ದಯವಿಟ್ಟು ಇತ್ತ ಗಮನಿಸಿ- ವಾಹನಗಳ ವಿಮಾ ಮೊತ್ತದಲ್ಲಿ ಏರಿಕೆ..!

ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ (IRDAI) ಸಂಸ್ಥೆಯು ವಾಹನಗಳ ಥರ್ಡ್ ಪಾರ್ಟಿ ವಿಮಾ ದರಗಳನ್ನು ಏರಿಕೆ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಪ್ರೀಮಿಯಂ ವಾಹನಗಳ ಮಾಲೀಕರಿಗೆ ಭರ್ಜರಿ ಶಾಕ್ ನೀಡಲಾಗಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

2019-20ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಹೊಸ ವಿಮಾ ದರಗಳನ್ನು ಪ್ರಕಟಿಸಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಆ್ಯಂಡ್ ಡೆವೆಲಪ್ಮೆಂಟ್ ಅಥಾರಟಿ ಆಫ್ ಇಂಡಿಯಾ ಸಂಸ್ಥೆಯು ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು, ವಾಹನಗಳ ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ವಿಮಾ ದರವನ್ನು ಶೇಕಡಾವಾರು ಹೆಚ್ಚಳ ಮಾಡಲಾಗಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

75ಸಿಸಿ ಒಳಗಿನ ಬೈಕ್‌ಗಳ ಮೇಲೆ..

ಭಾರತದಲ್ಲಿ 75 ಸಿಸಿಗಿಂತ ಕಡಿಮೆ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಯಾರೋಬ್ಬರು ಬಳಕೆ ಮಾಡದ್ದಿದ್ದರೂ ಸಹ ನಿಯಮಗಳಿಗೆ ಅನುಗುಣವಾಗಿ ಶೇ.12.9 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದು ಯಾರಿಗೂ ಹೊರೆಯಾಗುವ ಪ್ರಶ್ನೆಯೇ ಇಲ್ಲ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

75ಸಿಸಿ ಯಿಂದ 150ಸಿಸಿ ಒಳಗಿನ ಬೈಕ್‌ಗಳ ಮೇಲೆ..

ಭಾರತದಲ್ಲಿ ಬಳಕೆಯಾಗುವ ಬಹುತೇಕ ಬೈಕ್ ಮಾದರಿಗಳು 75ಸಿಸಿಯಿಂದ 150ಸಿಸಿ ಸಾಮರ್ಥ್ಯವನ್ನು ಹೊಂದಿದ್ದು, 75ಸಿಸಿ ಯಿಂದ 150ಸಿಸಿ ಸಾಮಾರ್ಥ್ಯದ ಬೈಕ್ ಮತ್ತು ಸ್ಕೂಟರ್‌ಗಳ ವಿಮಾ ಮೊತ್ತದಲ್ಲಿ ಶೇ. 4.4 ರಷ್ಟ ಹೆಚ್ಚಳ ಮಾಡಲಾಗಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

150ಸಿಸಿ ಯಿಂದ 350ಸಿಸಿ ಒಳಗಿನ ಬೈಕ್‌ಗಳ ಮೇಲೆ..

ಮೇಲೆ ಹೇಳಿದ ಹಾಗೆ, ಪ್ರೀಮಿಯಂ ಬೈಕ್ ಮಾಲೀಕರಿಗೆ ಭರ್ಜರಿ ಶಾಕ್ ನೀಡಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು 150ಸಿಸಿ ಯಿಂದ 350ಸಿಸಿ ಸ್ಮೆಗೆಂಟ್‌ನಲ್ಲಿರುವ ಬರುವ ಪ್ರೀಮಿಯಂ ಬೈಕ್ ವಿಮಾ ದರಗಳಲ್ಲಿ ಶೇ.21.1 ರಷ್ಟು ಹೆಚ್ಚಳ ಮಾಡಿದ್ದು, ಪ್ರೀಮಿಯಂ ದರಗಳು ಬಿಸಿ ತುಪ್ಪವಾಗಲಿವೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

350 ಸಿಸಿ ಮೇಲ್ಪಟ ಬೈಕ್‌ಗಳ ಮೇಲೆ..

