Just In
- 40 min ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 3 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 3 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 4 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಬೈಕ್ಗಳಿವು
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಟಾಪ್-10 ಬೈಕ್ ಮಾದರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೀರೋ ಕಂಪನಿಯ ಸ್ಪ್ಲೆಂಡರ್ ಮತ್ತು ಎಚ್ಎಫ್ ಡಿಲಕ್ಸ್ ಪ್ರಯಾಣಿಕರ ಮಾದರಿಗಳೊಂದಿಗೆ ಮಾರಾಟದಲ್ಲಿ ಪ್ರಾಬಲ್ಯ ಮುಂದುವರಿಸಿದೆ ಎಂಬುವುದು ಈ ಪಟ್ಟಿಯಿಂದ ತಿಳಿಯುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಬೈಕ್ಗಳ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಬೈಕ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 244,667 ಯುನಿಟ್ಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 285,508 ಯುನಿಟ್ಗಳು ಮಾರಾಟವಾಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.14 ರಷ್ಟು ಕುಸಿತ ಕಂಡಿದೆ.
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎಚ್ಎಫ್ ಡಿಲಕ್ಸ್ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಿಂದ ಬಿಡುಗಡೆಗೊಳಿಸಿದ ಮತ್ತೊಂದು ಪ್ರಯಾಣಿಕರ ಬೈಕ್ ಇದಾಗಿದೆ. ಹೀರೋ ಎಚ್ಎಫ್ ಡಿಲಕ್ಸ್ ಕಳೆದ ತಿಂಗಳು 195,093 ಯುನಿಟ್ಗಳು ಮಾರಾಟವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 201,240 ಯುನಿಟ್ಗಳು ಮಾರಾಟವಾಗಿತ್ತು. ಕಳೆದ ಸೆಪ್ಟೆಂಬರ್ ಮಾರಾಟವನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.3 ರಷ್ಟು ಕುಸಿತವಾಗಿದೆ.
ಹೋಂಡಾ ಮೋಟರ್ ಸೈಕಲ್ ಕಂಪನಿಯ ಸಿಬಿ ಶೈನ್ನೊಂದಿಗೆ ಮೊದಲ ಮೂರನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಹೋಂಡಾ ಸಿಬಿ ಶೈನ್ ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ 88,893 ಯುನಿಟ್ಗಳು ಮಾರಾಟವಾಗಿದೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 80,612 ಯುನಿಟ್ಗಳು ಮಾರಾಟವಾಗಿವೆ.
ಬಜಾಜ್ ಪಲ್ಸರ್ ಮತ್ತು ಹೀರೋ ಗ್ಲ್ಯಾಮರ್ ನಾಲ್ಕನೇ ಸ್ಥಾನಕ್ಕೆ ಪ್ರಬಲ ಪೈಪೋಟಿಯನ್ನು ನೀಡಿದ್ದಾರೆ. ಆದರೆ ಬಜಾಜ್ ಪಲ್ಸರ್ ನಾಲ್ಕನೇ ಸ್ಥಾನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸರ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 68,068 ಯುನಿಟ್ಗಳು ಮಾರಾಟವಾಗಿತ್ತು. ಹೀರೋ ಗ್ಲ್ಯಾಮರ್ 62,016 ಯುನಿಟ್ಗಳು ಮಾರಾಟವಾಗಿವೆ. ಈ ಎರಡು ದ್ವಿಚಕ್ರ ಬ್ರ್ಯಾಂಡ್ಗಳಾದ ಬಜಾಜ್ ಪಲ್ಸರ್ ಶೇ.23 ಮತ್ತು ಹೀರೋ ಗ್ಲ್ಯಾಮರ್ ಶೇ.25 ರಷ್ಟು ಮಾರಾಟದಲ್ಲಿ ಕುಸಿತವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಬೈಕ್ಗಳ ಪಟ್ಟಿಇಲ್ಲಿವೆ.
