ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಬರಲಿದೆ ಹೊಸ ರೂಲ್ಸ್ - ಏನದು.?

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಕುರಿತು ಅದೆಷ್ಟೇ ಜಾಗೃತಿ ಮೂಡಿಸಿದರೂ ಸಹ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡುವುದೇ ಇಲ್ಲ. ಇದರಿಂದ ಕಡ್ಡಾಯ ಹೆಲ್ಮೆಟ್ ಬಳಕೆ ಕುರಿತು ಹೊಸ ಪ್ರಯೋಗಕ್ಕೆ ಮುಂದಾಗಿರುವ ದೇಶದ್ಲಲಿರುವ ಕೆಲವು ಪೆಟ್ರೋಲ್ ಬಂಕ್ ಮಾಲೀಕರು ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದರು.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಅದೇನೆಂದರೆ ಪೆಟ್ರೋಲ್ ತುಂಬಿಸಿಕೊಳ್ಳಲು ತಮ್ಮ ದ್ವಿಚಕ್ರ ವಾಹನವನ್ನು ತರುವ ಮಾಲೀಕರು, ತಪ್ಪದೇ ಹೆಲ್ಮೆಟ್ ಧರಿಸಲೇಬೇಕಾಗಿದ್ದು, ಹೆಲ್ಮೆಟ್ ಧರಿಸದೇ ಇದ್ದಲ್ಲಿ ಅವರ ವಾಹನಕ್ಕೆ ಪೆಟ್ರೋಲ್ ಹಾಕಾದಿರಲು ಪೆಟೋಲ್ ಬಂಕ್ ಮಾಲೀಕರು ತೀರ್ಮಾನಿಸಿದ್ದರು. ಇದೇ ರೀತಿಯಾದ ಪ್ರಯೋಗವನ್ನು ಇದೀಗ ನಮ್ಮ ಬೆಂಗಳೂರಿನಲ್ಲಿಯೂ ಸಹ ಮಾಡಲು ಮುಂದಾಗಿದ್ದು, ಈ ಕುರಿತಾಗಿ ಟ್ರಾಫಿಕ್ ಇಲಾಖೆಯ ಎಸಿಪಿ ಹರಿಸೇಕರನ್ ಪೆಟ್ರೋಲ್ ಬಂಕ್ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಕಳೆದ ವಾರ ನಡೆದ ಪತ್ರಿಕಾಘೀಷ್ಠಿಯಲ್ಲಿ ಹರಿಸೇಕರನ್‍‍ರವರು 'ನೋ ಹೆಲ್ಮೆಟ್ ನೋ ಫ್ಯುಯೆಲ್' ಎಂಬ ಯೋನಜೆಯನ್ನು ಹೆಚ್ಚಾಗುತ್ತಿರುವ ಅಪಘಾತವನ್ನು ತಡೆಗಟ್ಟಲು ಜಾರಿ ಮಾಡಲಿದ್ದೇವೆ. ಇದನ್ನು ನಗರದಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್‍ಗಳ ಮಾಲೀಕ ಬಳಿ ಇದನ್ನು ಅನುಸರಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಅವರ ಪ್ರಕಾರ, ಟ್ರಾಫಿಕ್ ಪೊಲೀಸರು ಈ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸುವಲ್ಲಿ ಇಂಧನ ಪೂರೈಕೆದಾರರಿಗೆ ಪತ್ರ ಬರೆದು, ಅವರ ಸಹಕಾರವನ್ನು ಕೋರುತ್ತಾರೆ. "ಶೀಘ್ರದಲ್ಲೇ, ನಾವು ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಸಭೆ ನಡೆಸುತ್ತೇವೆ ಮತ್ತು ಪ್ರಸ್ತಾಪವನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂದು ಅವರಿಗೆ ತಿಳಿಸುತ್ತೇವೆ" ಎಂದು ಅವರು ಹೇಳಿದರು.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಆದಾಗ್ಯೂ, ಈ ಪ್ರಕಟಣೆಯು ಮಿಶ್ರ ಪ್ರತಿಕ್ರಿಯೆಗಳನ್ನು ಜನಸಾಮಾನ್ಯರಿಂದ ಪಡೆಯಲಾಗಿದೆ. ಕೆಲವು ನಾಗರಿಕರು ಇದನ್ನು ಸ್ವಾಗತಿಸಿದರೆ, ಹೆಚ್ಚಿನ ಸವಾರರು, ಯುವಕರು ಮತ್ತು ಮಹಿಳೆಯರು ಈ ನಿರ್ಧಾರವನ್ನು ಅಪಹಾಸ್ಯ ಮಾಡಿದ್ದಾರೆ. ವಕೀಲ ಪ್ರಶಾಂತ್ ಜಿ ಈ ಪ್ರಸ್ತಾಪವನ್ನು ಇದೊಂದು ‘ಮೂಲಭೂತ ಹಕ್ಕುಗಳ ಉಲ್ಲಂಘನೆ' ಎಂದು ಹೆಳಿದ್ದಾರೆ. "ಈ ಪ್ರಸ್ತಾಪಕ್ಕೆ ಯಾವುದೇ ಕಾನೂನು ನಿಲುವು ಇಲ್ಲ ಮತ್ತು ಪೂರ್ವಸಿದ್ಧತೆಯಿಲ್ಲ. ಹೆಲ್ಮೆಟ್ ಇಲ್ಲದ ಸವಾರರಿಗೆ ಇಂಧನವನ್ನು ಮಾರಾಟ ಮಾಡದಂತೆ ಪೊಲೀಸರು ಬಂಕ್ ಮಾಲೀಕರನ್ನು ಹೇಗೆ ಒತ್ತಾಯಿಸಬಹುದು, "ಎಂದು ಅವರು ಕೇಳಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಹಿಂದೆ ಇಂತಹ ಯೋಜನೆಯನ್ನು ಇತ್ತೀಚೆಗೆ ನೋಯ್ಡಾದಲ್ಲಿ ಹೆಚ್ಚುತ್ತಿರುವ ಹೆಲ್ಮೆಟ್ ರಹಿತ ಬೈಕ್ ಸವಾರಿಯಿಂದ ಸಾಕಷ್ಟು ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯಾಲದ ಆದೇಶದ ಮೇರೆಗೆ ಪೆಟ್ರೋಲ್ ಬಂಕ್ ಮಾಲೀಕರು ಇಂತದೊಂದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಮೊದಲ ಹಂತವಾಗಿ ನೋಯ್ಡಾ ನಂತರ ಗೌತಮಬುದ್ದ ನಗರಗಳಲ್ಲಿ ಈ ಕ್ರಮವನ್ನು ವಿಸ್ತರಣೆ ಮಾಡುವಂತೆ ಜಿಲ್ಲಾ ನ್ಯಾಯಾಲಯದ ನ್ಯಾ. ಬ್ರಜೆಶ್ ನರೈನ್ ಸಿಂಗ್ ಅವರು ಆದೇಶ ಹೊರಡಿಸಿದ್ದು, ಯಾವುದೇ ಕಾರಣಕ್ಕೂ ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡುವಂತಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಖಡಕ್ ಆದೇಶ ನೀಡಲಾಗಿದೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಇನ್ನು ಅಪಘಾತ ಸಂದರ್ಭದಲ್ಲಿ ಬೈಕ್ ಸವಾರರಿಗೆ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವಂತೆ ದೇಶದ ಪ್ರತಿ ನಗರದಲ್ಲೂ ಸೂಕ್ತ ಕ್ರಮ ಕೈಗೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು, ಹೆಲ್ಮೆಟ್ ಬಳಕೆ ಮಾಡದ ಸವಾರರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಆದರೂ ಕೂಡಾ ಹೆಲ್ಮೆಟ್ ಇಲ್ಲದ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಹೊಸದಾಗಿ ಬೈಕ್ ಖರೀದಿಸುವ ಗ್ರಾಹಕರು ಕಡ್ಡಾಯವಾಗಿ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಪ್ರಮಾಣಿಕೃತ ಹೆಲ್ಮೆಟ್ ಅನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಬಹುತೇಕ ಬೈಕ್ ಸವಾರರು ಸಾವಿರಾರು ಕೊಟ್ಟು ಬೈಕ್ ಖರೀದಿ ಮಾಡಿದರೂ ಸಹ ಒಂದು ಉತ್ತಮವಾದ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುವ ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನ ಖರೀದಿಸುತ್ತಾರೆ.

