ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಆರ್ಥಿಕ ಹಿಂಜರಿತದಿಂದ ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಆಟೋಮೊಬೈಲ್ ಕ್ಷೇತ್ರ ದುಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಆಗಸ್ಟ್ ತಿಂಗಳ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆಯಾಗಿದೆ. ಆಟೋಮೊಬೈಲ್ ಕ್ಷೇತ್ರ ಸಂಕಷ್ಟದಲ್ಲಿರಬೇಕಾದರೆ ದ್ವಿಚಕ್ರ ವಾಹನ ಉತ್ಪಾದಕರು ಮಾತ್ರ ಮಾರುಕಟ್ಟೆಯಲ್ಲಿ ಕುಸಿತ ಕಾಣದೆ ಬೆಳವಣಿಗೆ ಕಾಣುವಲ್ಲಿ ಕೆಲವು ಕಂಪನಿಗಳು ಯಶಸ್ವಿಯಾಗಿದೆ.

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಇದರ ನಡುವೆಯೇ ಭಾರತದ ದಿಗ್ಗಜ ದ್ವಿಚಕ್ರ ಉತ್ಪಾದಕ ಸಂಸ್ಥೆಗಳಾದ ರಾಯಲ್ ಎನ್‍‍ಫೀಲ್ಡ್, ಟಿ‍ವಿಎಸ್, ಬಜಾಜ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಆಗಸ್ಟ್‌ ತಿಂಗಳ ವಾಹನ ಮಾರಾಟದಲ್ಲಿ ಭಾರೀ ಇಳಿಕೆ ದಾಖಳಾಗಿವೆ. ದೇಶಿಯ ಮಾರಕಟ್ಟೆಯ ಪ್ರಮುಖ 5 ದ್ವಿಚಕ್ರ ವಾಹನದ ಆಗಸ್ಟ್ ತಿಂಗಳ ಮಾರಾಟದ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಹೀರೋ ಮೋಟೊಕಾರ್ಪ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತಮ್ಮ ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ 543,406 ಯುನಿಟ್‍ಗಳು ಮಾರಾಟವಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಕಳೆದ ಜುಲೈ ತಿಂಗಳಿಗೆ ಹೋಲಿಸಿದರೆ ಶೇ 1.5 ಬೆಳವಣಿಗೆ ಕಂಡಿದೆ. ಹೀರೋ ಮೊಟೊಕಾರ್ಪ್ ಹಲವಾರು ಆಫರ್‍‍ಗಳನ್ನು ನೀಡಿದ್ದರು, ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿಯ ಹೀರೋ ಸ್ಪ್ಲೆಂಡರ್ ಅತೀ ಹೆಚ್ಚು ಮಾರಾಟವಾದ ದಿಚಕ್ರವಾಹನವಾಗಿದೆ.

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ರಾಯಲ್ ಎನ್‍‍ಫೀಲ್ಡ್

ಚೆನ್ನೈ ಮೂಲದ ಉತ್ಪಾದಕ ಘಟಕ ಹೊಂದಿರುವ ರಾಯಲ್ ಎನ್‍ಫೀಲ್ಡ್ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ಶೇ. 24 ರಷ್ಟು ಕುಸಿತ ಕಂಡಿದೆ. ರಾಯಲ್ ಎನ್‍ಫೀಲ್ಡ್ ಆಗಸ್ಟ್ ತಿಂಗಳಲ್ಲಿ 5.904 ಯುನಿಟ್ ಮಾರಾಟವಾಗಿರುವುದು ವರದಿಯಾಗಿದೆ. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 69,377 ಯಿನಿಟ್‍‍ಗಳು ಮಾರಾಟವಾಗಿದೆ.

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ರಾಯಲ್ ಎನ್‍ಫೀಲ್ಡ್ ಬೈಕನ್ನು ದಿನಾಂಕದಿಂದ ವರ್ಷಕ್ಕೆ ಹೊಲಿಸಿದರೆ ಶೇ.10ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಕಂಪನಿಯು ಕಳೆದ ವರ್ಷ ಎಪ್ರಿಲ್‍‍ನಿಂದ ಆಗಸ್ಟ್ ವರೆಗೆ 363,801 ಯುನಿಟ್‍‍ಗಳು ಮಾರಾಟವಾಗಿದ್ದು, ಈ ವರ್ಷ ಅದೇ ಅವಧಿಯಲ್ಲಿ 290,798 ಯುನಿಟ್‍‍ಗಳು ಮಾರಾಟವಾಗಿದೆ.

