Just In
- 25 min ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 2 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 3 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
ಕಳೆದ ವಾರವಷ್ಟೇ ಯಮಹಾ ನಿರ್ಮಾಣದ ಆರ್15 ವೈಜೆಡ್ಎಫ್ ವಿ.30 ಬಿಎಸ್-6 ಮಾದರಿಯು ಬಿಡುಗಡೆಗೊಂಡಿದ್ದು, ಇದೀಗ ಹೊಸ ಬೈಕ್ ಡೀಲರ್ಸ್ ಯಾರ್ಡ್ನಲ್ಲಿ ಸ್ಟಾಕ್ ಮಾಡಲಾಗುತ್ತಿದೆ. ಹೊಸ ಬೈಕ್ ವಿತರಣೆಗೆ ಇದೇ ತಿಂಗಳು ಕೊನೆಯ ವಾರದಲ್ಲಿ ಚಾಲನೆ ಸಿಗಲಿದ್ದು, ಹೊಸ ಬೈಕ್ ದುಬಾರಿ ಬೆಲೆ ಪಡೆದುಕೊಂಡಿದೆ.
ಹೊಸ ಎಂಜಿನ್ ಪ್ರೇರಿತ ಆರ್15 ವಿ3.0 ಬೈಕ್ ಮಾದರಿಯು ಹಳೆಯ ಮಾದರಿಗಿಂತಲೂ ಕೆಲವು ಮಹತ್ವದ ಬದಲಾವಣೆಗಳನ್ನು ಪಡೆದುಕೊಂಡಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.1.45 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಹೊಸ ಬೈಕ್ ಬೆಲೆಯು ಬಿಎಸ್-4 ಮಾದರಿಗಿಂತ ರೂ.3 ಸಾವಿರದಷ್ಟು ದುಬಾರಿಯಾಗಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಬೈಕಿನ ಎಂಜಿನ್ ಪರ್ಫಾಮೆನ್ಸ್ನಲ್ಲಿ ಅಚ್ಚರಿ ಎನ್ನುವಂತೆ ಕಡಿತಗೊಳಿಸಲಾಗಿದೆ.
150ಸಿಸಿ ಎಂಜಿನ್ ಬೈಕ್ಗಳಲ್ಲಿ ಬಲಿಷ್ಠ ಬೈಕ್ ಮಾದರಿಯಾಗಿರುವ ಆರ್15 ಮಾದರಿಯು 2008ರಲ್ಲಿನ ಮೊದಲ ಬಿಡುಗಡೆ ನಂತರ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದೀಗ ಮತ್ತೊಂದು ಬದಲಾವಣೆಯೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.
2011ರಲ್ಲಿ ಆರ್15 ವಿ2.0 ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಯಮಹಾ ಸಂಸ್ಥೆಯು 2018ರಲ್ಲಿ ಆರ್15 ವಿ3.0 ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಬಿಎಸ್-6 ಕಡ್ಡಾಯದಿಂದಾಗಿ ಹೊಸ ಎಂಜಿನ್ ಪರ್ಫಾಮೆನ್ಸ್ ಬದಲಾವಣೆ ತಂದಿದ್ದು, ಎಂಜಿನ್ ಹೊರತುಪಡಿಸಿ ಇನ್ನುಳಿದಂತೆ ಬಹುತೇಕ ತಾಂತ್ರಿಕ ಸೌಲಭ್ಯವು ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.
ಬಿಎಸ್-6 ಎಂಜಿನ್ ಆರ್15 ವಿ3.0 ಮಾದರಿಯು 155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 18.3-ಬಿಎಚ್ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಹೊಸ ಬೈಕ್ ಮಾದರಿಯು ಬಿಎಸ್-4 ಆವೃತ್ತಿಗಿಂತಲೂ ಕಡಿಮೆ ಪರ್ಫಾಮೆನ್ಸ್ ಹೊಂದಿದ್ದು, 0.7 ನಷ್ಟು ಬಿಎಚ್ಪಿ ಮತ್ತು 0.6 ನಷ್ಟು ಎನ್ಎಂ ಟಾರ್ಕ್ ಅನ್ನು ಕಡಿತಗೊಳಿಸಲಾಗಿದೆ.
ಆದರೆ ಬಿಎಸ್-4 ಬೈಕ್ ಮಾದರಿಗಿಂತಲೂ ಹೊಸ ಬೈಕ್ ಮಾದರಿಯಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ ಆಗಿ ನೀಡಲಾಗಿದ್ದು, ಆರಂಭಿಕ ಆವೃತ್ತಿಯಲ್ಲೇ ಇದೀಗ ಸ್ಲಿಪ್ಪರ್ ಕ್ಲಚ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ನೀಡಲಾಗಿದೆ.
ಹಾಗೆಯೇ ಹೊಸ ಎಂಜಿನ್ ಜೋಡಣೆಗಾಗಿ ಚಾರ್ಸಿಸ್ ಮತ್ತು ಫ್ಯೂಲ್ ಟ್ಯಾಂಕ್ ವಿನ್ಯಾಸದಲ್ಲಿ ತುಸು ಬದಲಾವಣೆಗೊಳಿಸಲಾಗಿದ್ದು, ಆರಾಮದಾಯಕ ಬೈಕ್ ಸವಾರಿಗೆ ಇದು ಮತ್ತಷ್ಟು ಅನುಕೂಲಕರವಾಗಿದೆ ಎನ್ನಲಾಗಿದೆ.
ಇದರೊಂದಿಗೆ ಹೊಸ ಬೈಕಿನಲ್ಲಿ ಈ ಹಿಂದಿನಂತೆಯೇ ಟ್ವಿನ್ ಎಲ್ಇಡಿ ಹೆಡ್ಲ್ಯಾಂಪ್ಸ್, ಫ್ಲಕ್ಸ್ ರ್ಯಾಮ್ ಏರ್ ಇನ್ಟೆಕ್, ಎಲ್ಇಡಿ ಟೈಲ್ಲ್ಯಾಂಪ್ ಸೌಲಭ್ಯದೊಂದಿಗೆ ಶಾರ್ಫ್ ಡಿಸೈನ್ ಹೊಂದಿದ್ದು, ಹೊಸ ಮಾದರಿಯ ಟೈರ್, ಡ್ಯುಯಲ್ ಹಾರ್ನ್ ಸೌಲಭ್ಯವು ಗಮನಸೆಳೆಯಲಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ
ಇನ್ನು ಹೊಸ ಆರ್15 ವಿ3.0 ಬೈಕ್ ಖರೀದಿಗಾಗಿ ಆಸಕ್ತ ಗ್ರಾಹಕರು ರೂ.1 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದ್ದು, ಶೀಘ್ರದಲ್ಲೇ ಹೊಸ ಬೈಕ್ ವಿತರಣೆಗೆ ಅಧಿಕೃತ ಚಾಲನೆ ನೀಡುವುದಾಗಿ ಯಮಹಾ ಸಂಸ್ಥೆಯೇ ಮಾಹಿತಿ ನೀಡಿದೆ.
MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್
ಆರ್15 ವಿ3.0 ಬೈಕ್ ಮಾದರಿಯಲ್ಲದೇ ಇದೇ ತಿಂಗಳಾಂತ್ಯಕ್ಕೆ ಇನ್ನುಳಿದ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಬಿಎಸ್-6 ಎಂಜಿನ್ನೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ರೂ.3 ಸಾವಿರದಿಂದ ರೂ.6 ಸಾವಿರದಷ್ಟು ದುಬಾರಿಯಾಗಲಿವೆ.