ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಬಿಎಂಡಬ್ಲ್ಯೂ ಜಿ310ಆರ್ ಮತ್ತು ಜಿ310ಜಿಎಸ್ ಬೈಕ್‍ಗಳು ದೇಶಿಯವಾಗಿ ಉತ್ಪಾದನೆಯಾದರೂ ಸಹ ಈ ಬೈಕ್‍ಗಳಿಗೆ ವಿದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ವಿದೇಶಿ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390 ಬೈಕ್‍ಗಳಿಗೆ ಪೈಪೋಟಿ ನೀಡಲಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಇವುಗಳು ಬಿಎಂಡಬ್ಲ್ಯೂ ಸಂಸ್ಥೆಯಲ್ಲಿನ ಪ್ರೀಮಿಯಂ ಬೈಕ್‍ಗಳಾಗಿ ಮಾರಾಟವಾಗುತ್ತಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಹೊಸ ಜಿ310ಆರ್ ಬೈಕ್‍ಗೆ ಹೊಸದಾಗಿ ಕಾಸ್ಮಿಕ್ ಕಲರ್ ಥೀಮ್ ಮತ್ತು ಜಿ310ಜಿಎಸ್ ಬೈಕ್‍ಗಳಿಗೆ ಸ್ಟ್ರಟೊ ಬ್ಲೂ ಮೆಟಾಲಿಕ್ ಬಣ್ಣವನ್ನು ನೀಡಲಾಗಿದೆ. ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310ಆರ್ ಬೈಕ್ ಅನ್ನು ಕಸ್ಟಮರ್‍‍ಗಳ ಫೀಡ್‍‍ಬ್ಯಾಕ್‍ನ ಮೇಲೆ ನೀಡಲಾಗಿದ್ದು, ಈ ಬೈಕಿನ ಪ್ಯುಯೆಲ್ ಟ್ಯಾಂಕ್ ಎಕ್ಸ್ಟೆನ್ಷನ್, ಫ್ರಂಟ್ ಮಡ್‍‍ಗಾರ್ಡ್ ಮತ್ತು ಟೈಲ್‍ಪೀಸ್‍ಗಳ ಮೇಲೆ ಬಿಳಿ ಬಣ್ಣವನ್ನು ನೀಡಲಾಗಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಹಾಗೆಯೆ ಬೇರೆಲ್ಲ ಭಾಗಗಳನ್ನು ಕಾಸ್ಮಿಕ್ ಬ್ಲಾಕ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಟೈಲ್‍ಪೀಸ್ ಮತ್ತು ಟ್ಯಾಂಕ್ ಎಕ್ಸ್ಟೆನ್ಷನ್‍ ಭಾಗಗಳಲ್ಲಿ ರೆಡ್ ಡೆಕಲ್ಸ್ ಅನ್ನು ನೀಡಲಾಗಿದೆ. ಹ್ಸ ಬಣ್ಣವು ಈ ಬೈಕಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಇನ್ನು ಜಿ310ಜಿಎಸ್ ಬೈಕ್‍ಗಳನ್ನು ಇದೀಗ ಗ್ರಾಹಕರು ಸ್ಟ್ರಾಟೊ ಬ್ಲೂ ಬಣ್ಣದಲ್ಲಿ ಖರೀದಿ ಮಾಡಬಹುದಾಗಿದೆ. ಈ ಬೈಕ್‍ಗಳು ಕೇವಲ ಹೊಸ ಬಣ್ಣವನ್ನು ಪಡೆದಿದ್ದು, ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್‌ನಿಂದ ಭಾರತೀಯ ಗ್ರಾಹಕರಿಗಾಗಿಯೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದವು.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಜಿ 310 ಜಿಎಸ್(ಅಡ್ವೆಂಚರ್)

ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್‌ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್‌ಗಳನ್ನು ಹೊಸ ಜಿ 310 ಜಿಎಸ್ ಬೈಕ್‌ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್‌ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.

ಹೊಸ ಬಣ್ಣ ಪಡೆದ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍ಗಳು

313 ಸಿಸಿ ಇನ್‌ಲೈನ್ ಸಿಂಗಲ್ ಸಿಲಿಂಡರ್ ಎಂಜಿನ್‌ಗಳು 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

Most Read Articles

Kannada
English summary
BMW G310R And G310Gs Bikes Updated With New Colors. Read In Kannada
Story first published: Saturday, July 6, 2019, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X