ಸ್ಥಾನ | ಮಾದರಿಗಳು | ಸೆ.19 | ಸೆ.18 | ವ್ಯತ್ಯಾಸ |
1 | ಹೀರೋ ಸ್ಪ್ಲೆಂಡರ್ | 2,44,667 | 2,85,508 | -14.30 |
2 | ಹೀರೋ ಎಚ್ಎಫ್ ಡಿಲಕ್ಸ್ | 1,95,093 | 2,01,240 | -3.05 |
3 | ಹೋಂಡಾ ಸಿಬಿ ಶೈನ್ | 88,893 | 80,612 | 10.27 |
4 | ಬಜಾಜ್ ಪಲ್ಸರ್ | 68,068 | 89,374 | -23.84 |
5 | ಹೀರೋ ಗ್ಲ್ಯಾಮರ್ | 62,016 | 82,864 | -25.16 |
6 | ಬಜಾಜ್ ಸಿಟಿ 100 | 51,778 | 89,387 | -42.07 |
7 | ಬಜಾಜ್ ಪ್ಲಾಟಿನಾ | 43,978 | 67,450 | -34.80 |
8 | ಹೀರೋ ಪ್ಯಾಶನ್ | 40,672 | 95,057 | -57.21 |
9 | ಟಿವಿಎಸ್ ಅಪಾಚೆ | 29,889 | 55,460 | -46.11 |
10 | ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 | 29,376 | 44,021 | -33.27 |
ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟವಾದ ಟಾಪ್ 10 ಬೈಕ್ಗಳ ಪಟ್ಟಿಯಲ್ಲಿ ಐದರ ನಂತರ ಸ್ಥಾನವನ್ನು ಬಜಾಜ್ ಸಿಟಿ 100, ಬಜಾಜ್ ಪ್ಲಾಟಿನಾ, ಹೀರೋ ಪ್ಯಾಶನ್, ಟಿವಿಎಸ್ ಅಪಾಚೆ ಮತ್ತು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ಗಳು ಕ್ರಮವಾಗಿ ಸ್ಥಾನವನ್ನು ಪಡೆದುಕೊಂಡಿದೆ. ಬಜಾಜ್ ಕಂಪನಿಯ ಜನಪ್ರಿಯ ಸಿಟಿ 100 ಸೆಪ್ಟೆಂಬರ್ ತಿಂಗಳಲ್ಲಿ 51,778 ಯುನಿಟ್ಗಳು ಮಾರಾಟವಾಗುವ ಮೂಲಕ ಆರನೇ ಸ್ಥಾನವನ್ನು ಪಡೆದುಕೊಂಡಿದೆ.
ಏಳನೇ ಸ್ಥಾನವನ್ನು 43,978 ಯುನಿಟ್ಗಳು ಮಾರಾಟವಾಗುವ ಮೂಲಕ ಬಜಾಜ್ ಪ್ಲಾಟಿನಾ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಹೀರೋ ಪ್ಯಾಶನ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 40,672 ಯುನಿಟ್ಗಳು ಮಾರಾಟವಾಗಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಸೆಪ್ಟೆಂಬರ್ ತಿಂಗಳ ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಟಿವಿಎಸ್ ಅಪಾಚೆ 29,887 ಯುನಿಟ್ಗಳು ಮಾರಾಟವಾಗಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ರಾಯಲ್ ಎನ್ಫೀಲ್ಡ್ 29,376 ಯುನಿಟ್ಗಳು ಮಾರಾಟವಾಗಿದ್ದು, ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಸೆಪ್ಟೆಂಬರ್ ತಿಂಗಳಿಲ್ಲಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತು ಎಚ್ಎಫ್ ಡಿಲಕ್ಸ್ ಮುನ್ನಡೆ ಸಾಧಿಸಿದೆ, ಹೀರೋ ಬ್ರ್ಯಾಂಡ್ ದೇಶಿಯ ಮಾರುಕಟ್ಟೆಯಲ್ಲಿ ಪಾರಪತ್ಯ ಸಾಧಿಸುತ್ತಿದೆ. ಹೋಂಡಾ ಮಾರಾಟವು ಕುಸಿತ ಕಂಡಿದೆ, ಆದರೆ ನಿಧಾನಗತಿಯಲ್ಲಿ ಸುಧಾರಿಸುತ್ತಿದೆ.