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಬಜಾಜ್ ಆಟೋ ಇಂಡಿಯ

ಆಟೋಮೊಬೈಲ್ ಕ್ಷೇತ್ರದಲ್ಲಿ ಹಿಂಜರಿತದಲ್ಲಿ ಬಜಾಜ್ ಕಂಪನಿಗೂ ಬಿಸಿ ಮುಟ್ಟಿದೆ. ಜನಪ್ರಿಯ ಬಜಾಜ್ ಕಂಪನಿಯು ಆಗಸ್ಟ್ ತಿಂಗಳಲ್ಲಿ ಶೇ.21 ರಷ್ಟುಕುಸಿತ ಕಂಡಿದೆ. ಕಂಪನಿಯು ಆಗಸ್ಟ್ ತಿಂಗಳಲ್ಲಿ 173.024 ಯುನಿಟ್‍‍ಗಳನ್ನು ಮಾರಾಟ ಮಾಡಿದೆ. ಆದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 218,437 ಯುನಿಟ್‍‍ಗಳು ಮಾರಾಟವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಟಿವಿ‍ಎಸ್ ಮೋಟಾರ್ಸ್

ಟಿ‍ವಿಎಸ್ ಸಂಸ್ಥೆಯು ದ್ವಿಚಕ್ರ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ 330,076 ಯುನಿಟ್ ಮಾರಾಟವಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಇದೆ ತಿಂಗಳು 330,076 ಯುನಿಟ್‍‍ಗಳು ಮಾರಾಟವಾಗಿದೆ ಟಿವಿಎಸ್ ಮೋಟಾರ್ಸ್ ಕಂಪನಿಯ ಮಾರಾಟ ಉಲ್ಬಣಿಸಿ ಶೇ.15.37 ರಷ್ಟು ಕುಸಿತ ಕಂಡಿದೆ. ಡೊಮೆಸ್ಟಿಕ್ ಮಾರ್ಕೆಟ್‍ನಲ್ಲಿ ಮಾತ್ರ ಕಳೆದ ಆಗಸ್ಟ್ ತಿಂಗಳಲ್ಲಿ 219,528 ಯುನಿಟ್ ಮಾರಾಟವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 275,688 ಯುನಿಟ್‍‍‍ಗಳು ಮಾರಾಟವಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಇಂಡಿಯ

ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿದ್ದರು ಸುಜುಕಿ ಕಂಪನಿಯು ದ್ವಿಚಕ್ರ ವಾಹನ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ 71,631 ಯುನಿಟ್ ಮಾರಾಟವಾಗಿದೆ. ದ್ವಿಚಕ್ರ ಮಾರಾಟದಲ್ಲಿ ಶೇ. 2.2 ಬೆಳವಣಿಕೆ ಕಂಡಿದೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯ ಪ್ರೈವೇಟ್ ಲಿಮಿಟೆಡ್‌ನ ಉಪಧ್ಯಾಕ್ಷ ದೇವಶಿಶ್ ಹಂಡಾ ಮತನಾಡಿ, ಇದು ಪ್ರವಾಹದ ರೀತಿ ಅಲ್ಪಾವಧಿಯ ಪ್ರಭಾವ ಮಾತ್ರ, ಕಳೆದ 10 ತಿಂಗಳಿನಿಂದ ಆಟೋಮೊಬೈಲ್ ಕ್ಷತ್ರದ ಕುಸಿತದ ನಡುವೆ ಸುಜುಕಿ ಇತ್ತಿಚೀಗೆ ಬೆಳವಣಿಗೆಯನ್ನು ಕಾಣುತ್ತಿದೆ. ಗ್ರಾಹಕರ ಮನೋಭಾವಗಳೇ ಉದ್ಯಮದ ಕುಸಿತಕ್ಕೆ ಕಾರಣಗಳಲ್ಲಿ ಒಂದಾಗಿದೆ. ಈ ಸವಾಲಿನ ಕಾಲದಲ್ಲಿಯೂ ಸಹ ಸುಜುಕಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿದ್ದವಾಗಿದೆ ಎಂದು ಹೇಳಿದರು.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಆಗಸ್ಟ್ ತಿಂಗಳಿನ ದ್ವಿಚಕ್ರ ವಾಹನ ಮಾರಾಟದ ವರದಿ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ. ಎಲ್ಲಾ ಪ್ರಮುಖ ದ್ವಿಚಕ್ರ ಕಂಪನಿಗಳು ತಿಂಗಳಿಗೊಮ್ಮೆ ಮಾರಟದಲ್ಲಿ ಕುಸಿಯುತ್ತಿದೆ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಹಬ್ಬದ ಸಮಯದಲ್ಲಿ ಹೆಚ್ಚಿನ ಆಫರ್‍‍ಗಳಿಂದ ಬೈಕ್ ಮಾರಾಟದಲ್ಲಿ ಸುಧಾರಿಸಬಹುದು ಎಂದು ದ್ವಿಚಕ್ರ ಸಂಸ್ಥೆಗಳು ನಿರೀಕ್ಷಿಸಿದೆ. ಕೆಲವು ಪ್ರಮುಖ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ.

Most Read Articles

Kannada
English summary
Bike Sales Report August 2019: Hero MotoCorp And Suzuki Record Growth Despite Industry Slowdown - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X