ಬೈಕ್‍‍ಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚಿಗೆ ನೀವು ಕೆಲವು ದ್ವಿಚಕ್ರಗಳಲ್ಲಿ ಅಪ್‍‍ಡೇಟೆಡ್ ಎ‍‍ಬಿ‍ಎಸ್ ಹಾಗೂ ಸಿ‍‍ಬಿ‍ಎಸ್‍‍ಗಳನ್ನು ಅಳವಡಿಕೆಯ ಬಗ್ಗೆ ಕೇಳಿರುತ್ತಿರಿ. ಈ ಫೀಚರ್‍‍ಗಳನ್ನು ಈಗ ಬಿಡುಗಡೆಯಾಗುತ್ತಿರುವ ದ್ವಿಚಕ್ರ ವಾಹನಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ವಾಹನ ಸವಾರರ ಸುರಕ್ಷತೆಗಾಗಿ ಈ ಫೀಚರ್‍‍ಗಳನ್ನು ಕಡ್ಡಾಯಗೊಳಿಸಲಾಗಿದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಎಬಿ‍ಎಸ್ ಹಾಗೂ ಸಿ‍‍ಬಿ‍ಎಸ್‍‍ಗಳಂತೆ ಇನ್ನೂ ಹಲವಾರು ಫೀಚರ್‍‍ಗಳನ್ನು ಪ್ರೀಮಿಯಂ ಬೈಕುಗಳಲ್ಲಿ ನೀಡಲಾಗುತ್ತದೆ. ಬೈಕಿನ ಬೆಲೆಗಳು ಹೆಚ್ಚಿದಂತೆಲ್ಲಾ, ಅವುಗಳಲ್ಲಿ ದೊರೆಯುವ ಗುಣಮಟ್ಟದ ಫೀಚರ್‍‍ಗಳು ಹೆಚ್ಚಾಗುತ್ತವೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಕೆಲವು ಸುರಕ್ಷಾ ಫೀಚರ್‍‍ಗಳನ್ನು ಎಲೆಕ್ಟ್ರಾನಿಕ್ ಆಗಿ ಮಾಡಲಾಗಿರುತ್ತದೆ. ಅವುಗಳನ್ನು ಆ ದ್ವಿಚಕ್ರ ವಾಹನಗಳಲ್ಲಿರುವ ಬಟನ್‍‍ಗಳಿಂದ ವಾಹನಗಳನ್ನು ಚಲಾಯಿಸುವಾಗಲೇ ಆಕ್ಟಿವೇಟ್ ಅಥವಾ ಡಿ‍ಆಕ್ಟಿವೇಟ್ ಮಾಡಬಹುದು. ದೇಶಿಯ ಮಾರುಕಟ್ಟೆಯಲ್ಲಿರುವ ದ್ವಿಚಕ್ರ ವಾಹನಗಳಲ್ಲಿ ಯಾವೆಲ್ಲಾ ರೀತಿಯ ಸುರಕ್ಷಾ ಫೀಚರ್‍‍ಗಳನ್ನು ನೀಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಎಬಿ‍ಎಸ್

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಫೀಚರ್ ಅನ್ನು ಈಗ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ 125 ಸಿಸಿಗೂ ಹೆಚ್ಚಿನ ದ್ವಿಚಕ್ರ ವಾಹನಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಎಬಿಎಸ್ ಹಠಾತ್ತಾಗಿ ಬ್ರೇಕ್ ಹಿಡಿದಾಗ ಹಿಂಭಾಗದ ಟಯರ್ ಲಾಕ್ ಆಗುವುದನ್ನು ತಡೆಯುತ್ತದೆ. ಇದು ಬೈಕ್ ಸ್ಕಿಡ್ ಆಗುವುದನ್ನು ತಪ್ಪಿಸುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಎಬಿಎಸ್‍‍ಗಳನ್ನು ಫ್ರಂಟ್ ಡಿಸ್ಕ್ ಹಾಗೂ ರೇರ್ ಡಿಸ್ಕ್ ಗಳಲ್ಲಿ ನೀಡಲಾಗುತ್ತದೆ. ಎಬಿಎಸ್ ಇರುವ ಬೈಕಿನಲ್ಲಿ, ನೀವು ಇದ್ದಕ್ಕಿದ್ದಂತೆ ಬ್ರೇಕ್‌ಗಳನ್ನು ಒತ್ತಿದರೆ, ಅದೇ ಸಮಯದಲ್ಲಿ ವ್ಹೀಲ್‍‍ಗಳು ಬೈಕ್‌ ಅನ್ನು ನಿಲ್ಲಿಸುತ್ತ ತಿರುಗುತ್ತಲೇ ಇರುತ್ತವೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಅಡ್ವೆಂಚರ್ ಅಥವಾ ಆಫ್-ರೋಡಿಂಗ್ ಬೈಕುಗಳಲ್ಲಿ ಎಬಿಎಸ್, ಡ್ರಿಫ್ಟಿಂಗ್ ಹಾಗೂ ಹ್ಯಾಂಡ್ಲಿಂಗ್‍‍ಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಈ ಬೈಕ್‌ಗಳಲ್ಲಿ ಸ್ವಿಚೇಬಲ್ ಎಬಿಎಸ್‍‍ಗಳನ್ನು ಅಳವಡಿಸಲಾಗಿರುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿ‍‍ಬಿ‍ಎಸ್

ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಅತ್ಯಂತ ಸುರಕ್ಷಿತವಾದ ಫೀಚರ್‍‍ಗಳಲ್ಲಿ ಒಂದಾಗಿದೆ. ಈ ಫೀಚರ್ ಅನ್ನು 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಪ್ರಯಾಣಿಕ ಬೈಕುಗಳಲ್ಲಿ ನೀಡಲಾಗುತ್ತದೆ. ಸಿಬಿಎಸ್, ಎಬಿಎಸ್‍‍ನಷ್ಟು ಬಲಶಾಲಿಯಾಗಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಮೆಕಾನಿಸಂನಲ್ಲಿ, ಹಿಂಭಾಗದ ಬ್ರೇಕ್‍‍ಗಳನ್ನು ಹಿಡಿದಾಗ, ಮುಂಭಾಗದ ಬ್ರೇಕ್ ಆಟೋಮ್ಯಾಟಿಕ್ ಆಗಿ ನಿಲ್ಲುತ್ತದೆ. ಇದರಿಂದಾಗಿ ಬೈಕ್ ನಿಲ್ಲುವ ದೂರವು ಕಡಿಮೆಯಾಗುತ್ತದೆ. 100-125 ಸಿಸಿಯ ದ್ವಿಚಕ್ರ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುವುದಿಲ್ಲ. ಈ ಕಾರಣಕ್ಕೆ ಈ ವಾಹನಗಳಲ್ಲಿ ಎಬಿಎಸ್‍‍ನ ಅವಶ್ಯಕತೆಯಿಲ್ಲ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಟ್ರಾಕ್ಷನ್ ಕಂಟ್ರೋಲ್

ತೇವವಾದ, ನಯವಾದ ಅಥವಾ ಕೆಸರುಮಯವಾದ ರಸ್ತೆಗಳು ಸಾಮಾನ್ಯವಾಗಿ ಕಡಿಮೆ ಫ್ರಿಕ್ಷನ್ ಹೊಂದಿರುತ್ತವೆ. ಅಂತಹ ರಸ್ತೆಗಳಲ್ಲಿ ವೇಗವಾಗಿ ದ್ವಿ ಚಕ್ರ ವಾಹನಗಳನ್ನು ಚಲಾಯಿಸುವಾಗ, ಸವಾರರು ಜಾರಿಬೀಳುವ ಸಾಧ್ಯತೆಗಳಿರುತ್ತವೆ. ದ್ವಿ ಚಕ್ರ ವಾಹನಗಳ ಟ್ರಾಕ್ಷನ್ ಕಳಪೆಯಾಗಿರುವುದು ಇದಕ್ಕೆ ಕಾರಣ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಇದನ್ನು ತಡೆಗಟ್ಟಲು, ಪ್ರೀಮಿಯಂ ಬೈಕುಗಳಲ್ಲಿ ಟ್ರಾಕ್ಷನ್ ಕಂಟ್ರೋಲ್‍‍ಗಳನ್ನು ಅಳವಡಿಸಲಾಗಿದೆ. ತೇವವಿರುವ ರಸ್ತೆಗಳ ಮೇಲೆ ವೇಗವಾಗಿ ವಾಹನಗಳನ್ನು ಚಲಾಯಿಸುವಾಗ, ಟಾಕ್ಷನ್ ಕಂಟ್ರೋಲ್ ಸಿಸ್ಟಂ ವಾಹನಗಳು ಜಾರದಂತೆ ನೋಡಿಕೊಳ್ಳುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ರೇರ್ ಲಿಫ್ಟ್ ಆಫ್ ಪ್ರೊಟೆಕ್ಷನ್

