ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಹೊಸ ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಭಾರತದಲ್ಲಿರುವ ಎಲ್ಲಾ ಕಂಪನಿಗಳು ತಮ್ಮ ವಾಹನಗಳಲ್ಲಿ ಮುಂದಿನ ವರ್ಷದ ಏಪ್ರಿಲ್‍‍ನಿಂದ ಕಡ್ಡಾಯವಾಗಿ ಬಿ‍ಎಸ್ 6 ಎಂಜಿನ್‍‍ಗಳನ್ನು ಅಳವಡಿಸಿಕೊಳ್ಳಬೇಕಿದೆ.

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ಬಿ‍ಎಸ್ 6 ಪ್ರಮಾಣಪತ್ರವನ್ನು ಪಡೆಯಬೇಕಿದೆ. ಹೋಂಡಾ ಕಂಪನಿಯು ಸಹ ತನ್ನ ಸಿಬಿ ಶೈನ್ 125 ಬೈಕ್ ಅನ್ನು ಬಿ‍ಎಸ್6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಿದೆ.

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಇಂಡಿಯನ್ ಆಟೋಸ್ ಬ್ಲಾಗ್ ಹೋಂಡಾ ಸಿಬಿ ಶೈನ್ 125 ಬೈಕಿಗೆ ಸಂಬಂಧಿಸಿದಂತೆ ಪವರ್ ಬಗೆಗಿನ ಮಾಹಿತಿಗಳನ್ನು ಬಹಿರಂಗ ಪಡಿಸಿದೆ. ಹೊಸ ಹೋಂಡಾ ಸಿಬಿ ಶೈನ್ 125 ಬೈಕಿನಲ್ಲಿರುವ ಬಿ‍ಎಸ್ 6 ಎಂಜಿನ್ 10.72 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿರುವ ಸಿಬಿ ಶೈನ್ 125 ಬೈಕಿನಲ್ಲಿರುವ ಬಿ‍ಎಸ್ 4 ಎಂಜಿನ್ 10.16 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿದೆ.

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಹೊಸ ಎಂಜಿನ್ ಹೊರತಾಗಿ, ಈ ಬೈಕ್ ಆನ್ ಬೋರ್ಡ್ ಡಯಾಗ್ನಾಸ್ಟಿಕ್ಸ್ 1 (ಒ‍‍ಬಿ‍‍ಡಿ - 1) ಹೊಂದಿರಲಿದೆ. ಈಗ ಬಹಿರಂಗವಾಗಿರುವ ದಾಖಲೆಯಲ್ಲಿ ಹೊಸ ಶೈನ್ 125 ಬೈಕಿನ ಗಾತ್ರದಲ್ಲಿ ಬದಲಾವಣೆಗಳಾಗಿರುವುದನ್ನು ಕಾಣಬಹುದು.

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಹೊಸ ಬೈಕಿನ ವ್ಹೀಲ್‍‍ಬೇಸ್ ಹಳೆಯ ಬೈಕಿನ ವ್ಹೀಲ್‍‍ಬೇಸ್‍‍ಗಿಂತ 19 ಎಂಎಂ ಹೆಚ್ಚಾಗಿದೆ. ಹೊಸ ಬೈಕ್ 1,285 ಎಂಎಂ ವ್ಹೀಲ್‍‍ಬೇಸ್ ಹೊಂದಿರಲಿದೆ. ಉದ್ದವು ಹಳೆ ಬೈಕಿಗಿಂತ 8 ಎಂಎಂ ನಷ್ಟು ಹೆಚ್ಚಾಗಿ 2,020 ಎಂಎಂ ಇರಲಿದೆ. ಅಗಲವು 23 ಎಂಎಂನಷ್ಟು ಹೆಚ್ಚಾಗಿ 785 ಎಂಎಂ ಇದ್ದರೆ, ಎತ್ತರವು 13 ಎಂಎಂನಷ್ಟು ಹೆಚ್ಚಾಗಿ 1,103 ಎಂಎಂ ಇರಲಿದೆ.