ಬೆಂಗಳೂರಿನ ದ್ವಿಚಕ್ರ ವಾಹನ ಚಾಲಕರಿಗೆ ಹೊಸ ರೂಲ್ಸ್ - ಏನದು.?

ಆದ್ರೆ ಅಪಘಾತಗಳ ಸಂದರ್ಭದಲ್ಲಿ ಇದರಿಂದ ಪ್ರಾಣ ಉಳಿಯುವ ಬದಲು ಪ್ರಾಣಕ್ಕೆ ಮತ್ತಷ್ಟು ಸಂಚಕಾರ ತರಲಿವೆ ಎಂಬುವುದು ಗೊತ್ತಿದ್ದರೂ ಸಹ ಅಗ್ಗದ ಬೆಲೆಯ ಹೆಲ್ಮೆಟ್‌ಗಳೇ ಹೆಚ್ಚು ಮಾರಾಟವಾಗುತ್ತಿದ್ದು, ಇಂತಹ ಪ್ರವೃತ್ತಿಯನ್ನು ತಪ್ಪಿಸಲು ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

Source: ETAuto

Most Read Articles

Kannada
English summary
Bengaluru Two Wheeler Riders Without Helmets Will Not Get Fuel At Filling Stations. Read In Kannada
Story first published: Monday, July 29, 2019, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X