾಕ್‍‍ಗಳಿವೆ. ಈ ಬೈಕಿನಲ್ಲಿರುವ 249 ಸಿಸಿ, 4 ವಾಲ್ವ್, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ 25.5 ಬಿ‍ಹೆಚ್‍‍ಪಿ ಪವರ್ ಹಾಗೂ 21.2 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಲಿಯಾನ್‍‍‍ಚಿನೊ ಬೈಕಿನ ಎರಡೂ ಕಡೆ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಹಾಕಲಾಗಿದೆ. ಮುಂಭಾಗದಲ್ಲಿ 110/70 ಸೆಕ್ಷನ್‍‍ನ ಪೈರೆಲಿ ಆಂಜೆಲ್ ಎಸ್‍‍ಟಿ ಟಯರ್‍‍ಯಿದ್ದರೆ, ಹಿಂಭಾಗದಲ್ಲಿ 150/60 ಸೆಕ್ಷನ್‍‍ನ ಮೆಟ್‍‍ಜೆಲೆರ್ ಸ್ಪೋರ್ಟ್ ಟೆಕ್ ಎಂ5 ಟ್ಯೂಬ್‍‍ಲೆಸ್ ಟಯರ್ ಅಳವಡಿಸಲಾಗಿದೆ.

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 280 ಎಂಎಂನ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ 240 ಎಂಎಂ‍‍ನ ಡಿಸ್ಕ್ ಬ್ರೇಕ್‍‍ಗಳಿವೆ. ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಲಿಯಾನ್‍‍ಚಿನೊ 250 ಬೈಕ್ ಅನ್ನು ಪರ್ಲ್ ಬ್ರೌನ್, ಇಟಾಲಿಯನ್ ರೆಡ್ ಹಾಗೂ ಟಿಟಾನಿಯಂ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆ‍‍ಟಿ‍ಎಂ ಡ್ಯೂಕ್ 250, ರಾಯಲ್ ಎನ್‍‍ಫೀಲ್ಡ್ 350 ಸರಣಿಯ ಬೈಕುಗಳಿಗೆ ಹಾಗೂ ಜಾವಾ ಸರಣಿಯ ಬೈಕುಗಳಿಗೆ ಪೈಪೋಟಿ ನೀಡಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಬೆನೆಲ್ಲಿಯ ಲಿಯಾನ್‍‍ಚಿನೊ 250 ಬೈಕ್ ಕಡಿಮೆ ತೂಕವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ. ಕ್ವಾರ್ಟರ್ ಲೀಟರ್ ಬೈಕಿನಲ್ಲಿ ಹೆಚ್ಚಿನ ಪ್ರಮಾಣದ ಫೀಚರ್‍‍ಗಳನ್ನು ನೀಡಲಾಗಿದೆ. ಈ ಮೂಲಕ ಬೆನೆಲ್ಲಿ ಕಂಪನಿಯು ಹೆಚ್ಚು ಜನಪ್ರಿಯವಾಗಿರುವ ಮಾಸ್ ಮಾರುಕಟ್ಟೆಗೆ ಪ್ರವೇಶ ನೀಡುತ್ತಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಬಿಡುಗಡೆಯಾದ ಬೆನೆಲ್ಲಿ ಲಿಯಾನ್‍‍ಚಿನೊ 250 ಬೈಕ್

ಮೊದಲು 500 ಸಿಸಿಯ ಬೈಕುಗಳನ್ನು ಬಿಡುಗಡೆಗೊಳಿಸಿದ್ದ ಕಂಪನಿಯು ಈಗ 250 ಸಿಸಿಯ ಬೈಕುಗಳನ್ನು ಬಿಡುಗಡೆಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ 150 ಸಿಸಿ ಬೈಕುಗಳನ್ನು ಬಿಡುಗಡೆಗೊಳಿಸಿದರೂ ಅಚ್ಚರಿಯಿಲ್ಲ.

Most Read Articles

Kannada
English summary
Benelli Leoncino 250 launched at Rs 2.5 lakh - Read in Kannada
Story first published: Friday, October 4, 2019, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X