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಮಾರುಕಟ್ಟೆಯಲ್ಲಿರುವ ಹೋಂಡಾ ಸಿಬಿ ಶೈನ್ 125 ಬೈಕಿನ ಎಂಜಿನ್ 4 ಸ್ಪೀಡ್‍‍ನ ಗೇರ್‍‍ಬಾಕ್ಸ್ ಹೊಂದಿದೆ. ಈ ಬೈಕಿನ ತೂಕವು 123 ಕೆ.ಜಿಗಳಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಲಿರುವ ಬೈಕಿನ ತೂಕದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಹೋಂಡಾ 2 ವ್ಹೀಲರ್ಸ್ ಇಂಡಿಯಾ, ಹೊಸ ಸಿಬಿ ಶೈನ್ 125 ಬೈಕ್ ಅನ್ನು - ಮುಂಭಾಗ ಹಾಗೂ ಹಿಂಭಾಗದ ಡ್ರಮ್ ಹೊಂದಿರುವ ಸ್ಟಾಂಡರ್ಡ್, ಹಿಂಭಾಗ ಮತ್ತು ಮುಂಭಾಗದಲ್ಲಿ ಡ್ರಮ್ ಹೊಂದಿರುವ ಡೀಲಕ್ಸ್ ಹಾಗೂ ಮುಂಭಾಗದಲ್ಲಿ ಡಿಸ್ಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿರುವ ಡೀಲಕ್ಸ್ ಎಂಬ ಮೂರು ಆವೃತ್ತಿಗಳಲ್ಲಿ ಮಾರಾಟ ಮಾಡಲಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಪ್ರೀಮಿಯಂ ಬೈಕ್ ಆದ ಹೋಂಡಾ ಸಿಬಿ ಶೈನ್ ಎಸ್‍‍ಪಿ ಬೈಕ್ ಸಹ ಅಷ್ಟೇ ಪ್ರಮಾಣದ ಪವರ್ ಉತ್ಪಾದಿಸುವ ಸಾಧ್ಯತೆಗಳಿವೆ. ಸಿಬಿ ಶೈನ್ 125 ಬೈಕಿನಲ್ಲಿ 4 ಸ್ಪೀಡ್‍‍ನ ಗೇರ್‍‍ಬಾಕ್ಸ್ ಯುನಿಟ್‍‍ಗಳಿದ್ದರೆ, ಸಿಬಿ ಶೈನ್ ಎಸ್‍‍ಪಿ ಬೈಕಿನಲ್ಲಿ 5 ಸ್ಪೀಡ್‍‍ನ ಗೇರ್‍‍ಬಾಕ್ಸ್ ಯುನಿಟ್ ಇರಲಿದೆ. ಸಿಬಿ ಶೈನ್ ಎಸ್‌ಪಿ ಬೈಕ್ ಸಿಬಿ ಶೈನ್‌ನೊಂದಿಗೆ ಬಿಡಿ ಭಾಗಗಳನ್ನು ಹಂಚಿಕೊಳ್ಳುವುದನ್ನು ಗಮನಿಸಿದರೆ, ಸಿಬಿ ಶೈನ್ ಎಸ್‍‍ಪಿ ಬೈಕಿನ ಗಾತ್ರದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬಹಿರಂಗವಾಯ್ತು ಸಿಬಿ ಶೈನ್ ಬಿ‍ಎಸ್ 6 ಬೈಕಿನ ಮಾಹಿತಿ

ಹೋಂಡಾ ಕಂಪನಿಯು ಇತ್ತೀಚೆಗಷ್ಟೇ ತನ್ನ ಮೊದಲ ಬಿಎಸ್ 6 ಎಂಜಿನ್ ವಾಹನವಾದ ಬಿಎಸ್ 6 ಆಕ್ಟಿವಾ 125 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಪ್ರೀಮಿಯಂ ಸ್ಕೂಟರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.67,490ಗಳಾಗಿದೆ. ಮಾದರಿಗಳನ್ನು ಅವಲಂಬಿಸಿ ಈ ಸ್ಕೂಟರಿನ ಬೆಲೆಯು ಸುಮಾರು ರೂ.7,000ಗಳವರೆಗೆ ಹೆಚ್ಚಿರಲಿದೆ. ಇದೇ ರೀತಿಯಲ್ಲಿ ಹೋಂಡಾ ಸಿಬಿ ಶೈನ್ 125 ಬೈಕಿನ ಬೆಲೆಗಳು ಸಹ ಏರಿಕೆಯಾಗುವ ಸಾಧ್ಯತೆಗಳಿವೆ.

Source: Indianautosblog

Most Read Articles

Kannada
English summary
Honda CB Shine 125 BS6 power output leaked - Read in Kannada
Story first published: Sunday, October 20, 2019, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X