ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ನೀವು ಬೆಂಗಳೂರಿನಲ್ಲಿ ಪ್ರಯಾಣಿಸುತ್ತಿದ್ದರೆ, ಮೆಟ್ರೋ ನಿಲ್ದಾಣಗಳ ಹೊರಗೆ ನಿಲ್ಲಿಸಿರುವ ಹಳದಿ ಹಾಗೂ ಕೆಂಪು ಬೌನ್ಸ್ ಬಣ್ಣದ ಸ್ಕೂಟರ್‌ಗಳನ್ನು ಗಮನಿಸಿರುತ್ತೀರಿ. ಬೆಂಗಳೂರಿನಂತೆ ಬೌನ್ಸ್ ಇತರ 11 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಮೂಲಕ ಗ್ರಾಹಕರ ದೈನಂದಿನ ಪ್ರಯಾಣಕ್ಕೆ ನೆರವಾಗುತ್ತದೆ.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಬೌನ್ಸ್‌ನ ಕೀ ಇಲ್ಲದ ಸ್ಕೂಟರ್‌ಗಳು, ಗ್ರಾಹಕರಿಗೆ ಅಪ್ಲಿಕೇಶನ್‌ನ ಮೂಲಕ ಎಲ್ಲಿಂದಲಾದರೂ ಸ್ಕೂಟರ್ ಹತ್ತಿಕೊಂಡು ತಮ್ಮ ಸ್ಥಳವನ್ನು ತಲುಪಿದ ನಂತರ ಅದನ್ನು ಯಾವುದೇ ಅಲ್ಲಿಯೇ ಬಿಟ್ಟು ಹೋಗುವ ಅನುಕೂಲವನ್ನು ನೀಡುತ್ತವೆ.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಬೌನ್ಸ್ ಅನ್ನು ವಿವೇಕಾನಂದ, ವರುಣ್ ಅಗ್ನಿ ಹಾಗೂ ಅನಿಲ್ ಜಿ ಎಂಬುವವರು ಸ್ಥಾಪಿಸಿದರು. 2014ರಲ್ಲಿ ಮೊದಲ ಬಾರಿಗೆ ಈ ಮೂವರೂ ಸೇರಿ ವಿಕೇಡ್ ರೈಡ್ ಎಂಬ ಪ್ರಿಮೀಯಂ ಬೈಕ್ ಪ್ಲಾಟ್ ಫಾರಂ ಅನ್ನು ಆರಂಭಿಸಿದರು.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಬೌನ್ಸ್ ಅನ್ನು ಮೊದಲು ಮೆಟ್ರೋ ಬೈಕ್ ಎಂದು ಕರೆಯಲಾಗುತ್ತಿತ್ತು. ಅನಿಲ್‍‍ರವರು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಬುಕ್ಕಿಂಗ್ ಮಾಡಿ, 12 ತಿಂಗಳು ಕಾದ ನಂತರ ವಿಕೇಡ್ ರೈಡ್ ಅನ್ನು ಆರಂಭಿಸುವ ಆಲೋಚನೆ ಅವರಿಗೆ ಬಂದಿತು.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಬೌನ್ಸ್ ಈಗ ಎಲೆಕ್ಟ್ರಿಕ್ ಸೆಗ್‍‍ಮೆಂಟಿಗೆ ಕಾಲಿಡಲು ಬಯಸಿದೆ. ಈ ಹಿನ್ನೆಲೆಯಲ್ಲಿ ಎಕ್ಸಿಕಾಂ ಟೆಲಿ ಸಿಸ್ಟಂನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ ಬೌನ್ಸ್ ತಿಳಿಸಿದೆ. ಬೌನ್ಸ್ ಸದ್ಯಕ್ಕೆ ಬೆಂಗಳೂರಿನಲ್ಲಿ 8,000ಕ್ಕೂ ಹೆಚ್ಚು ಸ್ಕೂಟರ್‌ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಮುಂದಿನ 12 ತಿಂಗಳ ಅವಧಿಯಲ್ಲಿ ಪೂರೈಕೆಯನ್ನು ಹೆಚ್ಚಿಸಲು ನೋಡುತ್ತಿದೆ. ಕಂಪನಿಯು ಡಾಕ್ಲೆಸ್ ಸ್ಕೂಟರ್‌ಗಳ ಮೂಲಕ ಗ್ರಾಹಕರಿಗೆ ಅವರು ಬಯಸಿದಲ್ಲಿಗೆ ಕರೆದೊಯ್ಯುವ ಅವಕಾಶವನ್ನು ನೀಡುತ್ತದೆ.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಈ ಸೇವೆಯಲ್ಲಿ ಗ್ರಾಹಕರು ತಾವು ಬಯಸಿದ ಜಾಗದಿಂದ ಪಿಕ್ ಅಪ್ ಪಡೆದು, ತಾವು ಇಳಿಯಬೇಕೆಂದಿರುವ ಕಡೆ ಸ್ಕೂಟರ್ ಅನ್ನು ನಿಲ್ಲಿಸಬಹುದಾಗಿದೆ. ಬೌನ್ಸ್ ಸಿಇಒ ವಿವೇಕಾನಂದ ಹಲ್ಲೆಕೆರೆರವರು ಮಾತನಾಡಿ, ಭಾರತವು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಕ್ರಾಂತಿ ಮಾಡುತ್ತಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ನಾವು ಈ ಬದಲಾವಣೆಗಳನ್ನು ಇನ್ನಷ್ಟು ವೇಗಗೊಳಿಸಲು ಬಯಸಿದ್ದೇವೆ. ಶೇರ್ ಮೊಬಿಲಿಟಿಗಿಂತ ಮೊದಲು ಎಲೆಕ್ಟ್ರಿಕ್ ಮೊಬಿಲಿಟಿ ಹೊರಬರಲಿದೆ ಎಂದು ಹೇಳಿದ್ದಾರೆ. ಎಕ್ಸಿಕಾಂ ವ್ಯವಸ್ಥಾಪಕ ನಿರ್ದೇಶಕರಾದ ಅನಂತ್ ನಹಾಟಾರವರು ಸಹ ಮಾತನಾಡಿದ್ದಾರೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಅತ್ಯಾಧುನಿಕವಾದ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ ಸೂಕ್ತವಾದ ಚಾರ್ಜಿಂಗ್‍‍ಗಳನ್ನು ಒದಗಿಸುವ ಮೂಲಕ ಈ ಎಲೆಕ್ಟ್ರಿಕ್ ಪ್ರಯಾಣದಲ್ಲಿ ಬೌನ್ಸ್ ಕಂಪನಿಯನ್ನು ಬೆಂಬಲಿಸಲು ಎಕ್ಸಿಕಾಂ ಕಂಪನಿಯು ಹೆಮ್ಮೆ ಪಡುತ್ತದೆ ಎಂದು ಹೇಳಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಇದು ಭಾರತದಲ್ಲಿ ಶೇರ್ ಮೊಬಿಲಿಟಿ ಸೆಗ್‍‍ಮೆಂಟಿನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಅತಿದೊಡ್ಡ ನಿಯೋಜನೆಯಾಗಿದೆ. ಮಾಲಿನ್ಯ ಮುಕ್ತ ಹಾಗೂ ಸ್ವಚ್ಛವಾದ ಮೊಬಿಲಿಟಿಯನ್ನು ಸಾಧಿಸುವ ನಮ್ಮ ಗುರಿಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಎಕ್ಸಿಕಾಂ ಟೆಲಿಸಿಸ್ಟಂ ಜೊತೆ ಕೈಜೋಡಿಸಿದ ಬೌನ್ಸ್

