ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಭಾರತದಲ್ಲಿ ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯಲ್ಲಿ ಹೋಂಡಾ ನಿರ್ಮಾಣದ ಆಕ್ಟಿವಾ 5ಜಿ ಮಾದರಿಗೆ ಭಾರೀ ಬೇಡಿಕೆಯಿದ್ದು, ಜನವರಿ ತಿಂಗಳ ಬೈಕ್ ಮತ್ತು ಸ್ಕೂಟರ್ ಮಾರಾಟ ಪಟ್ಟಿಯಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

2018ರ ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಆಕ್ಟಿವಾ 5ಜಿ ಮಾದರಿಯು ವರ್ಷಾಂತ್ಯಕ್ಕೆ ಬರೋಬ್ಬರಿ 30,93,481 ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಇದೀಗ 2019ರ ಆರಂಭದಲ್ಲೂ ಭಾರೀ ಪ್ರಮಾಣದಲ್ಲಿ ಬೇಡಿಕೆ ಕಂಡುಬಂದಿದೆ. ಜನವರಿ ಆರಂಭದಲ್ಲೇ 2,13,302 ಆಕ್ಟಿವಾ 5ಜಿ ಸ್ಕೂಟರ್‌ ಮಾರಾಟಗೊಂಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಭಾರತದಲ್ಲಿ ಮೊದಲ ಬಾರಿಗೆ 2000ರಲ್ಲಿ ಮಾರುಕಟ್ಟೆ ಪ್ರವೇಶ ಪಡೆದಿದ್ದ ಆಕ್ಟಿವಾ ಸ್ಕೂಟರ್ ಮಾದರಿಯು ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆ ಬದಲಾವಣೆ ಪಡೆದಿದ್ದಲ್ಲದೇ 3ಜಿ, 4ಜಿ, 5ಜಿ ಸರಣಿಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ಯಶಸ್ವಿಯಾಗಿವೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಕೇವಲ ಸ್ಕೂಟರ್ ಅಷ್ಟೇ ಅಲ್ಲದೇ ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲೂ ಅಗ್ರಸ್ಥಾನದಲ್ಲಿರುವ ಆಕ್ಟಿವಾ 5ಜಿ ಮಾದರಿಯು ಹೀರೋ ಸ್ಪೆಂಡರ್ ಹಿಂದಿಕ್ಕಿ ನಂ.1 ಸ್ಥಾನಕ್ಕೆರಿದ್ದು, ಸ್ಕೂಟರ್ ಮಾರಾಟದಲ್ಲಿ ಬರೋಬ್ಬರಿ ಶೇ. 50ರಷ್ಟು ಪಾಲುನ್ನು ತನ್ನದಾಗಿಸಿಕೊಂಡಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಜನವರಿ ತಿಂಗಳಿನಲ್ಲಿ ಒಟ್ಟು 4,49,470 ಸ್ಕೂಟರ್‌ಗಳು ಮಾರಾಟಗೊಂಡಿದ್ದು, ಇದರಲ್ಲಿ 2,13,302 ಆಕ್ಟಿವಾ 5ಜಿ ಸ್ಕೂಟರ್‌ ಮಾರಾಟವಾಗಿದ್ದಲ್ಲಿ 2ನೇ ಸ್ಥಾನದಲ್ಲಿರುವ ಸುಜುಕಿ ಸಂಸ್ಥೆಯು 54,524 ಆಕ್ಸೆಸ್ ಸ್ಕೂಟರ್‌ಗಳನ್ನು ಮಾರಾಟ ಮೂಲಕ ಹೋಂಡಾ ಸಂಸ್ಥೆಗೆ ತೀವ್ರ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಇನ್ನು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹೋಂಡಾ ಆಕ್ಟಿವಾ 5ಜಿ ಮಾದರಿಯು 109.19 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 60 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ವಿಶೇಷತೆ ಏನು?