ಹಿಂಭಾಗದ ಡಿಸ್ಕ್ ಬ್ರೇಕ್ ಹೊಂದಿರುವ ದ್ವಿಚಕ್ರ ವಾಹನಗಳಲ್ಲಿ ರೇರ್ ಲಿಫ್ಟ್ ಆಫ್ ಪ್ರೊಟೆಕ್ಷನ್ (ಆರ್‌ಎಲ್‌ಪಿ) ಕಂಡುಬರುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹಿಂಭಾಗದಲ್ಲಿರುವ ಎಬಿಎಸ್‍‍ಗೆ ಇದು ಅಗ್ಗದ ಆಯ್ಕೆಯಾಗಿದೆ. ಈಗ ಬರುತ್ತಿರುವ 150-200 ಸಿಸಿಯ ಬೈಕುಗಳಲ್ಲಿ ಸಿಂಗಲ್ ಎಬಿಎಸ್ ಹಾಗೂ ಆರ್‌ಎಲ್‌ಪಿಗಳನ್ನು ಹಿಂಭಾಗದಲ್ಲಿ ಕಾಣಬಹುದು. ಈ ಸಿಸ್ಟಂ ಎಮರ್ಜೆನ್ಸಿ ಬ್ರೇಕಿಂಗ್ ಸಂದರ್ಭದಲ್ಲಿ ಹಿಂಭಾಗದ ಟಯರ್ ನೆಲದಿಂದ ಮೇಲಕ್ಕೆಳದಂತೆ ತಡೆಯುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ವೆಹಿಕಲ್ ಸ್ಟಾಬಿಲಿಟಿ ಕಂಟ್ರೋಲ್

ವೆಹಿಕಲ್ ಸ್ಟಾಬಿಲಿಟಿ ಕಂಟ್ರೋಲ್, ಮೂಲತಃ ಅಲ್ಟಿಮೇಟ್ ಸುರಕ್ಷತಾ ಫೀಚರ್ ಆಗಿದೆ. ಇದು ಟ್ರಾಕ್ಷನ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ. ಸರಿಯಾದ ಎಲೆಕ್ಟ್ರಾನಿಕ್‍‍ನ ಸಹಾಯದಿಂದ, ಈ ಸಿಸ್ಟಂ ಲೀನ್ ಆಂಗಲ್, ರೈಡಿಂಗ್ ಸ್ಟೈಲ್ ಹಾಗೂ ರೈಡರ್‍‍ನ ಆಕ್ಸೆಲರೇಷನ್ ಪವರ್ ಅನ್ನು ವಿಶ್ಲೇಷಿಸುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸವಾರನ ನಿಯಮಿತ ಸವಾರಿ ಶೈಲಿಯನ್ನು ಆಧರಿಸಿ, ಈ ಸಿಸ್ಟಂ ಸವಾರರಿಗೆ ಗೊತ್ತಾಗದಂತೆ ಬ್ರೇಕ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಅನ್ನು ನಿಯೋಜಿಸುತ್ತದೆ. ಬ್ರೇಕಿಂಗ್ ಹಾಗೂ ಕಾರ್ನರಿಂಗ್ ಸಮಯದಲ್ಲಿ ಈ ಸಿಸ್ಟಂ ಗರಿಷ್ಠ ಸ್ಟಾಬಿಲಿಟಿ ಹಾಗೂ ಬ್ರೇಕಿಂಗ್‍‍ಗಳನ್ನು ಖಚಿತ ಪಡಿಸುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

ವ್ಹೀಲಿ ಕಂಟ್ರೋಲ್

ಇದೊಂದು ಪ್ರೀಮಿಯಂ ಫೀಚರ್ ಆಗಿದೆ. ಈ ಫೀಚರ್ ಸಾಮಾನ್ಯವಾದ ಬೈಕುಗಳಲ್ಲಿ ಕಂಡುಬರುವುದಿಲ್ಲ. ಡುಕಾಟಿಗಳಂತಹ ಬೈಕ್‌ಗಳಲ್ಲಿ ಕಂಡುಬರುವ, ವ್ಹೀಲಿ ಕಂಟ್ರೋಲ್ ಸಡನ್ನಾಗಿ ವೇಗವನ್ನು ಹೆಚ್ಚಿಸುವುದರಿಂದ ಮುಂಭಾಗದ ಟಯರ್‌ಗಳು ಮೇಲಕ್ಕೆಳದಂತೆ ನೋಡಿಕೊಳ್ಳುತ್ತದೆ.

ಬೈಕುಗಳಲ್ಲಿರುವ ಸುರಕ್ಷಾ ಫೀಚರ್‍‍ಗಳ ಬಗ್ಗೆ ನಿಮಗೆಷ್ಟು ಗೊತ್ತು?

1000-1200 ಸಿಸಿಯ ನಾಲ್ಕು ಸಿಲಿಂಡರ್ ಸೂಪರ್‌ಬೈಕುಗಳಲ್ಲಿ, ಆಕ್ಸೆಲರೇಷನ್ ಪವರ್ ಸಾಕಷ್ಟು ಬಲಶಾಲಿಯಾಗಿರುತ್ತದೆ. ಥ್ರಾಟಲ್ ಟ್ವಿಸ್ಟಿಂಗ್ ಸಣ್ಣದಾದರೂ ಸಹ, ಬೈಕ್ ಮುಂದಕ್ಕೆ ಚಲಿಸುತ್ತದೆ.

Most Read Articles

Kannada
English summary
Bike safety features what are they how they work abs traction control other details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X