ಬೆಂಗಳೂರಿನಲ್ಲಿ ಸೇವೆಗಳನ್ನು ಆರಂಭಿಸಿದ 10 ತಿಂಗಳಲ್ಲಿ, ಬೌನ್ಸ್ 50 ಲಕ್ಷಕ್ಕೂ ಹೆಚ್ಚು ಸವಾರಿಗಳನ್ನು ನೀಡಿದೆ. ಇದರಲ್ಲಿ 3 ಕೋಟಿಗೂ ಹೆಚ್ಚು ಕಿ.ಮೀ ಸಂಚರಿಸಲಾಗಿದೆ. ಎಕ್ಸಿಕಾಂ ಇಪ್ಪತ್ತು ವರ್ಷಗಳಿಂದ ಪವರ್ ಎಲೆಕ್ಟ್ರಾನಿಕ್ಸ್ ಹಾಗೂ ಎನರ್ಜಿ ಸಿಸ್ಟಂಗಳ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿದೆ. ಈಗ ಎಲೆಕ್ಟ್ರಿಕ್ ವಾಹನಗಳಲ್ಲಿಯೂ ಪ್ರಮುಖ ಸ್ಥಾನವನ್ನು ಹೊಂದುವ ಉದ್ದೇಶವನ್ನು ಹೊಂದಿದೆ.

Most Read Articles

Kannada
English summary
Bounce mobility enters ev segment with exicom tele systems - Read in Kannada
Story first published: Wednesday, November 20, 2019, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X