ಈ ಹಿಂದಿನಂತೆಯೇ 350 ಸಿಸಿ ಮೇಲ್ಪಟ್ಟ ಬೈಕ್ ವಿಮಾದರದಲ್ಲಿ ಯಾವುದೇ ಬದಲಾವಣೆ ಮಾಡದ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ರೂ.2,323 ನಿಶ್ಚಿತ ಮೊತ್ತವನ್ನು ನಿಗದಿಪಡಿಸಿದ್ದು, ಇದು ಮಧ್ಯಮ ವರ್ಗದವರಿಗೆ ಯಾವ ಪರಿಣಾಮವನ್ನು ಬಿರದು.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

ಇನ್ನು ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳಿಗೂ ವಿಮಾ ದರವನ್ನು ನಿಗದಿಪಡಿಸಿದ್ದು, 3ಕಿಲೋ ವ್ಯಾಟ್‌ಗಿಂತಲೂ ಕಡಿಮೆ ಬ್ಯಾಟರಿ ಸೌಲಭ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.410 ಮತ್ತು 3ಕಿಲೋ ವ್ಯಾಟ್‌ನಿಂದ 7ಕಿಲೋ ವ್ಯಾಟ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.639 ನಿಗದಿ ಮಾಡಲಾಗಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

ಹಾಗೆಯೇ 7ಕಿಲೋ ವ್ಯಾಟ್‌‌ನಿಂದ 16ಕಿಲೋ ವ್ಯಾಟ್ ಮಧ್ಯದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.1,014 ಮತ್ತು 16ಕಿಲೋ ವ್ಯಾಟ್ ಮೇಲ್ಪಟ್ಟ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರೂ.1,975 ನಿಗದಿಪಡಿಸಿರುವ ಇನ್ಸುರೆನ್ಸ್ ರೆಗ್ಯೂಲೆಟರಿ ಸಂಸ್ಥೆಯು ಹೊಸ ದರಗಳನ್ನು ಇದೇ ತಿಂಗಳು ಜೂನ್ 16ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

ಕಾರುಗಳ ವಿಮಾ ದರದಲ್ಲೂ ಹೆಚ್ಚಳ

1 ಸಾವಿರ ಸಿಸಿಗಿಂತಲೂ ಕಡಿಮೆ ಸಾಮಾರ್ಥ್ಯದ ಕಾರುಗಳ ವಿಮಾ ದರವು ಶೇ.12ರಷ್ಟು ಮತ್ತು1 ಸಾವಿರದಿಂದ 1,500 ಸಿಸಿ ನಡುವಿನ ಕಾರುಗಳ ಮೇಲೆ ಶೇ.12.5ರಷ್ಟು ಹೆಚ್ಚಳವಾಗಿದ್ದರೆ, 1500ಸಿಸಿ ಮೇಲ್ಪಟ್ಟ ಕಾರುಗಳಿಗೆ ರೂ. 7,890 ನಿಶ್ಚಿತ ಮೊತ್ತವನ್ನು ನಿಗದಿಪಡಿಸಲಾಗಿದೆ.

ದಯವಿಟ್ಟು ಇತ್ತ ಗಮನಿಸಿ- ಇಂದಿನಿಂದಲೇ ವಾಹನಗಳ ವಿಮೆ ಮೊತ್ತದಲ್ಲಿ ಏರಿಕೆ..!

ವಾಹನಗಳ ಅಪಘಾತ ಸಂಭವಿಸಿದಂತಹ ಪರಿಸ್ಥಿತಿಯಲ್ಲಿ ದೈಹಿಕ ಗಾಯ ಅಥವಾ ವಾಹನಗಳಿಗೆ ಹಾನಿಯಂಟಾದ ಸಂದರ್ಭದಲ್ಲಿ ಹಣಕಾಸಿನ ರಕ್ಷಣೆ ಒದಗಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದ್ದು, ವಾಹನ ವಿಮೆ ನೆರವಿನಿಂದ ವಾಹನಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದರ ದುರಸ್ತಿಗೆ ಸಂಭವಿಸಬಹುದಾದ ವೆಚ್ಚವನ್ನು ಹಾಗೆಯೇ ವ್ಯಕ್ತಿಯ ಚಿಕಿತ್ಸೆಗೆ ಬೇಕಾಗಿರುವ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

Most Read Articles

Kannada
English summary
Car and two-wheeler insurance increase. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X