ಕೇಂದ್ರ ಸಾರಿಗೆ ಇಲಾಖೆಯು ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಸ ವಾಹನಗಳ ಎಂಜಿನ್ ಮತ್ತು ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಂದಿಗಿಂತಲೂ ಹೊಸ ವೈಶಿಷ್ಟ್ಯತೆಗಳನ್ನು ನೀವು ನೋಡಬಹುದಾಗಿದೆ. ಈ ಹಿಂದೆ 2017ರ ಏಪ್ರಿಲ್ 1ರಿಂದ ಬಿಎಸ್-3 ಎಂಜಿನ್‌ ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿತ್ತು.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಇದೀಗ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೊಸ ನಿಯಮವನ್ನು ಅನುಷ್ಠಾನ ತರಲು ಮುಂದಾಗುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಏಪ್ರಿಲ್ 1, 2019ರಿಂದ ಅನ್ವಯವಾಗುವಂತೆ ಬಿಎಸ್-4 ಎಂಜಿನ್‌ಗಳನ್ನು ಸಹ ನಿಷೇಧಗೊಳಿಸಿ ಸುಧಾರಿತ ಮಾದರಿಯ ಬಿಎಸ್-6 ಎಂಜಿನ್ ಜಾರಿಗೆ ತರಲು ಸಜ್ಜಾಗುತ್ತಿದೆ. ಹೀಗಾಗಿ ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಭವಿಷ್ಯದ ವಾಹನಗಳನ್ನು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸುತ್ತಿವೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಹೋಂಡಾ ಇಂಡಿಯಾ ಸಹ ಇದೇ ನಿಟ್ಟಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ ಮಾದರಿಗಳನ್ನು ಉನ್ನತಿಕರಣ ಮಾಡುತ್ತಿದ್ದು, ಮುಂಬರುವ 2019ರ ವೇಳೆಗೆ ಬಿಡುಗಡೆಯಾಗಲಿರುವ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಎಸ್-6 ಪ್ರೇರಿತ ಫ್ಯೂಲ್ ಇಂಜೆಕ್ಷಡ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಳಿಸಿದೆ.

MOST READ: ಬೆಂಗಳೂರಿನಲ್ಲಿ ಸರಣಿ ಅಪಘಾತ- 7 ಕಾರು, ಒಂದು ಸ್ಕೂಟರ್ ಜಖಂ

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಇದರಿಂದ ಹೊಸ ಸ್ಕೂಟರ್ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆ ಸಾಕಷ್ಟು ಸುಧಾರಣೆಯಾಗಿದ್ದು, ಮೂಲಗಳ ಪ್ರಕಾರ ಹೊಸ ಎಂಜಿನ್ ಜೋಡಣೆಯಿಂದಾಗಿ ಆಕ್ಟಿವಾ 6ಜಿ ಸ್ಕೂಟರ್ ಮೈಲೇಜ್ ಪ್ರಮಾಣವು ಆಕ್ಟಿವಾ 5ಜಿ ಸ್ಕೂಟರ್ ಮೈಲೇಜ್‌ಗಿಂತಲೂ ಶೇ.10ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಹೊಸ ನಿಯಮ ಜಾರಿ ಉದ್ದೇಶ ಏನು?

ವಿಶ್ವಾದ್ಯಂತ ಈಗಾಗಲೇ ಪರಿಸರ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯುತ್ತಿವೆ.

MOST READ: ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಈ ಮೂಲಕ ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣವು ಪರಿಣಾಮಕಾರಿ ತಗ್ಗಲಿದೆ.

ಸ್ಕೂಟರ್ ಮಾರಾಟದಲ್ಲಿ ಹೋಂಡಾ ಆಕ್ಟಿವಾ 5ಜಿ ಮತ್ತೆ ನಂ.1

ಬೆಲೆ ಏರಿಕೆಯ ಬಿಸಿ..!

ಹೌದು, ಬಿಎಸ್ 4 ವಾಹನಗಳಿಂತಲೂ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳ ಎಂಜಿನ್ ಮಾದರಿಯು ಹೆಚ್ಚಿನ ಗುಣಮಟ್ಟ ಪಡೆದುಕೊಂಡಿರಲಿದ್ದು, ಇದರಿಂದ ಸಹಜವಾಗಿಯೇ ಸ್ಕೂಟರ್ ಮತ್ತು ಬೈಕ್ ಬೆಲೆಯಲ್ಲಿ ರೂ. 08 ಸಾವಿರದಿಂದ ರೂ. 12 ಸಾವಿರ ಹೆಚ್ಚಳವಾದಲ್ಲಿ, ರೂ.5 ಲಕ್ಷಕ್ಕೆ ದೊರೆಯುತ್ತಿರುವ ಕಾರುಗಳು ಮುಂಬರುವ ದಿನಗಳಲ್ಲಿ ರೂ.6 ಲಕ್ಷದಿಂದ ರೂ. 7 ಲಕ್ಷಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಹೋಂಡಾ honda
English summary
The Honda Activa 5G still remains the best-selling scooter in India. Read in Kannada.
Story first published: Thursday, February 21, 2019, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X